ಹಾಕಿ ನಕ್ಷೆಯಲ್ಲಿ ಶಿವಮೊಗ್ಗದ ಹೆಸರು ಅಚ್ಚೊತ್ತಿದ ಸುನಿಲ್ ಪಿಬಿ!

ಶಿವಮೊಗ್ಗದ ಸೊರಬ ತಾಲ್ಲೂಕಿನ ತಲ್ಲೂರಿನಲ್ಲಿ ದಿನಗೂಲಿ ಕಾರ್ಮಿಕ ಪೋಷಕರ ಇಬ್ಬರು ಮಕ್ಕಳಲ್ಲಿ ಕಿರಿಯ ಸುನಿಲ್ ಸಾಧನೆಯಲ್ಲಿ ಬಹುದೂರ ಸಾಗಿ ಬಂದಿದ್ದಾರೆ.
Sunil PB
ಸುನಿಲ್ ಪಿಬಿ
Updated on

ಶಿವಮೊಗ್ಗ: ಶಿವಮೊಗ್ಗ ಎಂದರೆ ಕಣ್ಣಮುಂದೆ ಬರುವುದು ಹಚ್ಚ ಹಸಿರಿನ ತಾಣ, ಪ್ರಕೃತಿ, ಜಲಪಾತಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆ, ನೀನಾಸಂ ನಾಟಕ ಶಾಲೆಗೆ ಹೆಸರುವಾಸಿಯಾಗಿದೆ. ಈ ಜಿಲ್ಲೆಯ 20 ವರ್ಷದ ಚಿರಯುವಕ ಸುನಿಲ್ ಪಿಬಿ ಮುಂದಿನ ತಿಂಗಳು ಬರ್ಲಿನ್‌ನಲ್ಲಿ ನಡೆಯಲಿರುವ ನಾಲ್ಕು ರಾಷ್ಟ್ರಗಳ ಜೂನಿಯರ್ ಟೂರ್ನಮೆಂಟ್‌ನಲ್ಲಿ ಭಾರತದ ಜೆರ್ಸಿಯನ್ನು ಧರಿಸುವ ಮೂಲಕ ಶಿವಮೊಗ್ಗವನ್ನು ಅಂತಾರಾಷ್ಟ್ರೀಯ ಹಾಕಿ ನಕ್ಷೆಯಲ್ಲಿ ಸೇರಿಸಲು ಸಜ್ಜಾಗಿದ್ದಾರೆ.

ಶಿವಮೊಗ್ಗದ ಸೊರಬ ತಾಲ್ಲೂಕಿನ ತಲ್ಲೂರಿನಲ್ಲಿ ದಿನಗೂಲಿ ಕಾರ್ಮಿಕ ಪೋಷಕರ ಇಬ್ಬರು ಮಕ್ಕಳಲ್ಲಿ ಕಿರಿಯ ಸುನಿಲ್ ಸಾಧನೆಯಲ್ಲಿ ಬಹುದೂರ ಸಾಗಿ ಬಂದಿದ್ದಾರೆ.

ನನ್ನ ತಂದೆ ಪಾಲಾಕ್ಷಪ್ಪ ಅವರಿಗೆ ವಯಸ್ಸಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗುತ್ತಿಲ್ಲ. ತಾಯಿ ರತ್ನಮ್ಮ ಮತ್ತು ಅಣ್ಣ ಸಂದೀಪ್ ದಿನಗೂಲಿ ಕೃಷಿ ಕಾರ್ಮಿಕರಾಗಿ ಅಥವಾ ಮೇಸ್ತ್ರಿ ಕೆಲಸ ಮಾಡುತ್ತಾರೆ. ನಮ್ಮ ಹಳ್ಳಿಯಲ್ಲಿ ಯಾರೂ ನಾನು ಒಂದು ದಿನ ಭಾರತಕ್ಕಾಗಿ ಆಡುತ್ತೇನೆ ಎಂದು ಭಾವಿಸಿರಲಿಲ್ಲ ಎಂದು The New Indian Express ಅವರನ್ನು ಸಂಪರ್ಕಿಸಿದಾಗ ಸುನಿಲ್ ಸಂತೋಷದಿಂದ ಹೇಳಿದರು.

ಜೀವನದಲ್ಲಿ ತಿರುವು

ಸುಮಾರು ಹನ್ನೊಂದು ವರ್ಷಗಳ ಹಿಂದೆ ಸುನಿಲ್ ಅವರ ಜೀವನ ಬದಲಾಯಿಸುವ ಕ್ಷಣ ಬಂದಿತು. ಸುಂದರೇಶ್ ಎಂಬ ಹಾಕಿ ಕೋಚ್ ಪ್ರತಿಭಾನ್ವಿತ ಮಕ್ಕಳ ಹುಡುಕಾಟದಲ್ಲಿ ಶಾಲೆಗೆ ಬಂದಿದ್ದರು. ಅವರು ಸುನಿಲ್ ಅವರ ಶಾಲೆಗೆ ಸ್ಕೌಟಿಂಗ್ ಪ್ರವಾಸದಲ್ಲಿದ್ದರು. ಸುನಿಲ್ ಅವರನ್ನು ಕೆಲವು ನಿಯಮಿತ ಪರೀಕ್ಷೆಗಳಿಗೆ ಒಳಪಡಿಸಿದ ನಂತರ, ಸುಂದರೇಶ್ ಯುವಕನ ಪ್ರತಿಭೆ ಕಂಡು ಮನಸೂರೆಗೊಂಡರು.

ಕೆಲವು ಪರೀಕ್ಷೆಗಳನ್ನು ಮಾಡಿದ ನಂತರ ಸುಂದರೇಶ್ ಸರ್ ನನ್ನನ್ನು 'ನೀವು ಹಾಕಿ ಆಡಲು ಆಸಕ್ತಿ ಹೊಂದಿದ್ದೀರಾ? ನಾನು ಹೌದು ಎಂದು ಹೇಳಿದೆ ಎಂದು ನೆನಪಿಸಿಕೊಳ್ಳುತ್ತಾರೆ.

ಸುನಿಲ್ 2015-16 ರಲ್ಲಿ ಶಿವಮೊಗ್ಗ ಕ್ರೀಡಾ ಹಾಸ್ಟೆಲ್‌ಗೆ ಸೇರಿದರು. 6 ನೇ ತರಗತಿಯಲ್ಲಿ ಸರ್ವೋದಯ ಶಾಲೆಗೆ ಸೇರಿಕೊಂಡರು. ನಂತರ ಅವರು ಡಿವಿಎಸ್ ಪ್ರೌಢಶಾಲೆಗೆ ತೆರಳಿದರು. 10 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಹಾಕಿ ಹಾಸ್ಟೆಲ್‌ಗೆ ಸೇರಲು ಕೂರ್ಗ್‌ಗೆ ಹೋಗಿ ಪಿಯುಸಿಗೆ ಸೇರಿಕೊಂಡರು.

ನಂತರದ ವರ್ಷ ಸುನಿಲ್ ಬೆಂಗಳೂರಿನಲ್ಲಿರುವ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ಗೆ ಡ್ರಿಬಲ್ ಮೂಲಕ ಪ್ರವೇಶಿಸಿದರು. ನಂತರ ಅವರು ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಕೋರ್ಸ್ ಗೆ ಸುರಾನ ಕಾಲೇಜಿಗೆ ಸೇರಿದರು.

2022 ರಲ್ಲಿ ಪದವಿ ಮೊದಲ ವರ್ಷದಲ್ಲಿ, ಸುನಿಲ್ ಕರ್ನಾಟಕ ಜೂನಿಯರ್ ತಂಡಕ್ಕೆ ಆಯ್ಕೆಯಾದರು. 2023 ರಲ್ಲಿ ಕರ್ನಾಟಕ ಪರ ಆಡಿದರು. 2024 ರಲ್ಲಿ, ಅವರು ಜಲಂಧರ್‌ನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ನಾಲ್ಕನೇ ಸ್ಥಾನದತ್ತ ಮುನ್ನಡೆಸಿದರು. ಈಗ, ಶಿವಮೊಗ್ಗದ ಸುನಿಲ್ ಗೆ ಬರ್ಲಿನ್ ಕಾಯುತ್ತಿದೆ.

Sunil PB
Vijay Hazare Trophy: ಕ್ರಿಕೆಟ್ ಲೋಕದ ಅಪರೂಪದ ದಾಖಲೆ ಬರೆದ 13 ವರ್ಷದ Vaibhav Suryavanshi

ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸಲು ನಾನು ಸಜ್ಜಾಗಿರುವುದರಿಂದ ಇದು ನನ್ನ ಜೀವನದಲ್ಲಿ ಒಂದು ಅದ್ಭುತ ಕ್ಷಣ. ಹಿಂದುಳಿದ ಹಳ್ಳಿಯಿಂದ ಬಂದ ನಾನು ಹಾಕಿ ಆಟಗಾರನಾಗುವ ಕನಸು ಕಂಡಿರಲಿಲ್ಲ. ನನ್ನ ಮೊದಲ ಕೋಚ್ ಸುಂದರೇಶ್ ಸರ್ ಅವರಿಗೆ ಎಲ್ಲಾ ಶ್ರೇಯಸ್ಸು ಸಲ್ಲುತ್ತದೆ, ಅವರು ನನ್ನನ್ನು ನನ್ನ ಹಳ್ಳಿಯಿಂದ ಶಿವಮೊಗ್ಗಕ್ಕೆ ಕರೆದೊಯ್ದು ಅವರ ಮಾರ್ಗದರ್ಶನದಲ್ಲಿ ಹಾಕಿ ಆಟಗಾರನನ್ನಾಗಿ ಮಾಡಿದರು. ನಮ್ಮ ತಂಡವು ಉತ್ತಮ ಪ್ರದರ್ಶನ ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ. ಎಂದರು.

ಈ ವರ್ಷದ ಆರಂಭದಲ್ಲಿ, ಸುನಿಲ್ ಕರ್ನಾಟಕ ಹಿರಿಯ ತಂಡಕ್ಕಾಗಿ ಆಡುವ ಅವಕಾಶವನ್ನು ಪಡೆದರು. ಕಳೆದ ಜನವರಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದ ಪರ ಆಡಿ ಚಿನ್ನದ ಪದಕ ಗೆದ್ದಿದ್ದರು.

ಸುನಿಲ್ ಒಬ್ಬ ಧೈರ್ಯಶಾಲಿ ಆಟಗಾರ ಎಂದು ಕೋಚ್ ಸುಂದರೇಶ್ ಬಣ್ಣಿಸಿದ್ದಾರೆ. ಅವರು ತುಂಬಾ ಪ್ರತಿಭಾನ್ವಿತರು. ಅವರು ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಮತ್ತು ದೇಶಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಅಂಕಿತಾ ಬಿಜಿ ಮತ್ತು ಕವಿಯರಸನ್ (ಇಬ್ಬರೂ ತಮಿಳುನಾಡಿನವರು), ಹರಿಹರನ್ (ಪಾಂಡಿಚೇರಿ), ವೆಂಕಟೇಶ್ (ಕೂರ್ಗ್) ಮತ್ತು ವಿಜಯ್ (ಬೆಂಗಳೂರು) ಸೇರಿದಂತೆ ಹಲವಾರು ತರಬೇತುದಾರರು ತಮಗೆ ಮಾರ್ಗದರ್ಶನ ನೀಡಿ ರೂಪಿಸಿದ್ದಾರೆ ಎಂದು ಸುನಿಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com