ಸೈಬರ್ ವಂಚನೆ: ಚೆನ್ನೈ ಪೊಲೀಸರಿಂದ ಬೆಳಗಾವಿಯಲ್ಲಿ ಮೂವರ ಬಂಧನ

ಚೆನ್ನೈ ಪೊಲೀಸ್ ತಂಡ ಇಂದು ಬೆಳಗಾವಿಗೆ ಆಗಮಿಸಿ ಅನಿಲ್ ಕೊಲ್ಲಾಪುರ, ರೋಹನ್ ಕಾಂಬ್ಳೆ ಮತ್ತು ಸರ್ವೇಶ್ ಕಿವಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿದೆ.
 Chennai police arrest three in Belagavi
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಸೈಬರ್ ಅಪರಾಧ ಪ್ರಕರಣವೊಂದರಲ್ಲಿ, ಸೈಬರ್ ವಂಚನೆ ಮಾಡಲು ನಕಲಿ ಕಂಪನಿ ಮತ್ತು ಬ್ಯಾಂಕ್ ಖಾತೆಯನ್ನು ಸೃಷ್ಟಿಸಿದ ಆರೋಪದ ಮೇಲೆ ಬೆಳಗಾವಿ ನಗರದ ಮೂವರು ನಿವಾಸಿಗಳನ್ನು ಗುರುವಾರ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಪೊಲೀಸ್ ಇಲಾಖೆಯ ಸೂಚನೆಯ ಮೇರೆಗೆ, ಚೆನ್ನೈ ಪೊಲೀಸ್ ತಂಡ ಇಂದು ಬೆಳಗಾವಿಗೆ ಆಗಮಿಸಿ ಅನಿಲ್ ಕೊಲ್ಲಾಪುರ, ರೋಹನ್ ಕಾಂಬ್ಳೆ ಮತ್ತು ಸರ್ವೇಶ್ ಕಿವಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿದೆ.

ಬಂಧಿತ ಆರೋಪಿಗಳನ್ನು ಬೆಳಗಾವಿಯ ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಚೆನ್ನೈಗೆ ಕರೆದೊಯ್ಯಲಾಗಿದೆ ಎಂದು ಬೆಳಗಾವಿ ಸೈಬರ್ ಪೊಲೀಸರು ತಿಳಿಸಿದ್ದಾರೆ.

 Chennai police arrest three in Belagavi
ಬೆಂಗಳೂರು: ನಕಲಿ ಕಂಪನಿ ಸೃಷ್ಟಿಸಿ 15.5 ಲಕ್ಷ ರುಪಾಯಿ ವಂಚನೆ; ಸೈಬರ್ ಕಳ್ಳನ ಬಂಧನ

ಆರೋಪಿಗಳು ನಕಲಿ ಕಂಪನಿಯ ದಾಖಲೆಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆ ತೆರೆದು ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಈ ಖಾತೆಗಳಲ್ಲಿ 27 ವಂಚನೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಆರೋಪಿಗಳು ಬೆಂಗಳೂರು ಮತ್ತು ತುಮಕೂರಿನಲ್ಲಿಯೂ ಇದೇ ರೀತಿಯ ವಂಚನೆ ಎಸಗಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆಯನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಆನ್ ಲೈನ್ ಮೂಲಕ ಸ್ವೀಕರಿಸಿದ ಸೈಬರ್ ಲಿಂಕ್‌ಗಳೊಂದಿಗೆ ವ್ಯವಹರಿಸುವಾಗ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕು. ಅಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದು ಮತ್ತು ವೈಯಕ್ತಿಕ ದಾಖಲೆಗಳನ್ನು ಸಲ್ಲಿಸುವುದರಿಂದ ವ್ಯಕ್ತಿಗಳು ಆರ್ಥಿಕ ವಂಚನೆಗೆ ಗುರಿಯಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com