
ಬೆಂಗಳೂರು: ದಕ್ಷಿಣ ಕನ್ನಡ, ಕೊಡಗು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಇತ್ತೀಚೆಗೆ ಮುಂಗಾರು ಪೂರ್ವ ಮಳೆಯ ಸಮಯದಲ್ಲಿ ಸಂಭವಿಸಿದ ಭೂಕುಸಿತ ಹಿನ್ನೆಲೆಯಲ್ಲಿ ಅರಣ್ಯ, ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಅವರು ಪಶ್ಚಿಮ ಘಟ್ಟಗಳ ನಿರ್ವಹಣೆ ಸಾಮರ್ಥ್ಯವನ್ನು ನಿರ್ಣಯಿಸಿ ಮೂರು ತಿಂಗಳೊಳಗೆ ವಿವರವಾದ ವರದಿಯ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೇ 27 ರಂದು ಅರಣ್ಯ, ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಲಿಖಿತ ನಿರ್ದೇಶನದಲ್ಲಿ, ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚುತ್ತಿರುವ ರಸ್ತೆ ಮತ್ತು ಮೂಲಸೌಕರ್ಯ ಯೋಜನೆಗಳು ಈ ಪ್ರದೇಶವನ್ನು ಅಪಾಯಕ್ಕೆ ಸಿಲುಕಿಸುತ್ತಿವೆ ಎಂಬ ತಜ್ಞರ ಕಳವಳವನ್ನು ಸಚಿವರು ಎತ್ತಿ ತೋರಿಸಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿಯು ಮಣ್ಣಿನ ಅಸ್ಥಿರತೆಗೆ ಕಾರಣವಾಗುತ್ತವೆ. ಇದರ ಪರಿಣಾಮವಾಗಿ ಆಸ್ತಿ, ಬೆಳೆಗಳು, ವನ್ಯಜೀವಿಗಳು ಮತ್ತು ಮಾನವ ಜೀವಕ್ಕೆ ಹಾನಿಯಾಗುತ್ತದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಘಟ್ಟಗಳ ಅವನತಿಯು ಭವಿಷ್ಯದಲ್ಲಿ ತೀವ್ರ ನೀರಿನ ಕೊರತೆಗೆ ಕಾರಣವಾಗಬಹುದು ಎಂದು ತಜ್ಞರು, ವಿಜ್ಞಾನಿಗಳು ಮತ್ತು ಪ್ರಕೃತಿ ಪ್ರಿಯರು ಎಚ್ಚರಿಕೆ ನೀಡಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಇದರ ಮೇಲೆ ಕ್ರಮ ಕೈಗೊಳ್ಳುವ ಸಲುವಾಗಿ, ಜೀವವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ, ಕರ್ನಾಟಕದ ಮೌಲ್ಯಮಾಪನ, ಯೋಜನೆ, ಸಂಶೋಧನೆ ಮತ್ತು ತರಬೇತಿ ವಿಭಾಗದ ಅಧಿಕಾರಿಗಳು ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಜಂಟಿ ಅಧ್ಯಯನ ನಡೆಸುವಂತೆ ಸಚಿವರು ಸೂಚಿಸಿದ್ದಾರೆ.
ಜೀವವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟಗಳು ರಾಜ್ಯದ ಅರಣ್ಯ ವ್ಯಾಪ್ತಿಯ ಶೇ. 60 ರಷ್ಟನ್ನು ಹೊಂದಿದ್ದು, ಸಮೃದ್ಧವಾದ ಸಸ್ಯ, ಪ್ರಾಣಿ ಮತ್ತು ಕೀಟ ಪ್ರಭೇದಗಳನ್ನು ರಕ್ಷಿಸಲು ಹೋರಾಡುತ್ತಿದೆ. ಮಾನ್ಸೂನ್ ಮಾದರಿಗಳ ಮೇಲೆ ಪ್ರಭಾವ ಬೀರುವಲ್ಲಿ ಘಟ್ಟಗಳ ನಿರ್ಣಾಯಕ ಪಾತ್ರವನ್ನು ಸಚಿವ ಖಂಡ್ರೆ ಒತ್ತಿ ಹೇಳಿದರು. ಅವುಗಳ ಸಂರಕ್ಷಣೆಯ ತುರ್ತು ಅಗತ್ಯವನ್ನು ಒತ್ತಿ ಹೇಳಿದರು.
ಇತ್ತೀಚಿನ ಘಟನೆಯೊಂದರಲ್ಲಿ, ಕಳೆದ ವಾರ ಮಂಗಳೂರಿನಾದ್ಯಂತ ಭಾರೀ ಮತ್ತು ನಿರಂತರ ಮಳೆಯಿಂದ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾದ ಕಾರಣ ಮೂವರು ಮಕ್ಕಳು ಸೇರಿ ಕನಿಷ್ಠ ನಾಲ್ವರು ಮೃತಪಟ್ಟು ಇತರ ಮೂವರು ಮುಳುಗಿ ಮೃತಪಟ್ಟಿದ್ದರು. ದೇರಳಕಟ್ಟೆ ಬಳಿಯ ಮಂಜನಾಡಿಯ ಮೊಂಟೆಪದವಿನಲ್ಲಿ ಬೃಹತ್ ಮಾವಿನ ಮರವೊಂದು ಉರುಳಿ ಬಿದ್ದು ಮೂವರು ಮೃತಪಟ್ಟಿದ್ದರು.
Advertisement