ನನಗೆ ಸಾಧನೆ-ಹೆಸರು ಬೇಡ, ನಿಮ್ಮ ಹೃದಯದಲ್ಲಿ ಸ್ಥಾನ ಪಡೆದು ಈ ಮಣ್ಣಿಗೆ ಹೋಗ್ತೀನಿ: HD ಕುಮಾರಸ್ವಾಮಿ ಕಣ್ಣೀರು
ಬೆಂಗಳೂರು: ನನಗೆ ನಾನು ಮಾಡುವ ಸಾಧನೆಗೆ ಹೆಸರು ಬೇಡ. ನಿಮ್ಮ ಹೃದಯದಲ್ಲಿ ಕೊಟ್ಟ ಸ್ಥಾನ ಸಾಕು. ನಾನು ಸಾಯುವ ಮುನ್ನ ನಿಮ್ಮ ಋಣ ತೀರಿಸಿ ಹೋಗುವೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಭಾವುಕರಾಗಿ ಕಣ್ಣೀರಿಟ್ಟರು.
ಮೈಷುಗರ್ ಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಾಯುವ ಮುನ್ನ ನಿಮ್ಮ ಋಣ ತೀರಿಸಿ ಹೋಗುವೆ . ತಮ್ಮ ಸಾಧನೆಗಿಂತ ಜನರ ಪ್ರೀತಿ ಮುಖ್ಯವೆಂದು ತಿಳಿಸಿದರು. ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಎರಡು ದುರ್ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಬಾಲಕಿ ಸಾವು ಮತ್ತು ಟ್ರಾಫಿಕ್ ಪೊಲೀಸರ ತಪ್ಪಿನಿಂದ ಬಾಲಕಿ ಸಾವನ್ನಪ್ಪಿದ ಪ್ರಕರಣವನ್ನು ಅವರು ಉಲ್ಲೇಖಿಸಿದರು. ಕರ್ನಾಟಕ ಸರ್ಕಾರದ ಸರ್ಕಾರ ನಿರ್ಲಕ್ಷ್ಯದ ಬಗ್ಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. "ಪ್ರತಿಯೊಂದು ಜೀವವನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ" ಎಂದರು.
ಇನ್ನಾದರೂ ಮಾನವನ ಜೀವಗಳಿಗೆ ಸರಿಯಾದ ಬೆಲೆ ಕೊಡುವುದನ್ನು ಕಲಿಯಲಿ" ಎಂದು ಸಲಹೆ ನೀಡಿದರು. ಬಡವರ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು. ಸರ್ಕಾರವು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾನು ಆಂಧ್ರದಲ್ಲಿ ಇತಿಹಾಸದ ಕಾರ್ಖಾನೆ ಉಳಿಸಿದೆ. ಹೆಚ್‌ಎಂಟಿ ಫ್ಯಾಕ್ಟರಿ ಉಳಿಸಲು ಪಣತೊಟ್ಟಿದ್ದೇನೆ. ಆದ್ರೆ, ಅದಕ್ಕೆ ರಾಜ್ಯ ಸರ್ಕಾರ ಭೂಮಿ ಕೊಡುತ್ತಿಲ್ಲ. ನನಗೆ ಮಂಡ್ಯ ಜನ ಸ್ವಲ್ಪ ಸಮಯ ಕೊಡಿ. ನನ್ನ ಮೇಲೆ ಜಿಲ್ಲೆಯ ಜನ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ನನ್ನ ಒಂದು ಕಣ್ಣು, ಹೃದಯ ಇಲ್ಲೇ ಇರುತ್ತೆ. ನಿಮ್ಮ ನಿರೀಕ್ಷೆ ಆಸೆಗಳನ್ನ ನಿರಾಸೆ ಮಾಡಲ್ಲ. ನನಗೆ ಬೇರೆ ಯಾವುದೇ ಆಸೆ ಇಲ್ಲ, ನನಗೆ ಬೇಕಿರೋದು ನಿಮ್ಮ ಹೃದಯದಲ್ಲಿ ಸ್ಥಾನ, ಆ ಶಾಶ್ವತ ಸ್ಥಾನ ಪಡೆದು ನಂತರ ನಾನು ಈ ಮಣ್ಣಿಗೆ ಹೋಗ್ತೀನಿ ಎಂದು ಭಾಷಣದ ವೇಳೆ ಭಾವುಕರಾದರು.