
ಬೆಂಗಳೂರು: ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರು ಹೊಸ ಸಾಮಾಜಿಕ-ಆರ್ಥಿಕ ಮರು ಸಮೀಕ್ಷೆ (SES) ಘೋಷಣೆಯನ್ನು ಸ್ವಾಗತಿಸಿದ್ದಾರೆ, ಇದರ ಜೊತೆಗೆ ತಮ್ಮ ತಮ್ಮ ಸಮುದಾಯಗಳ ಡಿಜಿಟಲ್ ಜನಗಣತಿಯನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.
ಸರ್ಕಾರದ ಈ ಯೋಜನೆಯನ್ನು ಅವರು ಬೆಂಬಲಿಸುತ್ತಿದ್ದರೂ, ಎರಡೂ ಸಮುದಾಯದ ನಾಯಕರು ಕಡಿಮೆ ಪ್ರಾತಿನಿಧ್ಯದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಧಿಕೃತ ದತ್ತಾಂಶದಲ್ಲಿ ಯಾವುದೇ ವ್ಯತ್ಯಾಸಗಳಾಗದಂತೆ ನೋಡಿಕೊಳ್ಳಲು ತಮ್ಮದೇ ಆದ ಅಂಕಿಅಂಶಗಳೊಂದಿಗೆ ಗಣತಿಗೆ ಯೋಜಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿಎಚ್.ಎಂ. ರೇಣುಕಾ ಪ್ರಸನ್ನ ಮಾತನಾಡಿ. ಅವರು ತಮ್ಮ ಸ್ವತಂತ್ರ ಸಮೀಕ್ಷೆಯನ್ನು ಸುಲಭಗೊಳಿಸಲು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು TNIE ಗೆ ತಿಳಿಸಿದರು. ಪ್ರತಿ ಹಳ್ಳಿಯಲ್ಲಿ, ವ್ಯಕ್ತಿಗಳನ್ನು ಒಳಗೊಳ್ಳಲಾಗುತ್ತದೆ. ಅವರು ನಮ್ಮ ವೆಬ್‌ಸೈಟ್‌ಗೆ ಡೇಟಾವನ್ನು ಅಪ್‌ಲೋಡ್ ಮಾಡುತ್ತಾರೆ. ಗ್ರಾಮ ಮಟ್ಟದಲ್ಲಿ ಮಹಾಸಭಾ ಘಟಕಗಳು ಸಮುದಾಯದ ಸದಸ್ಯರ ಜನನ ಮತ್ತು ಮರಣದ ಕುರಿತು ನಿಯಮಿತ ನವೀಕರಣಗಳನ್ನು ಅಪ್‌ಲೋಡ್ ಮಾಡಲು ಸಜ್ಜುಗೊಳಿಸಲಾಗುವುದು ಎಂದು ಅವರು ಹೇಳಿದರು. ಈ ಯೋಜನೆ ಕುರಿತು ಮತ್ತಷ್ಟು ಚರ್ಚಿಸಲು ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಸಭೆ ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಅದೇ ರೀತಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚಪ್ಪ ಗೌಡ ಅವರು ಆದಿಚುಂಚನಗಿರಿ ಮಠದ ಮುಖ್ಯಸ್ಥ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಂಘವು ಡಿಜಿಟಲ್ ಜನಗಣತಿಯನ್ನು ನಡೆಸಲಿದೆ ಎಂದು ಘೋಷಿಸಿದರು.
ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿಯಲ್ಲಿನ ಯಾವುದೇ ತಪ್ಪುಗಳು ನಡೆದರೆ ನಾವು ವಿರೋಧಿಸುತ್ತೇವೆ. ಸಮುದಾಯಗಳಿಗೆ ಅವರಿಗೆ ಅರ್ಹವಾದ ಹಕ್ಕು ಪಡೆಯುವು ಉದ್ದೇಶದಿಂದ ಗಣತಿ ವೈಜ್ಞಾನಿಕವಾಗಿರಬೇಕು. ದತ್ತಾಂಶವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿದರೆ, ಸಂಖ್ಯೆಗಳು ಬದಲಾಗಿದ್ದರೂ ನಾವು ಅದನ್ನೂ ಸ್ವೀಕರಿಸುತ್ತೇವೆ ಎಂದು ಅವರು ಹೇಳಿದರು. ಹೊಸ ಸಮೀಕ್ಷೆಯನ್ನು ಪ್ರಾರಂಭಿಸಿದ್ದಕ್ಕಾಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸಿದರು.
ನ್ಯಾಯ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ನಿವೃತ್ತ ನ್ಯಾಯಾಧೀಶರು ಸಮೀಕ್ಷೆಯ ನೇತೃತ್ವ ವಹಿಸಬೇಕೆಂದು ಕೆಂಚಪ್ಪಗೌಡ ಸೂಚಿಸಿದ್ದಾರೆ. ಮುಖ್ಯಮಂತ್ರಿ ಘೋಷಿಸಿದ 90 ದಿನಗಳ ಕಾಲಾವಕಾಶವು ಸಾಕಾಗುವುದಿಲ್ಲ ಮತ್ತು ಅದನ್ನು ವಿಸ್ತರಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪ ರೆಡ್ಡಿ ಅವರು ಹೊಸ ಜಾತಿ ಜನಗಣತಿಯನ್ನು ಆಧಾರ್‌ನೊಂದಿಗೆ ಜೋಡಿಸಬೇಕು ಮತ್ತು ಪ್ರತಿ ಕುಟುಂಬದ ನಿಖರವಾದ ಆರ್ಥಿಕ ವಿವರಗಳನ್ನು ಸೇರಿಸಲು ಜಿಯೋ-ಟ್ಯಾಗಿಂಗ್ ಸೇರಿಸಬೇಕೆಂದು ಶಿಫಾರಸು ಮಾಡಿದರು. ದತ್ತಾಂಶ ಸಂಗ್ರಹದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಗ್ರಾಮ ಲೆಕ್ಕಿಗರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ತೊಡಗಿಸಿಕೊಳ್ಳಬೇಕೆಂದು ಸೂಚಿಸಿದ್ದಾರೆ.
ಏತನ್ಮಧ್ಯೆ, ಕರ್ನಾಟಕ ಪ್ರದೇಶ ಕುರುಬ ಸಂಘವು ಕಾಂತರಾಜು ಆಯೋಗದ SES-2015 ವರದಿ ಮತ್ತು ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಶಿಫಾರಸುಗಳ ಕುರಿತು ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದೆ.
ಸರ್ಕಾರವು SES-2015 ವರದಿಗಾಗಿ ತನ್ನ ಯೋಜನೆಗಳನ್ನು ಬಹಿರಂಗಪಡಿಸಬೇಕು ಮತ್ತು ಶಿಫಾರಸುಗಳನ್ನು ತಿರಸ್ಕರಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಹೊಸ ಸಮೀಕ್ಷೆಯನ್ನು ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಬೇಕು ಮತ್ತು ಪ್ರಕಟಿಸಬೇಕು. ವೈಜ್ಞಾನಿಕ ಹಾಗೂ ನಿಖರವಾದ ರೀತಿಯಲ್ಲಿ ನಡೆಸಬೇಕು ಎಂದು ರಾಮಚಂದ್ರಪ್ಪ ಹೇಳಿದರು. ಸಮೀಕ್ಷೆಯ ಮೇಲ್ವಿಚಾರಣೆಗೆ ಎಲ್ಲಾ ಹಿನ್ನೆಲೆಯ ಜನಪ್ರತಿನಿಧಿಗಳು ಮತ್ತು ಸಮುದಾಯದ ನಾಯಕರನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸುವ ಹಾಗೂ ಭವಿಷ್ಯದಲ್ಲಿ ಆಗುವ ದೋಷಗಳನ್ನು ತಡೆಗಟ್ಟಲು ತಜ್ಞರ ಸಮಿತಿಯನ್ನು ರಚಿಸುವ ಅಗತ್ಯತೆ ಬಗ್ಗೆ ತಿಳಿಸಿದರು. "ಸಮೀಕ್ಷೆ ವಿಳಂಬವಾದರೆ ಅಥವಾ ತಪ್ಪಾಗಿ ನಿರ್ವಹಿಸಿದರೆ, ತುಳಿತಕ್ಕೊಳಗಾದ ಸಮುದಾಯಗಳು ವ್ಯಾಪಕ ಪ್ರತಿಭಟನೆ ನಡೆಸುತ್ತವೆ ಎಂದು ಅವರು ಎಚ್ಚರಿಸಿದರು.
Advertisement