ಬೆಳಗ್ಗೆ ಮಾಡಿದ ಸಾಂಬಾರ್ ಸಂಜೆಯೂ ತಿಂದು ಬೇಸರ: ಕ್ಷುಲ್ಲಕ ಕಾರಣಕ್ಕೆ ಮಹಿಳೆ ಆತ್ಮಹತ್ಯೆ

ಟೈಲರ್ ಆಗಿರುವ ನಾಗರತ್ನ ಅವರ ಪತಿ ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪ್ರತಿದಿನ ಸಾಂಬಾರ್ ತಿಂದು ಬೇಸತ್ತು 38 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಸಮೀಪ ನಡೆದಿದೆ.

ಬೆಂಗಳೂರು ಹೊರವಲಯದಲ್ಲಿರುವ ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿಯ ಮೃತ ನಾಗರತ್ನ ಮಾನಸಿಕ ಅಸ್ವಸ್ಥೆಯಾಗಿದ್ದರು. ಸ್ವಲ್ಪ ಮುಂಗೋಪಿಯಾಗಿದ್ದ ನಾಗರತ್ನ ಸಣ್ಣಪುಟ್ಟ ವಿಷಯಗಳಿಗೂ ಅಸಮಾಧಾನಗೊಳ್ಳುತ್ತಿದ್ದರು. ಇದರಿಂದಾಗಿಯೇ ಈ ಕ್ರಮ ತೆಗೆದುಕೊಂಡಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಟೈಲರ್ ಆಗಿರುವ ನಾಗರತ್ನ ಅವರ ಪತಿ ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳಿದ್ದಾರೆ. ಗುರುವಾರ, ನಾಗರತ್ನ ಕೆಲಸಕ್ಕೆ ಹೊರಡುವ ಮೊದಲು ಬೆಳಗ್ಗೆ ಸಾಂಬಾರ್ ಮಾಡಿದ್ದರು.ಸಂಜೆ ಮನೆಗೆ ಬಂದು ಅದೇ ಆಹಾರ ತಿಂದು ಬೇಸತ್ತುಕೊಂಡಿದ್ದರು.

ಆಕೆಯ ಪತಿ ಆಕೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿ ಬೇರೆ ಆಹಾರ ನೀಡಿದ್ದರು. ರಾತ್ರಿ 8.30 ರ ಸುಮಾರಿಗೆ, ಸ್ನಾನಗೃಹಕ್ಕೆ ಹೋದವರು ವಾಪಾಸ್ ಬರಲಿಲ್ಲ. ಪ್ರತಿಕ್ರಿಯಿಸದಿದ್ದಾಗ, ಪತಿ ಬಾಗಿಲು ಒಡೆದು ನೋಡಿದಾಗ ದುಪಟ್ಟಾದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ನಾಗರತ್ನ ಅವರ ಮಗಳು ನೀಡಿದ ದೂರಿನ ಆಧಾರದ ಮೇಲೆ, ವಿಶ್ವನಾಥಪುರ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ. ಬೇರೆ ಯಾವುದಾದರೂ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಹಾಯವಾಣಿ

ಆತ್ಮಹತ್ಯೆ ಆಲೋಚನೆಗಳು ಇದ್ದರೆ, ಭಾವನಾತ್ಮಕ ಬೆಂಬಲ ಅಗತ್ಯವಿದ್ದರೆ ಸ್ನೇಹ ಫೌಂಡೇಶನ್ - 04424640050, ಟೆಲಿ ಮಾನಸ್ - 14416 (24x7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 02225521111 ಗೆ ಕರೆ ಮಾಡಿ, ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com