ಪ್ರಾಣಿ ವಿನಿಮಯ ಯೋಜನೆ: ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜಪಾನ್‌ಗೆ ನಾಲ್ಕು ಆನೆ ಕಳುಹಿಸಲು ಸಿದ್ಧತೆ!

ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ, BBP ನಾಲ್ಕು ಚಿರತೆಗಳು, ನಾಲ್ಕು ಜಾಗ್ವಾರ್‌ಗಳು, ನಾಲ್ಕು ಪೂಮಾಗಳು, ಮೂರು ಚಿಂಪಾಂಜಿಗಳು ಮತ್ತು ಎಂಟು ಕಪ್ಪು-ಕ್ಯಾಪ್ಡ್ ಕ್ಯಾಪುಚಿನ್ ಕೋತಿಗಳನ್ನು ಸ್ವೀಕರಿಸಲಿದೆ.
Bannerghatta Biological Park
ಬನ್ನೇರುಘಟ್ಟ ಜೈವಿಕ ಉದ್ಯಾನವನ
Updated on

ಬೆಂಗಳೂರು: ಪ್ರಾಣಿ ವಿನಿಮಯ ಕಾರ್ಯಕ್ರಮದ ಭಾಗವಾಗಿ, ನಾಲ್ಕು ಆನೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜಪಾನ್‌ನ ಹಿಮೇಜಿ ಸೆಂಟ್ರಲ್ ಸಫಾರಿ ಪಾರ್ಕ್‌ಗೆ ಕಳುಹಿಸಲಾಗುವುದು.

ಆನೆಗಳನ್ನು ಗುರುವಾರ ಮತ್ತು ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್‌ನ ಒಸಾಕಾದ ಕನ್ಸೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರಕು ವಿಮಾನದ ಮೂಲಕ ಕಳುಹಿಸಲಾಗುವುದು ಎಂದು BBP ಕಾರ್ಯನಿರ್ವಾಹಕ ನಿರ್ದೇಶಕ AV ಸೂರ್ಯ ಸೇನ್ ಬುಧವಾರ ತಿಳಿಸಿದ್ದಾರೆ.

ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ, BBP ನಾಲ್ಕು ಚಿರತೆಗಳು, ನಾಲ್ಕು ಜಾಗ್ವಾರ್‌ಗಳು, ನಾಲ್ಕು ಪೂಮಾಗಳು, ಮೂರು ಚಿಂಪಾಂಜಿಗಳು ಮತ್ತು ಎಂಟು ಕಪ್ಪು-ಕ್ಯಾಪ್ಡ್ ಕ್ಯಾಪುಚಿನ್ ಕೋತಿಗಳನ್ನು ಸ್ವೀಕರಿಸಲಿದೆ. ಜಪಾನ್‌ಗೆ ಕಳುಹಿಸಬೇಕಾದ ಆನೆಗಳು 8 ವರ್ಷದ ಸುರೇಶ್, ಗೌರಿ (9), ಶ್ರುತಿ (7), ಮತ್ತು ತುಳಸಿ (5) ಆನೆಗಳನ್ನು ಕಳುಹಿಸಲಾಗುತ್ತಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಹಿಮೇಜಿ ಸಫಾರಿ ಪಾರ್ಕ್‌ಗೆ ತಲಪಲು ಸುಮಾರು 20 ಗಂಟೆಗಳ ಕಾಲ ಪ್ರಯಾಣಿಸಬೇಕಿದೆ. ಕಳೆದ 6 ತಿಂಗಳುಗಳಿಂದ ಈ ಸಾಗಣೆಗಾಗಿ ಪ್ರಾಣಿಗಳಿಗೆ ತರಬೇತಿ ನೀಡಲಾಗಿದೆ. ಆನೆಗಳು ಉತ್ತಮ ಆರೋಗ್ಯ ಹೊಂದಿದ್ದು, ಪ್ರಯಾಣ ಮಾಡಲು ಸಬಲವಾಗಿವೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bannerghatta Biological Park
ಜನ್ಮ ನೀಡಿ ಬಿಟ್ಟುಹೋದ ತಾಯಿ ಹುಲಿ; ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೂರು ಮರಿಗಳು ಸಾವು!

ಆನೆಗಳು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿವೆ ಎಂದು ಅವರು ಹೇಳಿದರು. "ಇದು ಜಪಾನ್‌ಗೆ ಕಳುಹಿಸಲಾಗುತ್ತಿರುವ ಆನೆಗಳ ಎರಡನೇ ಬ್ಯಾಚ್ ಆಗಿದೆ.

ಮೈಸೂರು ಮೃಗಾಲಯದಿಂದ ಮೇ 2021ರಲ್ಲಿ ಜಪಾನ್‌ನ ಟೊಯೊಹಾಶಿ ಮೃಗಾಲಯಕ್ಕೆ 3 ಆನೆಗಳನ್ನು ಕಳುಹಿಸಿದ ಬಳಿಕ, ಇದು ಜಪಾನ್‌ಗೆ ಆನೆಗಳ ವಿನಿಮಯದ ಮೂಲಕ ತೆರಳುತ್ತಿರುವ ಎರಡನೇ ಬ್ಯಾಚ್ ಆಗಿದೆ.

ಹಿಮೇಜಿ ಸಫಾರಿ ಪಾರ್ಕ್‌ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಬ್ಬರು ಪಶು ವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬ ಜೀವಶಾಸ್ತ್ರಜ್ಞೆ ಪ್ರಾಣಿಗಳೊಂದಿಗೆ ಪ್ರಯಾಣಿಸುತ್ತಿದ್ದಾರೆ. ಹಿಮೆಜಿ ಸೆಂಟ್ರಲ್ ಪಾರ್ಕ್‌ನ ಆನೆ ಪಾಲಕರಿಗೆ ಮೇ 12 ರಿಂದ 25 ರವರೆಗೆ ಬಿಬಿಪಿಯಲ್ಲಿ ತರಬೇತಿ ನೀಡಲಾಯಿತು ಎಂದು ಸೇನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com