
ಜೆರೋಧಾ ಸಂಸ್ಥೆಯ ಸಹ ಸಂಸ್ಥಾಪಕರಾದ ನಿತಿನ್ ಕಾಮತ್ ಅವರು ಬೆಂಗಳೂರಿನ ದೇವಸ್ಥಾನದಲ್ಲಿ ತನ್ನ ಮಗ ಕಿಯಾನ್ ತನ್ನ ಅಜ್ಜಿ ರೇವತಿ ಕಾಮತ್ ಜೊತೆ ಸಂಗೀತ ಪ್ರದರ್ಶನ ನೀಡುತ್ತಿರುವುದನ್ನು ನೋಡಿ ಕಣ್ತುಂಬಿಕೊಳ್ಳುತ್ತಿರುವ ವಿಡಿಯೊವನ್ನು ರೇವತ್ ಕಾಮತ್ ತಮ್ಮ ಇನ್ಸ್ಚಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ತ್ಯಾಗರಾಜನಗರದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಶ್ಯಾಮಲಕೃಷ್ಣ ಸಂಗೀತ ಸಭೆಯಲ್ಲಿ ಅಜ್ಜಿ-ಮೊಮ್ಮಗ ಜೋಡಿ ಪ್ರದರ್ಶನ ನೀಡಿದ ವೀಡಿಯೊವನ್ನು ರೇವತಿ ಕಾಮತ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಖ್ಯಾತ ಉದ್ಯಮಿಗಳಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರ ತಾಯಿ ರೇವತಿ ಕಾಮತ್ ಅವರು ನಿತಿನ್ ಕಾಮತ್ ಪುತ್ರ ತಮ್ಮ ಮೊಮ್ಮಗ ಕಿಯಾನ್ ಮೃದಂಗ ಮತ್ತು ವೀಣೆ ಪ್ರದರ್ಶನ ನೀಡಿದ್ದಾರೆ. ತಮ್ಮ ಹೆತ್ತವರಾದ ಶ್ಯಾಮಲಾ ಮತ್ತು ಕೃಷ್ಣಮೂರ್ತಿ ಅವರಿಗೆ ಸಮರ್ಪಣೆಯಾಗಿ ವಿಶೇಷ ಕಾರ್ಯಕ್ರಮಕ್ಕೆ ತಾನು ಮತ್ತು ಕಿಯಾನ್ ಒಂದು ತಿಂಗಳಿಗೂ ಹೆಚ್ಚು ಕಾಲ ಅಭ್ಯಾಸ ಮಾಡಿ ಪ್ರದರ್ಶನ ನೀಡಿದೆವು ಎಂದು ರೇವತಿ ಕಾಮತ್ ಹೇಳಿಕೊಂಡಿದ್ದಾರೆ.
ನನ್ನ ಮೊಮ್ಮಗನೊಂದಿಗೆ ವೀಣೆಯೊಂದಿಗೆ ಪ್ರಾರಂಭವಾದ ಈ ಸಂಗೀತ ಕಚೇರಿ ನಂತರ ಯುವ ಪ್ರಸಿದ್ಧ ಕಲಾವಿದರ ಪ್ರದರ್ಶನದೊಂದಿಗೆ ಮುಂದುವರೆಯಿತು ಶ್ರೇಷ್ಠ ವಿದ್ವಾನ್ ವಿನಯ್ ಶರ್ವ ಅವರ ಸಂಗೀತ ಕಚೇರಿಯೊಂದಿಗೆ ಕೊನೆಗೊಂಡಿತು! ದಯವಿಟ್ಟು ನಿತಿನ್ ಕಾಮತ್ ತಮ್ಮ ಮಗನ ವಾದನವನ್ನು ಆನಂದಿಸುವುದನ್ನು ನೋಡಿ" ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ.
ಕಿಯಾನ್ ಸಲೀಸಾಗಿ ಪಕ್ಕವಾದ್ಯ ಮೃದಂಗದ ಮೇಲೆ ಕೈಚಳಕ ತೋರಿಸುವುದನ್ನು ತನ್ನ ಅಜ್ಜಿಯ ವೀಣಾವಾದನಕ್ಕೆ ಸಂಪೂರ್ಣವಾಗಿ ಪೂರಕವಾಗಿ ಬಾರಿಸುವುದನ್ನು ವೀಡಿಯೊ ತೋರಿಸುತ್ತದೆ. ಕ್ಯಾಮೆರಾ ಪ್ರೇಕ್ಷಕರಲ್ಲಿ ನಗುತ್ತಿರುವ ನಿತಿನ್ ಕಾಮತ್ ಸಂಗೀತಕ್ಕೆ ತಲೆದೂಗುತ್ತಿರುವುದನ್ನು ಕಾಣಬಹುದು.
ಅಜ್ಜಿ ಮತ್ತು ಮೊಮ್ಮಗ ವೇದಿಕೆ ಹಂಚಿಕೊಂಡಿರುವುದು ಇದೇ ಮೊದಲಲ್ಲ. 2023 ರಲ್ಲಿ, ನಿತಿನ್ ಕಾಮತ್ ಮೈಸೂರಿನಲ್ಲಿ ನಡೆದ ಕರ್ನಾಟಕ ಸಂಗೀತ ಉತ್ಸವದ ಇದೇ ರೀತಿಯ ವೀಡಿಯೊವನ್ನು ಹಂಚಿಕೊಂಡಿದ್ದರು, ಅಲ್ಲಿ ಅವರ ತಾಯಿ ಮತ್ತು ಮಗ ಒಟ್ಟಿಗೆ ಪ್ರದರ್ಶನ ನೀಡಿದರು. "ವೀಣೆಯಲ್ಲಿ ಅಜ್ಜಿ ಮೊಮ್ಮಗ ಕಿಯಾನ್ ಜೊತೆ ಮೃದುಂಗಂನಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಅಜ್ಜಿ ಕುಟುಂಬದಲ್ಲಿ ಕರ್ನಾಟಕ ಸಂಗೀತವನ್ನು ಮುಂದಿನ ಪೀಳಿಗೆಗೆ ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ" ಎಂದು ಬರೆದುಕೊಂಡಿದ್ದರು.
Advertisement