COMEDK: ಟಾಪ್ 100 ರ‍್ಯಾಂಕ್ ಗಳಲ್ಲಿ 55 ಕರ್ನಾಟಕ ವಿದ್ಯಾರ್ಥಿಗಳು

1,31,937 ಅರ್ಜಿದಾರರಲ್ಲಿ, 1.13 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು, ಕಾಮೆಡ್ ಕೆ ಮೇ 10 ಮತ್ತು ಮೇ 25 ರಂದು ದೇಶಾದ್ಯಂತ 179 ನಗರಗಳಲ್ಲಿ ಎರಡು ಹಂತಗಳಲ್ಲಿ ನಡೆಸಲಾಯಿತು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (COMEDK) 2025 ರ ಪದವಿಪೂರ್ವ ಪ್ರವೇಶ ಪರೀಕ್ಷೆಯ (UGET) ಫಲಿತಾಂಶಗಳನ್ನು ಪ್ರಕಟಿಸಿದ್ದು, ಈ ವರ್ಷ ಕರ್ನಾಟಕದ ವಿದ್ಯಾರ್ಥಿಗಳು ಅಗ್ರ 100 ರ‍್ಯಾಂಕ್‌ಗಳಲ್ಲಿ 55 ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.

ದಕ್ಷಿಣ ಕನ್ನಡದ ಮೂಡಬಿದ್ರಿಯ ಶಿಶಿರ್ ಎಚ್ ಶೆಟ್ಟಿ ಅಗ್ರ ರ‍್ಯಾಂಕ್ ಗಳಿಸಿದರೆ, ಪಂಜಾಬ್‌ನ ಮಲಿಕ್ ಜೈನ್ ಮತ್ತು ಕರ್ನಾಟಕದ ವರುಣ್ ಜೆ ಕುಮಾರ್ ಕ್ರಮವಾಗಿ ಎರಡನೇ ಮತ್ತು ಮೂರನೇ ರ‍್ಯಾಂಕ್ ಗಳಿಸಿದ್ದಾರೆ. ಇತರ ರಾಜ್ಯಗಳ ವಿದ್ಯಾರ್ಥಿಗಳ ಜೊತೆಗೆ ಕರ್ನಾಟಕದ ನಾಲ್ಕು ಅಭ್ಯರ್ಥಿಗಳು ಮೊದಲ 10 ಸ್ಥಾನದಲ್ಲಿದ್ದಾರೆ. ಒಟ್ಟು 11,412 ರಲ್ಲಿ ಕರ್ನಾಟಕದ ಸುಮಾರು 3,330 ವಿದ್ಯಾರ್ಥಿಗಳು ಶೇಕಡಾ 90–100 ಶ್ರೇಣಿಯಲ್ಲಿದ್ದಾರೆ.

1,31,937 ಅರ್ಜಿದಾರರಲ್ಲಿ, 1.13 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು, ಕಾಮೆಡ್ ಕೆ ಮೇ 10 ಮತ್ತು ಮೇ 25 ರಂದು ದೇಶಾದ್ಯಂತ 179 ನಗರಗಳಲ್ಲಿ ಎರಡು ಹಂತಗಳಲ್ಲಿ ನಡೆಸಲಾಯಿತು.

Representational image
ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್ ನ 10 ರ್ಯಾಂಕ್ ನಲ್ಲಿ ಟಾಪ್ 9 ಬಾಲಕರು!

ಮೇ 28 ರಂದು ಪ್ರಕಟಿಸಲಾದ ತಾತ್ಕಾಲಿಕ ಕೀ ವಿರುದ್ಧ 69 ಆಕ್ಷೇಪಣೆಗಳು ಬಂದಿದ್ದು, ಕಾಮೆಡ್ ಕೆ ಒಕ್ಕೂಟವು ಪರಿಶೀಲಿಸಿದ ನಂತರ, ಜೂನ್ 4 ರಂದು ಅಂತಿಮ ಉತ್ತರ ಕೀ ಯನ್ನು ಬಿಡುಗಡೆ ಮಾಡಲಾಯಿತು.

ದಕ್ಷಿಣ ಕನ್ನಡದ ಮೂಡಬಿದ್ರಿಯ ಎಕ್ಸಲೆಂಟ್ ಪಿಯು ಕಾಲೇಜಿನ ಶಿಶಿರ್ ಎಚ್ ಶೆಟ್ಟಯ್ COMEDK ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಹರೀಶ್ ಶೆಟ್ಟಿ ಮತ್ತು ಸುಮಿತಾ ಶೆಟ್ಟಿ ದಂಪತಿಯ ಪುತ್ರ ಶಿಶಿರ್ ಎಚ್ ಶೆಟ್ಟಿ ಜೆಇಇ ಅಡ್ವಾನ್ಸ್‌ಡ್‌ನಲ್ಲಿ 664 ನೇ ರ‍್ಯಾಂಕ್, ಜೆಇಇ ಮೇನ್ಸ್‌ನಲ್ಲಿ 99.971 ಪರ್ಸೆಂಟೈಲ್, ಕೆಸಿಇಟಿಯಲ್ಲಿ ಎಂಜಿನಿಯರಿಂಗ್‌ನಲ್ಲಿ 4 ನೇ ರ‍್ಯಾಂಕ್ ಮತ್ತು ಪಿಯುಸಿಯಲ್ಲಿ 7 ನೇ ರ‍್ಯಾಂಕ್ ಗಳಿಸಿದ್ದಾರೆ.

ನನಗೆ ತುಂಬಾ ಸಂತೋಷ ತಂದಿದೆ. ಅನುಭವಿ ಅಧ್ಯಾಪಕರು, ಶಿಸ್ತುಬದ್ಧ ವ್ಯವಸ್ಥೆ, ಪ್ರಶಾಂತ ಹಸಿರು ಕ್ಯಾಂಪಸ್ ಮತ್ತು ಉತ್ತಮವಾಗಿ ಯೋಜಿತ ಶೈಕ್ಷಣಿಕ ವೇಳಾಪಟ್ಟಿಯೊಂದಿಗೆ ಎಕ್ಸಲೆಂಟ್ ಮೂಡಬಿದಿರೆ ಹೆಚ್ಚು ಅನುಕೂಲಕರ ಕಲಿಕಾ ವಾತಾವರಣವನ್ನು ನೀಡುತ್ತದೆ. ನಾನು ಐಐಎಸ್‌ಸಿಯಲ್ಲಿ ಬಿ.ಟೆಕ್ ನ್ನು ಮುಂದುವರಿಸಲು ಆಶಿಸುತ್ತೇನೆ ಎಂದು ಶಿಶಿರ್ ಹೇಳಿದರು. ನನ್ನ ಮಗನ ಸಾಧನೆ ನನಗೆ ಅಪಾರ ಸಂತೋಷವನ್ನು ತಂದಿದೆ. ಎಕ್ಸಲೆಂಟ್ ಮೂಡಬಿದಿರೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ತಡರಾತ್ರಿಯಾದರೂ ನನ್ನ ಮಗನ ಅಧ್ಯಯನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂದೇಹವನ್ನು ತಾಳ್ಮೆಯಿಂದ ಪರಿಹರಿಸಿದರು ಎಂದು ಸುಮಿತಾ ಹೇಳಿದರು. ಎಕ್ಸಲೆಂಟ್ ಮೂಡಬಿದಿರೆಯ ಅಧ್ಯಕ್ಷ ಯುವರಾಜ ಜೈನ್, ಶಿಶಿರ್ ಅವರ ಯಶಸ್ಸು ಬಹಳ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com