
ತುಮಕೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಉಂಟಾಗಿ ತುಮಕೂರಿನ ಮನೋಜ್ ಸಾವನ್ನಪ್ಪಿದ್ದು, ಇದೀಗ ಮೊಮ್ಮಗನ ಸಾವಿನ ನೋವಿನಲ್ಲೇ ಅಜ್ಜಿ ಕೊನೆಯುಸಿರೆಳೆದಿದ್ದಾರೆ.
ಕುಣಿಗಲ್‌ನ ನಾಗಸಂದ್ರದಲ್ಲಿ ಮನೋಜ್ ಅಜ್ಜಿ ದೇವೀರಮ್ಮ (70) ಮೃತಪಟ್ಟ ವೃದ್ಧೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ 11 ಮಂದಿ ಆರ್‌ಸಿಬಿ ಅಭಿಮಾನಿಗಳ ಪೈಕಿ ತುಮಕೂರಿನ ಮನೋಜ್ ಕೂಡ ಮೃತ ಪಟ್ಟಿದ್ದರು.
ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರದ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ಮನೋಜ್ ಯಲಹಂಕದಲ್ಲಿ ತಂದೆ, ತಾಯಿ ಹಾಗೂ ತಂಗಿ ಜೊತೆ ವಾಸವಿದ್ದ. ಆರ್‌ಸಿಬಿ ವಿಜಯೋತ್ಸವ ದಿನ ಸ್ನೇಹಿತರೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದ ಮನೋಜ್ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದ. ಇದೀಗ ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೂಡ ನಿಧನರಾಗಿದ್ದಾರೆ.
ಇನ್ನು ಮೃತ ಮನೋಜ್ ಕುಟುಂಬಕ್ಕೆ ಡಿಸಿ ಶುಭಕಲ್ಯಾಣ್ ಭಾನುವಾರ 25 ಲಕ್ಷ ರೂ ಪರಿಹಾರದ ಚೆಕ್ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮನೋಜ್ ತಂದೆ ದೇವರಾಜ್, ಚೆಕ್ ಕೊಟ್ಟಿದ್ದಾರೆ. ಚೆಕ್ ಕೊಟ್ಟರೆ ಮಗಾ ಬರ್ತಾನಾ? ಎಂದು ಗೋಳಾಡಿದ್ದಾರೆ.
Advertisement