ಇಂದು ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ವಿಶೇಷ ಸಂಪುಟ ಸಭೆ: ಸರ್ಕಾರದ ಅಜೆಂಡಾಗಳೇನು?

ಆರಂಭಿಕ ಪ್ರಸ್ತಾವನೆಯು 103 ಕೋಟಿ ರೂಪಾಯಿಗಳ ವೆಚ್ಚವನ್ನು ನಿಗದಿಪಡಿಸಿದ್ದರೂ, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಬಜೆಟ್ ಹಂಚಿಕೆಯಾಗಬಹುದು.
CM Siddaramaiah with colleagues at Nadibetta
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಬೆಟ್ಟದ ವಿಶೇಷ ಸಂಪುಟ ಸಭೆಗೆ ತೆರಳುವ ಮುನ್ನ ಭೋಗ ನಂದೀಶ್ವರ ದೇವಸ್ಥಾನಕ್ಕೆ ಸಂಪುಟ ಸಹದ್ಯೋಗಿಗಳ ಜೊತೆ ಭೇಟಿ ನೀಡಿ ನಂತರ ಫೋಟೋ ತೆಗೆಸಿಕೊಂಡರು.
Updated on

ಬೆಂಗಳೂರು, ಚಿಕ್ಕಬಳ್ಳಾಪುರ: ನಂದಿ ಬೆಟ್ಟದ ಸುಂದರ ಮಯೂರ ಸಭಾಂಗಣದಲ್ಲಿ ಇಂದು ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಗೆ ಸಚಿವರು ಒಟ್ಟು ಸೇರುತ್ತಿದ್ದಾರೆ.

ಮಾಗಡಿಯಲ್ಲಿರುವ ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಕೋಟೆಯನ್ನು ಪುನಃಸ್ಥಾಪಿಸಲು 103 ಕೋಟಿ ರೂಪಾಯಿಗಳ ಪ್ರಸ್ತಾವನೆ ಇಂದಿನ ಸಭೆಯ ಕೇಂದ್ರಬಿಂದುವಾಗಿದೆ. ಹಲವು ಶತಮಾನಗಳ ನಂತರವೂ ಪೂರ್ತಿಯಾಗದೆ ನಿಂತಿರುವ ಕೋಟೆ ಬೆಂಗಳೂರಿನ ಮೂಲದ ಸಂಕೇತವಾಗಿದೆ. ಸರ್ಕಾರ ಈಗ ಅದನ್ನು ಪುನರುಜ್ಜೀವನಗೊಳಿಸಲು, ಸುಂದರಗೊಳಿಸಲು ಮತ್ತು ಅದರ ಮೂಲ ವೈಭವವನ್ನು ಪುನಃಸ್ಥಾಪಿಸಲು ಬಯಸುತ್ತಿದೆ.

ಆರಂಭಿಕ ಪ್ರಸ್ತಾವನೆಯು 103 ಕೋಟಿ ರೂಪಾಯಿಗಳ ವೆಚ್ಚವನ್ನು ನಿಗದಿಪಡಿಸಿದ್ದರೂ, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಬಜೆಟ್ ಹಂಚಿಕೆಯಾಗಬಹುದು.

ಸ್ಥಳವನ್ನು ಪರಿಗಣಿಸಿ, ಚಿಕ್ಕಬಳ್ಳಾಪುರ ಮತ್ತು ನೆರೆಯ ಕೋಲಾರ ಜಿಲ್ಲೆಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಕೋಲಾರದಲ್ಲಿ, ಹಾಸ್ಟೆಲ್ ನಿರ್ಮಿಸಲು ಕುರುಬ ಸಂಘಕ್ಕೆ ಭೂಮಿಯನ್ನು ವರ್ಗಾಯಿಸಲು ಸಚಿವ ಸಂಪುಟ ಸಜ್ಜಾಗಿದೆ, ಈ ಭೂಮಿಯನ್ನು ಕೋಲಾರ ನಗರ ಅಭಿವೃದ್ಧಿ ಪ್ರಾಧಿಕಾರವು ಹಸ್ತಾಂತರಿಸಲು ಪ್ರಸ್ತಾಪಿಸಿದೆ. ಬಾಗೇಪಲ್ಲಿಯನ್ನು "ಭಾಗ್ಯನಗರ" ಎಂದು ಮರುನಾಮಕರಣ ಮಾಡುವ ಬಹುಕಾಲದ ಬೇಡಿಕೆಯ ಕುರಿತು ಚರ್ಚಿಸುವ ಸಾಧ್ಯತೆಯಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡುವ ಹೊಸ ಒತ್ತಾಯವೂ ಇದೆ, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಬೃಹತ್ ಭೂ ಆಸ್ತಿಗಳನ್ನು ಹೊಸ ಕಂಪನಿಯಾದ ಬಿಎಲ್ ಎಎಲ್ ಗೆ ವರ್ಗಾಯಿಸಲು ಪ್ರಯತ್ನಿಸುತ್ತಿದೆ.

CM Siddaramaiah with colleagues at Nadibetta
ನಂದಿ ಬೆಟ್ಟದಿಂದ ವಿಧಾನಸಭೆಗೆ ಸಚಿವ ಸಂಪುಟ ಸಭೆ ಹಠಾತ್ ಶಿಫ್ಟ್: ಶಾಶ್ವತ ನೀರಾವರಿ ಹೋರಾಟ ಸಮಿತಿ ಒತ್ತಡ?

ಚಿಕ್ಕಬಳ್ಳಾಪುರದ ನೀರಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲಾಗುತ್ತಿದೆ. ರೈತರ ಅಸಮಾಧಾನ ಹೊರತಾಗಿಯೂ ಎತ್ತಿನಹೊಳೆ ಯೋಜನೆ ವಿಳಂಬದಲ್ಲಿ ಸಿಲುಕಿಕೊಂಡಿದ್ದರೂ, ರಾಜ್ಯವು ಹೊಸ ಪ್ರಸ್ತಾಪವನ್ನು ಹೊಂದಿದೆ: ಹೆಬ್ಬಾಳ-ನಾಗವಾರ ಕಣಿವೆ ಯೋಜನೆಯ ಎರಡನೇ ಹಂತದಿಂದ ಜಿಲ್ಲೆಯ 164 ಟ್ಯಾಂಕ್‌ಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುವುದಾಗಿದೆ. 137.10 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆಯು ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲ್ಲೂಕು ಮತ್ತು ಹತ್ತಿರದ ಪ್ರದೇಶಗಳಲ್ಲಿನ ಜಲಮೂಲಗಳನ್ನು ತುಂಬಿಸುವ ಗುರಿಯನ್ನು, ಜನವರಿ ಮತ್ತು ಮೇ, 2026 ರ ನಡುವೆ ಬರಗಾಲವನ್ನು ನೀಗಿಸುವ ಗುರಿಯನ್ನು ಹೊಂದಿದೆ.

ಸರ್ಕಾರಿ ಬಾಲಕರ ಕಾಲೇಜಿಗೆ ಮೂಲಸೌಕರ್ಯ ನವೀಕರಣಕ್ಕಾಗಿ 40 ಕೋಟಿ ರೂಪಾಯಿಗಳನ್ನು ಪಡೆಯುವುದು, ಮಹಿಳಾ ಕಾಲೇಜು ಕುಡಿಯುವ ನೀರು ಮತ್ತು ನೈರ್ಮಲ್ಯ ಸೇರಿದಂತೆ ಅಗತ್ಯ ಸೌಲಭ್ಯಗಳಿಗಾಗಿ 20 ಕೋಟಿ ರೂಪಾಯಿಗಳನ್ನು ಕೋರಲಾಗುತ್ತದೆ. ಅಮರಾವತಿ ಗ್ರಾಮದಿಂದ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ತನ್ನ ಹೊಸ ಕ್ಯಾಂಪಸ್‌ನ 2 ನೇ ಹಂತಕ್ಕೆ 123.5 ಕೋಟಿ ರೂಪಾಯಿಗಳನ್ನು ಕೋರಿದೆ. ಆಡಳಿತಾತ್ಮಕ ಅನುಮೋದನೆ ಪಡೆಯಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com