ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ: ನೀರಿನಲ್ಲಿ ಕೊಚ್ಚಿಹೋಗಿ ಇಬ್ಬರು ಸಾವು

ಧಾರವಾಡ ಜಿಲ್ಲೆಯಾದ್ಯಂತ ಬುಧವಾರ ಸುರಿದ ಧಾರಾಕಾರ ಮಳೆಯ ನಡುವೆ ಈ ಘಟನೆಗಳು ನಡೆದಿವೆ. ಕಾಣೆಯಾದವರ ವಿವರಗಳು ತಕ್ಷಣ ತಿಳಿದುಬಂದಿಲ್ಲ.
Vehicles plough through NH-66 in Bhatkal after heavy rainfall on Wednesday
ಭಟ್ಕಳದಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ತುಂಬಿದ ನೀರಿನಲ್ಲಿ ವಾಹನಗಳು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚರಿಸುತ್ತಿರುವುದು
Updated on

ಧಾರವಾಡ: ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ 24 ಗಂಟೆ ಸುರಿದ ಧಾರಾಕಾರ ಮಳೆಗೆ ಅಯೋಧ್ಯಾ ನಗರದ ಒಬ್ಬರು ಮತ್ತು ಹುಬ್ಬಳ್ಳಿಯ ನೇಕಾರ ನಗರದ ಮತ್ತೊಬ್ಬರು ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾರೆ, ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಒಬ್ಬ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಧಾರವಾಡ ಜಿಲ್ಲೆಯಾದ್ಯಂತ ಬುಧವಾರ ಸುರಿದ ಧಾರಾಕಾರ ಮಳೆಯ ನಡುವೆ ಈ ಘಟನೆಗಳು ನಡೆದಿವೆ. ಕಾಣೆಯಾದವರ ವಿವರಗಳು ತಕ್ಷಣ ತಿಳಿದುಬಂದಿಲ್ಲ.

ಕುಂದಗೋಳ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ, ಟ್ರ್ಯಾಕ್ಟರ್ ಬಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಬ್ಯಾಹಟ್ಟಿ ಗ್ರಾಮದಲ್ಲಿ ಎರಡು ಕುರಿಗಳು ಹೊಳೆಯಲ್ಲಿ ಕೊಚ್ಚಿ ಹೋಗಿವೆ. ಸುಮಾರು 45 ಮನೆಗಳು ಹಾನಿಗೊಳಗಾಗಿದ್ದು, ಅವುಗಳಲ್ಲಿ ಕೆಲವು ಸಂಪೂರ್ಣವಾಗಿ ಕುಸಿದಿದ್ದರೆ, ಇನ್ನು ಕೆಲವು ಭಾಗಶಃ ಹಾನಿಗೊಳಗಾಗಿವೆ.

ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಹೊಳೆಗಳು ಅಪಾಯದ ಮಟ್ಟಕ್ಕಿಂತ ಮೀರಿ ಹರಿಯುತ್ತಿವೆ. ರಕ್ಷಣಾ ತಂಡಗಳ ಸಕಾಲಿಕ ಹಸ್ತಕ್ಷೇಪದಿಂದ ಈ ಹೊಳೆಗಳ ಬಳಿ ಸಿಲುಕಿಕೊಂಡಿದ್ದ ಕೆಲವು ರೈತರನ್ನು ರಕ್ಷಿಸಲಾಗಿದೆ.

ನವಲಗುಂದದಲ್ಲಿ 23 ಮನೆಗಳು ಭಾಗಶಃ ಹಾನಿಗೊಳಗಾಗಿವೆ, ಹುಬ್ಬಳ್ಳಿ ನಗರದಲ್ಲಿ 3, ಕುಂದಗೋಳ 2 ಮತ್ತು ಅಣ್ಣಿಗೇರಿಯಲ್ಲಿ - 15, ಎರಡು ಮನೆಗಳು ಕುಸಿದಿವೆ. ಬೆಳೆ ನಷ್ಟದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅಂದಾಜು ಮಾಡುತ್ತಿದ್ದಾರೆ.

ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಬುಧವಾರ 90.8 ಮಿ.ಮೀ.ವರೆಗೆ ಭಾರಿ ಮಳೆಯಾಗಿದ್ದು, ಅಳ್ನಾವರ ತಾಲ್ಲೂಕಿನಲ್ಲಿ ಕನಿಷ್ಠ 4.8 ಮಿ.ಮೀ. ಮಳೆಯಾಗಿದೆ. ಇನ್ನೂ ಎರಡು ದಿನಗಳವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com