ಕೊಡಗು: ಭಾವಿ ಪತಿಯಿಂದ ವಿದ್ಯಾರ್ಥಿನಿ ಕೊಲೆ; ಸಂತ್ರಸ್ತೆ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಶಾಸಕ ಮಂತರ್ ಗೌಡ

ಕೊಡಗಿನ ಸುರಲಬ್ಬಿ ವ್ಯಾಪ್ತಿಯ ಮುಟ್ಲು ಗ್ರಾಮದ 15 ವರ್ಷದ ಮೀನಾ ಎಂಬ ಬಾಲಕಿಯನ್ನು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ದಿನವೇ ಆಕೆಯ 35 ವರ್ಷದ ಭಾವಿ ಪತಿ ಓಂಕಾರಪ್ಪ ಬರ್ಬರವಾಗಿ ಹತ್ಯೆ ಮಾಡಿದ್ದ
MLA Gowda spent his own money Rs 8.5 lakh to build the house for the family.
ಸಂತ್ರಸ್ತೆ ಕುಟುಂಬಕ್ಕೆ ಮನೆ ಹಸ್ತಾಂತರಿಸಿದ ಮಂಥರ್ ಗೌಡ
Updated on

ಮಡಿಕೇರಿ: ಕಳೆದ ವರ್ಷ SSLC ಪರೀಕ್ಷೆ ಫಲಿತಾಂಶದ ದಿನ ಹತ್ಯೆಯಾಗಿದ್ದ ವಿದ್ಯಾರ್ಥಿನಿ ಮೀನಾ ಪೋಷಕರಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದ ಶಾಸಕರಾದ ಡಾ.ಮಂತರ್ ಗೌಡ ನುಡಿದಂತೆ ನಡೆದು ಮನೆ ನಿರ್ಮಿಸಿ ದಿ. ಮೀನಾ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಕೊಡಗಿನ ಸುರಲಬ್ಬಿ ವ್ಯಾಪ್ತಿಯ ಮುಟ್ಲು ಗ್ರಾಮದ 15 ವರ್ಷದ ಮೀನಾ ಎಂಬ ಬಾಲಕಿಯನ್ನು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ದಿನವೇ ಆಕೆಯ 35 ವರ್ಷದ ಭಾವಿ ಪತಿ ಓಂಕಾರಪ್ಪ ಬರ್ಬರವಾಗಿ ಹತ್ಯೆ ಮಾಡಿದ್ದ.

ಆರೋಪಿಯು ಸಂತ್ರಸ್ತೆಯ ತಲೆಯನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದರಿಂದ. ಈ ಕೊಲೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತುು. ಆರೋಪಿಯನ್ನು ನಂತರ ಬಂಧಿಸಲಾಗಿದ್ದು, ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಮೀನಾ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಅವರು ತಾತ್ಕಾಲಿಕ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಸಂತ್ರಸ್ತೆಯ ಕುಟುಂಬದ ಸ್ಥಿತಿಯ ಕುರಿತು ಮಾಧ್ಯಮ ವರದಿಗಳ ನಂತರ ಶಾಸಕ ಮಂಥರ್ ಗೌಡ ತಮ್ಮ ಸ್ವಂತ ಹಣದಿಂದ ಕುಟುಂಬಕ್ಕೆ ಮನೆ ನಿರ್ಮಿಸುವ ಭರವಸೆ ನೀಡಿದ್ದರು. ಕುಟುಂಬಕ್ಕೆ ಮನೆ ನಿರ್ಮಿಸಲು ಗೌಡ ತಮ್ಮ ಸ್ವಂತ ಹಣದಿಂದ 8.5 ಲಕ್ಷ ರೂ. ಖರ್ಚು ಮಾಡಿದ್ದರು.

MLA Gowda spent his own money Rs 8.5 lakh to build the house for the family.
ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಎ.ಮಂಜು ಪುತ್ರ ಮಂಥರ್ ಗೌಡ ವಜಾ

ಸಂತ್ರಸ್ತರ ಮನೆಗೆ ನಾನು ಭೇಟಿ ನೀಡಿದಾಗ, ಕುಟುಂಬವು ತಮ್ಮ ಕಷ್ಟವನ್ನು ವಿವರಿಸಿತು. ನಾನು ಅವರಿಗೆ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದೆ ಮತ್ತು ನಾನು ಅದನ್ನು ಪೂರೈಸಿದ್ದೇನೆ. ಈ ಕೆಲಸ ನನಗೆ ಅಪಾರ ತೃಪ್ತಿ ನೀಡಿದೆ" ಎಂದು ಡಾ. ಮಂತರ್ ಹೇಳಿದರು.

ನಾವು ಅವರಿಗೆ ಕೃತಜ್ಞರಾಗಿರುತ್ತೇವೆ. ಈಗ ಕಾಲೇಜಿನಲ್ಲಿ ಇರಬೇಕಾದ ಮೀನಾ ನೆನಪುಗಳು ನಮ್ಮನ್ನು ನಿರಂತರವಾಗಿ ಕಾಡುತ್ತಿವೆ. ನಮ್ಮ ಮಗಳು ಹೊಸ ಮನೆಯಲ್ಲಿ ನಮ್ಮೊಂದಿಗೆ ಇರುವುದಿಲ್ಲ ಎಂಬ ವಿಷಯವು ನಮಗೆ ತುಂಬಾ ದುಃಖ ತರುತ್ತದೆ ಎಂದು ಮೀನಾ ಅವರ ತಾಯಿ ಜಾನಕಿ ಹಂಚಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com