
ಬೆಂಗಳೂರು: ದೂರದ ಕರಾವಳಿಯ ಕುಂದಾಪುರದಿಂದ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗರ ಬಂದ್ರೂ ತಾಯಿ ನೆಲದ ಸಂಸ್ಕ್ರತಿ ಒಂದನ್ನು ಬೀಡದೇ ಕುಂದಾಪುರ ಕನ್ನಡದ ಕಂಪನ್ನು ಟೀಮ್ ಕುಂದಾಪುರಿಯನ್ಸ್ ಪಸರಿಸುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಭಾನುವಾರ ಟೀಮ್ ಕುಂದಾಪುರಿಯನ್ಸ್ ಆಯೋಜಿಸಿರೋ ಕುಂದಾಪ್ರ ಕನ್ನಡ ಉತ್ಸವದಲ್ಲಿ ಆಶೀರ್ವದಿಸಿ ಮಾತನಾಡಿದ ಅವರು, ಭಾಷೆ,ಸಂಸ್ಕ್ರತಿ ಆಚಾರ ವಿಚಾರವನ್ನು ಯಾವತ್ತೂ ಮರೆಯಬಾರದು. ಕುಂದಾಪುರ ಪುಟ್ಟ ಪ್ರದೇಶ ಆದ್ರೂ ಕುಂದಾಪುರಿಗರು ಸಾಧನೆ ದೊಡ್ಡದು ಎಂದು ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಬೆಂಗಳೂರಿನ ಬಸವೇಶ್ವರ ನಗರದ ನೇತಾಜಿ ಮೈದಾನದಲ್ಲಿ ಕುಂದಾಪುರ ಉತ್ಸವವು ಅದ್ದೂರಿಯಾಗಿ ನಡೆದಿದೆ. ಬೆಳಗ್ಗೆ ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ಕೊಲ್ಲೂರು ಮೂಕಾಂಬಿಕೆಯ ಟ್ಯಾಬ್ಲೋ ಮೆರವಣಿಗೆ ಹಾಗೂ ಸಂಕಲ್ಪಯಾತ್ರೆ ನಡೆಸಲಾಗಿದೆ. ನಾಗಸಾಧುಗಳಾದ ಧನಂಜಯ ಗಿರಿ ಮಹರಾಜ್, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೇಳೂರು ರಾಘವೇಂದ್ರ ಶೆಟ್ಟಿ, ಕುಂದಾಪುರ ಪ್ರತಿಷ್ಠಾನ ಅಧ್ಯಕ್ಷರಾದ ದೀಪಕ್ ಶೆಟ್ಟಿ ಬಾರ್ಕೂರು ಭಾಗಿಯಾದ್ರು.
ಕುಂದಾಪುರ ಕನ್ನಡ ಉತ್ಸವದಲ್ಲಿ ಕುಂದಾಪುರ ಪರಿಸರ ಹಳೆ ಕಾಲದ ವಸ್ತುಗಳ ಪ್ರದರ್ಶನ, ಸಂಸ್ಕ್ರತಿ ಶಿಬಿರ, ಅಹಾರ ಮೇಳ, ಯಕ್ಷಗಾನ, ಕುಂದಾಪುರ ಸಂಸ್ಕ್ರತಿಯ ನೃತ್ಯರೂಪಕ,ಲಗೋರಿ, ಗೋಣಿಚೀಲ ಓಟ, ಕಪ್ಪೆ ಜಿಗಿತ ಸೇರಿ ವಿವಿಧ ಕ್ರೀಡೆಗಳು ಜನರನ್ನು ಸೆಳೆದವು. ಸಮಾರೋಪ ಸಮಾರಂಭದಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದಿನ್ ಮಾಣಿ,ಉದ್ಯಮಗಳಾದ ಗೋವಿಂದ ಬಾಬು ಪೂಜಾರಿ, ಅಭಯ ಸೇವಾ ಫೌಂಡೇಶನ್ ನ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಮಂದಾರ್ತಿ,ಚಿತ್ರ ನಿರ್ದೇಶಕ ಗುರುದತ್ ಗಾಣಿಗ ಹೆರೆಂಜಾಲ್, ಗಾಯಕ ರಾಘವೇಂದ್ರ ಬೀಜಾಡಿ, ಮಹಿಳಾ ಯಕ್ಷಗಾನ ಬೆಂಗಳೂರಿನ ಗೌರಿ ಶ್ರೀನಿವಾಸ ಉಪಸ್ಥಿತರಿದ್ದರು.
Advertisement