ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಸಂಚಾರ-ಅಪರಾಧ ವಿಭಾಗದ ಮುಖ್ಯಸ್ಥರ ಬದಲಾವಣೆ

ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ದಕ್ಷಿಣ ಕನ್ನಡದ ಕಾನೂನು ಸುವ್ಯವಸ್ಥೆ ಡಿಸಿಪಿ ಜಿತೇಂದ್ರ ಕುಮಾರ್ ಸೇರಿದಂತೆ 35 ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, 35 ಐಪಿಎಸ್ ​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಒಂದೆಡೆಯಾದರೆ, ಮತ್ತೊಂದೆಡೆ ಜೈಲುಗಳಲ್ಲಿ ನಡೆಯುತ್ತಿರುವ ವಿಪರೀತ ಅಕ್ರಮಗಳ ಬಗ್ಗೆ ಸರಣಿ ವರದಿಗಳಾಗುತ್ತಿರುವ ಸಂದರ್ಭದಲ್ಲೇ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ. ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿಯೂ ಸರ್ಜರಿ ನಡೆದಿದೆ.

ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ದಕ್ಷಿಣ ಕನ್ನಡದ ಕಾನೂನು ಸುವ್ಯವಸ್ಥೆ ಡಿಸಿಪಿ ಜಿತೇಂದ್ರ ಕುಮಾರ್ ಸೇರಿದಂತೆ 35 ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

Representational image
ಮಾನಸಿಕ ಅನಾರೋಗ್ಯ ಕೈದಿಗಳನ್ನು ಆರೋಗ್ಯ ಸೌಲಭ್ಯಗಳಿಗೆ ವರ್ಗಾವಣೆ: ಸರ್ಕಾರದಿಂದ ಕಾರ್ಯವಿಧಾನ ಬಿಡುಗಡೆ

ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರೂ ಕೇಂದ್ರ ವಿಭಾಗ

ಅಜಯ್ ಹಿಲೋರಿ – ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ

ಪರಶುರಾಮ್ – ಡಿಸಿಪಿ, ವೈಟ್ ಫೀಲ್ಡ್ ವಿಭಾಗ

ಕಾರ್ತಿಕ್ ರೆಡ್ಡಿ – ಜಂಟಿ ಪೊಲೀಸ್ ಆಯುಕ್ತ, ಸಂಚಾರ ವಿಭಾಗ

ಅನೂಪ್ ಶೆಟ್ಟಿ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ, ಸಂಚಾರ

ಶಿವಪ್ರಕಾಶ್ ದೇವರಾಜು – ಲೋಕಾಯುಕ್ತ ಎಸ್​ಪಿ, ಬೆಂಗಳೂರು

ಜಯಪ್ರಕಾಶ್ – ಬೆಂಗಳೂರು ಉತ್ತರ ಸಂಚಾರ ವಿಭಾಗ, ಡಿಸಿಪಿ

ಎಂ.ನಾರಾಯಣ್ – ಎಲೆಕ್ಟ್ರಾನಿಕ್ ಸಿಟಿ ವಿಭಾಗ, ಡಿಸಿಪಿ

ಅನಿತಾ.ಬಿ ಹದ್ದಣ್ಣನವರ್ – ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ

ಸೈದಲು ಅಡಾವತ್ – ಸಿಐಡಿ, ಎಸ್​​ಪಿ

ಬಾಬಾ ಸಾಬ್ ನ್ಯಾಮಗೌಡ – ಬೆಂಗಳೂರು ಉತ್ತರ ವಿಭಾಗ, ಡಿಸಿಪಿ

ನಾಗೇಶ್ – ಬೆಂಗಳೂರು ವಾಯುವ್ಯ ವಿಭಾಗ, ಡಿಸಿಪಿ

ಶ್ರೀಹರಿ ಬಾಬು – ಬೆಂಗಳೂರು ಸಿಸಿಬಿ ಡಿಸಿಪಿ

ಸೌಮ್ಯಲತಾ – ಸಿಎಆರ್ ಹೆಡ್ ಕ್ವಾರ್ಟರ್ಸ್, ಡಿಸಿಪಿ

ಎಂ.ಎನ್.ಅನುಚೇತ್ – ಡಿಐಜಿ ನೇಮಕಾತಿ ವಿಭಾಗ

ವರ್ತಿಕಾ ಕಟೀಯಾರ್ – ಬಳ್ಳಾರಿ ವಲಯ, ಡಿಐಜಿ

ಶಾಂತರಾಜು – ಎಸ್​​ಪಿ, ಗುಪ್ತಚರ ಇಲಾಖೆ

ಸಿರಿಗೌರಿ – ಎಸ್​​ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ

ಸುಮನ್.ಡಿ ಪೆನ್ನೆಕರ್ – ಡಿಸಿಪಿ, ಇಂಟಲಿಜೆನ್ಸ್

ಸಿಮಿ ಮರೀಯ ಜಾರ್ಜ್‌ – ಡಿಸಿಪಿ, ದಕ್ಷಿಣ ವಿಭಾಗ ಸಂಚಾರ

ವೈ.ಅಮರನಾಥ್ – ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ KSRP

ಯಶೋಧ ವಟ್ಟಗೋಡಿ – ಎಸ್​ಪಿ, ಹಾವೇರಿ

ಗುಂಜನ್ ಅರ್ಯಾ – ಎಸ್​ಪಿ, ಧಾರವಾಡ

ಎಂ.ಗೋಪಾಲ್ – ಜಂಟಿ ನಿರ್ದೇಶಕ, ಎಫ್​​ಎಸ್​ಎಲ್ ಬೆಂಗಳೂರು

ಸಿದ್ಧಾರ್ಥ ಗೋಯಲ್ – ಎಸ್​ಪಿ, ಬಾಗಲಕೋಟೆ

ರೋಹನ್ ಜಗದೀಶ್ – ಎಸ್​ಪಿ, ಗದಗ

ಶಿವಾಂಶು ರಜಪೂತ – ಎಸ್​ಪಿ, ಕೆಜಿಎಫ್

ಜಿತೇಂದ್ರ ಕುಮಾರ್ – ಡಿಸಿಪಿ ಕಾನೂನು ಸುವ್ಯವಸ್ಥೆ, ಮಂಗಳೂರು ನಗರ

ಎಂ.ಎನ್​​.ದೀಪನ್ – ಎಸ್​ಪಿ, ಉತ್ತರ ಕನ್ನಡ

ಎಸ್​.ಜಾನವಿ – ಎಸ್​ಪಿ, ವಿಜಯನಗರ

ಚಂದ್ರಗುಪ್ತ – ಐಜಿಪಿ, ಈಶಾನ್ಯ ಕಲಬುರಗಿ

ಇಡಾ ಮಾರ್ಟಿನ್ ಮಾರ್ಬಾನಿಯಾಂಗ್ – ಡಿಐಜಿ, ಬೆಂಗಳೂರು ಪೊಲೀಸ್ ಹೆಡ್​ಕ್ವಾರ್ಟರ್ಸ್

ಕಾರ್ತಿಕ್ ರೆಡ್ಡಿ – ಡಿಐಜಿ, ಜಂಟಿ ಆಯುಕ್ತರು, ಬೆಂಗಳೂರು ಸಂಚಾರ ಪೊಲೀಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com