3–10 ಲಕ್ಷ ಜನಸಂಖ್ಯೆ ವ್ಯಾಪ್ತಿ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಬೆಳಗಾವಿಗೆ 72ನೇ ಸ್ಥಾನ

ಕಳೆದ ಆರು ತಿಂಗಳುಗಳಲ್ಲಿ, ತಳಮಟ್ಟದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಅದರ ವಿಲೇವಾರಿಯನ್ನು ಸರಿಯಾಗಿ ಮಾಡುವಲ್ಲಿ ನಗರವು ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ
Representational image
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: 3ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಸ್ವಚ್ಛ ಸರ್ವೇಕ್ಷಣದಲ್ಲಿ ಬೆಳಗಾವಿ ಸಾಕಷ್ಟು ಸುಧಾರಣೆ ಕಂಡಿದೆ. 2023 ರಲ್ಲಿ 198 ನೇ ಸ್ಥಾನದಿಂದ, 2024-2025 ರಲ್ಲಿ ಬೆಳಗಾವಿ ನಗರ 72 ನೇ ಸ್ಥಾನಕ್ಕೆ ಏರಿಕೆಯಾಗಿದೆ. ಬೆಳಗಾವಿ ನಗರ ನಿಗಮದ ಕೇಂದ್ರೀಕೃತ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ.

ಕಳೆದ ಆರು ತಿಂಗಳುಗಳಲ್ಲಿ, ತಳಮಟ್ಟದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಅದರ ವಿಲೇವಾರಿಯನ್ನು ಸರಿಯಾಗಿ ಮಾಡುವಲ್ಲಿ ನಗರವು ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಇದು ಈಗ ಶೇಕಡಾ 80ರಷ್ಟಿದ್ದು, ಹಿಂದಿನ ಸಮೀಕ್ಷೆ ವರ್ಷದಲ್ಲಿ ಕೇವಲ ಶೇಕಡಾ 33ರಷ್ಟಿತ್ತು.

Representational image
ದೇಶದ 'ಸ್ವಚ್ಛ ನಗರ' ಪಟ್ಟಿಯಲ್ಲಿ ಸತತ 8ನೇ ವರ್ಷ ಇಂದೋರ್ ನಂ.1; ಮೈಸೂರಿಗೆ 3ನೇ ಸ್ಥಾನ; 40 ನಗರಗಳ ಪೈಕಿ 36ನೇ ಸ್ಥಾನದಲ್ಲಿ ಬೆಂಗಳೂರು!

2023ರಲ್ಲಿ, ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ (97%), ವಸತಿ ಮತ್ತು ಮಾರುಕಟ್ಟೆ ಪ್ರದೇಶಗಳ ಸ್ವಚ್ಛತೆ (99%) ವಿಷಯದಲ್ಲಿ ಬೆಳಗಾವಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಮೂಲ ವಿಂಗಡಣೆ (49%), ತ್ಯಾಜ್ಯ ಸಂಸ್ಕರಣೆ (14%) ಮತ್ತು (0%) ಡಂಪ್‌ಸೈಟ್ ಪರಿಹಾರದಂತಹ ಕ್ಷೇತ್ರಗಳಿಗೆ ಗಮನ ಹರಿಸುವ ಅಗತ್ಯವಿತ್ತು.

ರಾಷ್ಟ್ರೀಯ ಮಟ್ಟದ ಶ್ರೇಯಾಂಕದಲ್ಲಿ ಬೆಳಗಾವಿ ನಗರವು ಗಮನಾರ್ಹ ಸುಧಾರಣೆಯನ್ನು ಸಾಧಿಸಿದ್ದರೂ, ರಾಜ್ಯ ಮಟ್ಟದ ಶ್ರೇಯಾಂಕದಲ್ಲಿ ಹಿಂದಿನ ವರ್ಷದ 7 ನೇ ಸ್ಥಾನದಿಂದ 11 ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯದ ನಗರಗಳ ನಡುವಿನ ತೀವ್ರ ಪೈಪೋಟಿಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com