ಯಾವುದೇ ಒಳ ಪಂಗಡವಿರಲಿ ಜಾತಿ ಗಣತಿ ಕಾಲಂನಲ್ಲಿ 'ವೀರಶೈವ ಲಿಂಗಾಯತ' ಎಂದು ಬರೆಸಿ: ಪಂಚಪೀಠ ಸ್ವಾಮೀಜಿಗಳ ಕರೆ

ಜನಗಣತಿಯ ಸಮಯದಲ್ಲಿ ಜಾತಿ ಅಂಕಣದಲ್ಲಿ 'ವೀರಶೈವ'ವನ್ನು ಸೇರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕದ ಸಂಸತ್ ಸದಸ್ಯರಿಗೆ ಮನವಿ ಮಾಡುವುದು ಸೇರಿದಂತೆ 12 ನಿರ್ಣಯಗಳನ್ನು ಅಂಗೀಕರಿಸಿತು.
The two-day ‘Shrunga Sammelan’ of Veerashaiva Lingayat community in Davanagere
ದಾವಣಗೆರೆಯಲ್ಲಿ ಆಯೋಜಿಸಿದ್ದ ಶೃಂಗ ಸಮ್ಮೇಳನ'
Updated on

ಬೆಂಗಳೂರು: ವೀರಶೈವ ಲಿಂಗಾಯತ ಸಮಗ್ರತೆ ಮತ್ತು ಒಗ್ಗಟ್ಟನ್ನು ಪ್ರತಿಪಾದಿಸಲು ಮುಂಬರುವ ಜಾತಿ ಗಣತಿಯಲ್ಲಿ ಎಲ್ಲ ಒಳಪಂಗಡಗಳು ‘ವೀರಶೈವ ಲಿಂಗಾಯತ’ಎಂದೇ ಬರೆಸಬೇಕು ಎಂಬುದು ಸೇರಿದಂತೆ 12 ನಿರ್ಣಯಗಳನ್ನು ಇಲ್ಲಿ ನಡೆದ ವೀರಶೈವ ಪೀಠಾಚಾರ್ಯ, ಶಿವಾಚಾರ್ಯರ ಶೃಂಗ ಒಮ್ಮತದಿಂದ ಕೈಗೊಂಡಿತು.

ಮಂಗಳವಾರ ಕೊನೆಗೊಂಡ ವೀರಶೈವ ಲಿಂಗಾಯತ ಸಮುದಾಯದ ಎರಡು ದಿನಗಳ 'ಶೃಂಗ ಸಮ್ಮೇಳನ'ವು, 2026 ರಲ್ಲಿ ನಡೆಯಲಿರುವ ರಾಷ್ಟ್ರೀಯ ಜನಗಣತಿಯ ಸಮಯದಲ್ಲಿ ಸಮುದಾಯದ ಸದಸ್ಯರು ತಮ್ಮನ್ನು 'ವೀರಶೈವ-ಲಿಂಗಾಯತ' ಎಂದು ನೋಂದಾಯಿಸಿಕೊಳ್ಳುವಂತೆ ತಿಳಿಸಿತು. ಸಮುದಾಯವು ತಮ್ಮ ಉಪಜಾತಿಗಳನ್ನು ಲೆಕ್ಕಿಸದೆ ಸನಾತನ ಹಿಂದೂ ವೀರಶೈವ ಧರ್ಮದ ಅನುಯಾಯಿಗಳಾಗಿ ನೋಂದಾಯಿಸಿಕೊಳ್ಳುವಂತೆ ಐದು ಪೀಠಗಳ ಮುಖ್ಯಸ್ಥರು ನಿರ್ದೇಶಿಸಿದರು.

ಜನಗಣತಿಯ ಸಮಯದಲ್ಲಿ ಜಾತಿ ಅಂಕಣದಲ್ಲಿ 'ವೀರಶೈವ'ವನ್ನು ಸೇರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕದ ಸಂಸತ್ ಸದಸ್ಯರಿಗೆ ಮನವಿ ಮಾಡುವುದು ಸೇರಿದಂತೆ 12 ನಿರ್ಣಯಗಳನ್ನು ಸಮಾವೇಶವು ಅಂಗೀಕರಿಸಿತು. ವೀರಶೈವ ಲಿಂಗಾಯತ ಧರ್ಮದ ಎಲ್ಲಾ ಉಪಪಂಗಡಗಳಿಗೆ ಒಬಿಸಿ ಸ್ಥಾನಮಾನ ನೀಡುವಂತೆ ಸಹ ಸಮಾವೇಶವು ಕೋರಿತು.

ಸಮುದಾಯಗಳ ವಿವಿಧ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮೀಣ ಮಟ್ಟದ ಕಾರ್ಯಕ್ರಮಗಳಲ್ಲಿ ಎಲ್ಲಾ ಐದು ಮಠಾಧೀಶರ ಫೋಟೋಗಳನ್ನು ಬಳಸುವಲ್ಲಿ ತೊಂದರೆ ಉಂಟಾದರೆ, ಸಮುದಾಯದ ಸದಸ್ಯರು ಜಗದ್ಗುರು ರೇಣುಕಾಚಾರ್ಯರ ಫೋಟೋವನ್ನು ಬಳಸಬಹುದು ಎಂದು ಸಭೆ ನಿರ್ಧರಿಸಿದೆ.

The two-day ‘Shrunga Sammelan’ of Veerashaiva Lingayat community in Davanagere
3 ದಶಕಗಳ ಬಳಿಕ ವೀರಶೈವ-ಲಿಂಗಾಯತರು ಮತ್ತೆ ಒಂದು: ಶಕ್ತಿ ಪ್ರದರ್ಶನಕ್ಕೆ ಮುಂದು!

ಸಭೆಯು ಮತ್ತೊಂದು ನಿರ್ಣಯದಲ್ಲಿ ವೀರಶೈವ ಲಿಂಗಾಯತರ ಆಚರಣೆಗಳು, ಇತಿಹಾಸ ಮತ್ತು ಧಾರ್ಮಿಕ ಸಂಸ್ಕೃತಿಯ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವಂತೆ ಕರೆ ನೀಡಿತು. ವೀರಶೈವ ಲಿಂಗಾಯತ ಸಮುದಾಯದ ಹಿತಾಸಕ್ತಿ ಕಾಪಾಡಲು ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಸೇರಿದಂತೆ ಸಭೆಯಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಿತು.

ದಾರ್ಶನಿಕರು ಮತ್ತು ವಿವಿಧ ಮಠಗಳ ನಡುವೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲುಸ ಸಮಾವೇಶ ಕರೆ ನೀಡಿತು. ಶ್ರೀಗಳು ಮತ್ತು ಶಿವಾಚಾರ್ಯರ ವಾರ್ಷಿಕ ಶೃಂಗಸಭೆಗಳನ್ನು ನಡೆಸಲು ನಿರ್ಧರಿಸಲಾಯಿತು ಮತ್ತು ಉತ್ತರ ಭಾರತದಲ್ಲಿ ವಾಸಿಸುವ ವೀರಶೈವ ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಲು ಕರೆ ನೀಡಿದರು.

ಉಜ್ಜಯನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು, ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಮಹಾಸಂಸ್ಥಾನ ಪೀಠದ ಪ್ರಾಚಾರ್ಯ ಜಗದ್ಗುರು ಡಾ. ರೇಣುಕಾ ವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಸಮಾವೇಶದ ಸಾನ್ನಿಧ್ಯ ವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com