UPI ಡೇಟಾ ಆಧರಿಸಿ GST ನೊಟೀಸ್: ತೆರಿಗೆ ಇಲಾಖೆ

ತೆರಿಗೆ ವಿಧಿಸಬಹುದಾದ ವಸ್ತುಗಳ ಮೇಲೆ ಮಾತ್ರ ತೆರಿಗೆ ಅನ್ವಯಿಸುತ್ತಿದ್ದರೂ, ಈ ವಹಿವಾಟು ತೆರಿಗೆ ವಿಧಿಸಬಹುದಾದ ಮತ್ತು ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳಿಗೆ ಅನ್ವಯವಾಗುತ್ತದೆ.
Representative image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ವ್ಯಾಪಾರಿಗಳಿಗೆ ನೊಟೀಸ್ ಜಾರಿ ಮಾಡಿರುವುದಕ್ಕೆ ಸ್ಪಷ್ಟೀಕರಣ ನೀಡಿರುವ ರಾಜ್ಯ ಸರ್ಕಾರ, ಸರಕು ಮತ್ತು ಸೇವಾ ತೆರಿಗೆ (GST) ಕಾನೂನುಗಳ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಏಕೀಕೃತ ಪಾವತಿ ಇಂಟರ್ಫೇಸ್ (UPI) ಸೇವಾ ಪೂರೈಕೆದಾರರಿಂದ ಸಂಗ್ರಹಿಸಿದ ಅಂಕಿಅಂಶ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಜುಲೈ 1,2017 ರಿಂದ ಜಾರಿಯಲ್ಲಿರುವ ಜಿಎಸ್‌ಟಿ ಕಾಯ್ದೆ ಪ್ರಕಾರ, ವಾರ್ಷಿಕ ವಹಿವಾಟು 40 ಲಕ್ಷ ರೂಪಾಯಿ (ಸರಕುಗಳಿಗೆ) ಅಥವಾ 20 ಲಕ್ಷ (ಸೇವೆಗಳಿಗೆ) ಮೀರುವ ಪೂರೈಕೆದಾರರು ಜಿಎಸ್‌ಟಿ ತೆರಿಗೆ ವಿಧಾನಕ್ಕೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ತೆರಿಗೆ ವಿಧಿಸಬಹುದಾದ ವಸ್ತುಗಳ ಮೇಲೆ ಮಾತ್ರ ತೆರಿಗೆ ಅನ್ವಯಿಸುತ್ತಿದ್ದರೂ, ಈ ವಹಿವಾಟು ತೆರಿಗೆ ವಿಧಿಸಬಹುದಾದ ಮತ್ತು ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳಿಗೆ ಅನ್ವಯವಾಗುತ್ತದೆ.

Representative image
GST ಜಾರಿಗೆ ಬಂದು 8 ವರ್ಷ: ಭಾರತದ ಉದ್ಯಮ ವಲಯ ಕಲಿತ 8 ಪಾಠಗಳೇನು?

ಬ್ರೆಡ್‌ನಂತಹ ಅಗತ್ಯ ವಸ್ತುಗಳು ಜಿಎಸ್‌ಟಿಯಿಂದ ವಿನಾಯಿತಿ ಪಡೆದಿದ್ದರೂ, ಪ್ಯಾಕ್ ಮಾಡಿದ ಸ್ನ್ಯಾಕ್ಸ್ ಗಳಿಗೆ ಶೇಕಡಾ 5ರಷ್ಟು ತೆರಿಗೆ ಹೇರಲಾಗುತ್ತದೆ. 2021–22 ರಿಂದ 2024–25 ರವರೆಗಿನ ಯುಪಿಐ ಆಧಾರಿತ ವಹಿವಾಟು ದತ್ತಾಂಶವು ಅನೇಕ ವ್ಯಾಪಾರಿಗಳು ನಗದು ಮತ್ತು ಇತರ ಪಾವತಿ ವಿಧಾನಗಳನ್ನು ಹೊರತುಪಡಿಸಿ, ಯುಪಿಐ ಮೂಲಕ 40 ಲಕ್ಷಕ್ಕೂ ಹೆಚ್ಚು ಪಡೆದಿದ್ದಾರೆ ಎಂದು ತೋರಿಸಿದೆ, ಅಂದರೆ ಇನ್ನೂ ಹೆಚ್ಚಿನ ಒಟ್ಟು ವಹಿವಾಟನ್ನು ಸೂಚಿಸುತ್ತದೆ. ಈ ದತ್ತಾಂಶವನ್ನು ಆಧರಿಸಿ, ತೆರಿಗೆ ಇಲಾಖೆ ವ್ಯಾಪಾರಿಗಳಿಗೆ ನೊಟೀಸ್ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com