ಕಾಲ್ತುಳಿತ ನಂತರ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಪಾದರಕ್ಷೆಗಳ ರಾಶಿ: ವಿದ್ಯುತ್ ಉತ್ಪಾದನೆಗಾಗಿ ಬಿಡದಿ ಘಟಕಕ್ಕೆ ರವಾನೆ

ಕಳೆದ ಎರಡು ದಿನಗಳಲ್ಲಿ ಸುಮಾರು 300-350 ಕೆಜಿ ಪಾದರಕ್ಷೆಗಳನ್ನು ಹೊತ್ತ ಮೂರು ಆಟೋ-ಟಿಪ್ಪರ್‌ಗಳನ್ನು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ(ಕೆಪಿಸಿಎಲ್) ಸ್ಥಾವರಕ್ಕೆ ರವಾನಿಸಲಾಗಿದೆ.
Footwears
ಪಾದರಕ್ಷೆಗಳ ರಾಶಿ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಘನತ್ಯಾಜ್ಯ ನಿರ್ವಹಣಾ (SWM) ಘಟಕವು ಈ ವಾರ ಬಿಡದಿ ತ್ಯಾಜ್ಯದಿಂದ ಇಂಧನ ಸ್ಥಾವರಕ್ಕೆ ಅಪರೂಪದ ತ್ಯಾಜ್ಯವನ್ನು ಕಳುಹಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ನಂತರ ಸ್ಥಳದಲ್ಲಿ ಬಿಟ್ಟುಹೋದ ಪಾದರಕ್ಷೆಗಳು ಈ ತ್ಯಾಜ್ಯಗಳಾಗಿವೆ.

ಕಳೆದ ಎರಡು ದಿನಗಳಲ್ಲಿ ಸುಮಾರು 300-350 ಕೆಜಿ ಪಾದರಕ್ಷೆಗಳನ್ನು ಹೊತ್ತ ಮೂರು ಆಟೋ-ಟಿಪ್ಪರ್‌ಗಳನ್ನು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ(ಕೆಪಿಸಿಎಲ್) ಸ್ಥಾವರಕ್ಕೆ ರವಾನಿಸಲಾಗಿದೆ.

ಪಾದರಕ್ಷೆಗಳ ತ್ಯಾಜ್ಯವನ್ನು ಎರಡು ದಿನಗಳವರೆಗೆ ವಿದ್ಯುತ್ ಉತ್ಪಾದಿಸಲು ಸಂಸ್ಕರಿಸಲಾಗುತ್ತಿದೆ. ಬೆಂಗಳೂರಿನಿಂದ ಸಂಗ್ರಹಿಸಲಾದ 600 ಟನ್ ಒಣ ತ್ಯಾಜ್ಯವನ್ನು ಬಳಸಿಕೊಂಡು ಬಿಡದಿ ಸ್ಥಾವರವು ಪ್ರತಿದಿನ 11.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ.

ಕಾಲ್ತುಳಿತ ಘಟನೆಯ ಮರುದಿನ, ಶಿವಾಜಿನಗರ ಮತ್ತು ಶಾಂತಿನಗರದ ಬಿಬಿಎಂಪಿಯ ಎಸ್‌ಡಬ್ಲ್ಯೂಎಂ ವಿಭಾಗಗಳು ಪಾದರಕ್ಷೆಗಳನ್ನು ಸಂಗ್ರಹಿಸಲು ಪ್ರತ್ಯೇಕವಾಗಿ ತ್ಯಾಜ್ಯ ಆಯುವವರ ವಿಶೇಷ ತಂಡಗಳನ್ನು ನಿಯೋಜಿಸಿದವು. ಶುಚಿಗೊಳಿಸುವ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಮಾರ್ಷಲ್‌ಗಳ ತಂಡವನ್ನು ಸಹ ನಿಯೋಜಿಸಲಾಯಿತು. ಬ್ಯಾನರ್‌ಗಳು, ಫ್ಲೆಕ್ಸ್‌ಗಳು ಮತ್ತು ಹರಿದ ಬಟ್ಟೆಗಳನ್ನು ತೆಗೆದುಹಾಕಲು ಪ್ರತ್ಯೇಕ ಆಟೋ-ಟಿಪ್ಪರ್‌ಗಳನ್ನು ಬಳಸಲಾಯಿತು.

ಕ್ರೀಡಾಂಗಣದ ಸುತ್ತಲಿನ ಎಲ್ಲಾ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದೆ, ವರದಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ, ಎಸ್ ಡಬ್ಲ್ಯುಎಂ ಹರೀಶ್ ಕುಮಾರ್ ಕೆ ಹೇಳುತ್ತಾರೆ.

Footwears
ಬೆಂಗಳೂರು ಕಾಲ್ತುಳಿತ ಪ್ರಕರಣ: ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶ; ನ್ಯಾ. ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚನೆ!

ಇಷ್ಟು ದೊಡ್ಡ ಪ್ರಮಾಣದ ಪಾದರಕ್ಷೆಗಳ ತ್ಯಾಜ್ಯವನ್ನು ನೋಡುತ್ತಿರುವುದು ಇದೇ ಮೊದಲು" ಎಂದು ಬಿಬಿಎಂಪಿಯ SWM (ಶಿವಾಜಿನಗರ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಭಿಲಾಷ್ ಎಂ ಎಂ ಹೇಳುತ್ತಾರೆ. ಸಾಮಾನ್ಯವಾಗಿ, ಪಾದರಕ್ಷೆಗಳ ತ್ಯಾಜ್ಯವು ಧಾರ್ಮಿಕ ಸ್ಥಳಗಳಿಂದ ಅಥವಾ ಸಾರ್ವಜನಿಕ ಸಮಾರಂಭಗಳಿಂದ ಬರುತ್ತದೆ, ಆದರೆ ಈ ಪ್ರಮಾಣದಲ್ಲಿ ಎಂದಿಗೂ ಬರುವುದಿಲ್ಲ. ತ್ಯಾಜ್ಯದಿಂದ ಇಂಧನ ಸ್ಥಾವರವಿಲ್ಲದಿದ್ದರೆ, ಈ ತ್ಯಾಜ್ಯವು ಮಣ್ಣು ಪಾಲಾಗುತ್ತಿತ್ತು. ಈಗ, ಇದನ್ನು ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತಿದೆ ಎಂದರು.

ಬಿಡದಿ ಸ್ಥಾವರದಲ್ಲಿರುವ KPCL ಅಧಿಕಾರಿಯೊಬ್ಬರು, ಇದು ಅಪರೂಪದ ತ್ಯಾಜ್ಯ ಎಂದರು. ಪಾದರಕ್ಷೆಗಳನ್ನು ಹೇಗೆ ಸಂಸ್ಕರಿಸಬೇಕೆಂದು ಆರಂಭದಲ್ಲಿ ಖಚಿತವಿರಲಿಲ್ಲ. ಆಂತರಿಕ ಚರ್ಚೆಗಳ ನಂತರ, ಅದರಲ್ಲಿ ಹೆಚ್ಚಿನದನ್ನು ವಿದ್ಯುತ್ ಉತ್ಪಾದಿಸಲು ಬಳಸುವ ಮಾರ್ಗವನ್ನು ನಾವು ಕಂಡುಕೊಂಡೆವು. ಚರ್ಮ ಮತ್ತು ಆಮದು ಮಾಡಿದ ಬೂಟುಗಳು ಸಂಸ್ಕರಿಸಲು ಕಷ್ಟ. ಅದು ನಮಗೆ ಸವಾಲಾಗಿತ್ತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com