ರಾಯಚೂರು: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣಕ್ಕೆ ವಿಫಲ ಯತ್ನ; ಓರ್ವ ಶಂಕಿತನ ಬಂಧನ!

ಬುಧವಾರ ಮುಂಜಾನೆ ರೋಗಿಗಳ ಪರಿಚಾರಕರು ನಿದ್ರೆಗೆ ಜಾರಿದ ಸಂದರ್ಭದಲ್ಲಿ ರಾಯಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಮಹಿಳೆಯರ ವೇಷದಲ್ಲಿ ಆಗಮಿಸಿದ ಗುಂಪೊಂದು ನಾಲ್ಕನೇ ಮಹಡಿಯಲ್ಲಿರುವ ಹೆರಿಗೆ ವಾರ್ಡ್ ಗೆ ತೆರಳಿದೆ.
one suspect caught
ಶಂಕಿತನನ್ನು ಬಂಧಿಸಿದ ಪೊಲೀಸರು
Updated on

ರಾಯಚೂರು: ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸುವ ಯತ್ನವನ್ನು ರೋಗಿಗಳ ಪರಿಚಾರಕರು (attendant) ಮತ್ತು ಆಸ್ಪತ್ರೆಗೆ ಬಂದಿದ್ದ ಸಂದರ್ಶಕರು (visitors)ವಿಫಲಗೊಳಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬುಧವಾರ ಮುಂಜಾನೆ ರೋಗಿಗಳ ಪರಿಚಾರಕರು ನಿದ್ರೆಗೆ ಜಾರಿದ ಸಂದರ್ಭದಲ್ಲಿ ರಾಯಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS)ಮಹಿಳೆಯರ ವೇಷದಲ್ಲಿ ಆಗಮಿಸಿದ ಗುಂಪೊಂದು ನಾಲ್ಕನೇ ಮಹಡಿಯಲ್ಲಿರುವ ಹೆರಿಗೆ ವಾರ್ಡ್ ಗೆ ತೆರಳಿದೆ.

ಅವರಲ್ಲಿ ಓರ್ವ ನವ ಜಾತ ಶಿಶುವನ್ನು ಅಪಹರಿಸಲು ಯತ್ನಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಪರಿಚಾರಕರೊಬ್ಬರು ಅನುಮಾನಗೊಂಡು ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ಮಹಿಳೆಯ ವೇಷದಲ್ಲಿದ್ದ ವ್ಯಕ್ತಿಯ ಜೊತೆಗೆ ಕೆಲಹೊತ್ತು ವಾಗ್ವಾದ ನಡೆಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಇತರ ಇಬ್ಬರು ಅಪಹರಣ ಯತ್ನದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವೇಳೆ ಗೃಹರಕ್ಷಕ ಸಿಬ್ಬಂದಿ ಕರ್ತವ್ಯದಲ್ಲಿ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

one suspect caught
ಬೆಂಗಳೂರು: ಶಿವಾಜಿ ನಗರದಲ್ಲಿ ಫುಟ್‌ಪಾತ್‌ ಮೇಲೆ ತಂದೆಯೊಂದಿಗೆ ಮಲಗಿದ್ದ ಮಗು ಅಪಹರಣ

ನಂತರ ಸಾರ್ವಜನಿಕರು ಬಂಧಿತ ಆರೋಪಿಯನ್ನು ಮಾರ್ಕೆಟ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com