
ಬೆಂಗಳೂರು: ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ಸಂಚಾರ ಮಾರ್ಗ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಸಕ್ರ ಆಸ್ಪತ್ರೆಯಿಂದ ದೇವರಬೀಸನಹಳ್ಳಿ, ಇಕೋ ವರ್ಲ್ಡ್, ಇಂಟೆಲ್ ಮತ್ತು ಇಕೋ ಸ್ಪೇಸ್ ಕಡೆಗೆ ಬರುವ ವಾಹನಗಳಿಗೆ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.
ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ, ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ (ORR) ಹಲವಾರು ಐಟಿ/ಬಿಟಿ ಕಂಪನಿಗಳಿದ್ದು ಭಾರೀ ಸಂಚಾರ ದಟ್ಟಣೆ ಇದೆ ಎಂದು ಹೆಚ್ ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೆಟ್ರೋ ನಿರ್ಮಾಣ ಕಾರ್ಯವು ಮತ್ತಷ್ಟು ಸಂಚಾರ ದಟ್ಟಣೆ ಹೆಚ್ಚಿಸಿದೆ.
ಪ್ರಾಯೋಗಿಕ ಮಾರ್ಗ ಬದಲಾವಣೆಗಳು ಹೆಚ್ ಎಸ್ ಆರ್ ಲೇಔಟ್, ಬೆಳ್ಳಂದೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ಪ್ರಾಯೋಗಿಕವಾಗಿ ಯಶಸ್ವಿಯಾದರೆ, ಬದಲಾವಣೆಗಳನ್ನು ಶಾಶ್ವತವಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಮಾರ್ಗ ಬದಲಾವಣೆಗಳು ಪ್ರಯಾಣದ ಸಮಯವನ್ನು ಸುಮಾರು 30 ನಿಮಿಷಗಳಷ್ಟು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಹೇಳಿದರು.
ಈ ಭಾಗಗಳಲ್ಲಿ ಸಂಚಾರ ನಿರ್ವಹಣೆ ಸಮಯಗಳನ್ನು ತಪ್ಪಿಸಲು ಗೊತ್ತುಪಡಿಸಿದ ಸರ್ವಿಸ್ ರೋಡ್ ಮತ್ತು ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದರು. ಪ್ರಾಯೋಗಿಕ ಮಾರ್ಗ ಬದಲಾವಣೆಗಳು ಎಚ್‌ಎಸ್‌ಆರ್ ಲೇಔಟ್, ಬೆಳ್ಳಂದೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ ಎಂದು ಹೇಳಿದರು.
ಪರ್ಯಾಯ ಮಾರ್ಗಗಳು
ಸಕ್ರ ಆಸ್ಪತ್ರೆಯಿಂದ ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ, ಕಾಡುಬೀಸನಹಳ್ಳಿಗೆ ಸರ್ವಿಸ್ ರೋಡ್ ತೆಗೆದುಕೊಂಡು, ಯು-ಟರ್ನ್ ತೆಗೆದುಕೊಂಡು ಒಆರ್ ಆರ್ ಮೂಲಕ ಸೆಂಟ್ರಲ್ ಸರ್ವಿಸ್ ರೋಡ್ ಬಳಸಿ ಇಕೋ ವರ್ಲ್ಡ್, ಇಂಟೆಲ್ ಅಥವಾ ಇಕೋ ಸ್ಪೇಸ್ ತಲುಪಬಹುದು.
ಬೆಳ್ಳಂದೂರಿನಿಂದ ಮಾರತ್ತಹಳ್ಳಿಗೆ: ಪಾಸ್‌ಪೋರ್ಟ್ ಸರ್ವಿಸ್ ರೋಡ್ ಬಳಸಿ ಮತ್ತು ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿರುವ ಕೇಂದ್ರ ಸೇವಾ ರಸ್ತೆಯ ಮೂಲಕ.
ಬೆಳ್ಳಂದೂರಿನಿಂದ ದೇವರಬೀಸನಹಳ್ಳಿಗೆ: ಪಾಸ್‌ಪೋರ್ಟ್ ಸರ್ವಿಸ್ ರಸ್ತೆಯ ಮೂಲಕ ಸೆಂಟ್ರಲ್ ಸರ್ವಿಸ್ ರಸ್ತೆಯನ್ನು ತೆಗೆದುಕೊಂಡು, ಕಾಡುಬೀಸನಹಳ್ಳಿಯಲ್ಲಿ ಯು-ಟರ್ನ್ ಮಾಡಿ, ನಂತರ ದೇವರಬೀಸನಹಳ್ಳಿಗೆ ಸರ್ವಿಸ್ ರೋಡ್ ಮೂಲಕ ಹಿಂತಿರುಗಿ
ಇಕೋ ವರ್ಲ್ಡ್‌ನಿಂದ ಮಾರತ್ತಹಳ್ಳಿಗೆ: ದೇವರಬೀಸನಹಳ್ಳಿಯಲ್ಲಿ ನೇರವಾಗಿ ಹೋಗಿ, ಪಾಸ್‌ಪೋರ್ಟ್ ಸರ್ವಿಸ್ ರಸ್ತೆಯಲ್ಲಿ ಬಲಕ್ಕೆ ತಿರುಗಿ, ಸೆಂಟ್ರಲ್ ಸರ್ವಿಸ್ ರೋಡ್ ಮೂಲಕ ಮುಂದುವರಿಯಿರಿ
ಇಕೋ ವರ್ಲ್ಡ್‌ನಿಂದ ದೇವರಬೀಸನಹಳ್ಳಿಗೆ: ನೇರವಾಗಿ ಹೋಗಿ, ಪಾಸ್‌ಪೋರ್ಟ್ ಸರ್ವಿಸ್ ರೋಡ್ ಗೆ ಬಲಕ್ಕೆ ತಿರುಗಿ, ಕಾಡುಬೀಸನಹಳ್ಳಿಯಲ್ಲಿ ಯು-ಟರ್ನ್ ತೆಗೆದುಕೊಂಡು, ಮತ್ತು ORR ಸೇವಾ ರಸ್ತೆಯ ಮೂಲಕ ಹಿಂತಿರುಗಿ
ದೇವಬೀಸನಹಳ್ಳಿಯಿಂದ ಮಾರತ್ತಹಳ್ಳಿಗೆ: ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ, ನಂತರ ಇಕೋ ವರ್ಲ್ಡ್ ಬಳಿ ಬಲಕ್ಕೆ ತಿರುಗಿ, ಪಾಸ್‌ಪೋರ್ಟ್ ಸರ್ವಿಸ್ ರಸ್ತೆಗೆ ಸೇರಿ, ಇನ್ನೊಂದು ಬಲಕ್ಕೆ ತಿರುಗಿ, ಸೆಂಟ್ರಲ್ ಸರ್ವಿಸ್ ರಸ್ತೆಯ ಮೂಲಕ ಕಾಡುಬೀಸನಹಳ್ಳಿಗೆ ಮುಂದುವರಿಯಿರಿ.
Advertisement