
ಜೊಯಿಡಾ: ಕಾಳಿ ಹುಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಶೇ. 83 ರಷ್ಟು ಅರಣ್ಯ ಪ್ರದೇಶ ಹೊಂದಿರುವ ದೇಶದ ಎರಡನೇ ಹಸಿರು ಪ್ರದೇಶವೆಂದು ಪರಿಗಣಿಸಲಾದ ಜೋಯಿಡಾ, ರಾಜ್ಯದ ಮೊದಲ 'ಸಾವಯವ ತಾಲ್ಲೂಕು' ಆಗುವ ಗುರಿ ಹೊಂದಿದೆ.
ಉತ್ತರ ಕನ್ನಡ ಜಿಲ್ಲೆಯ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ತಾಲೂಕಾದ ಜೋಯಿಡಾದ ರೈತರು ಈಗಾಗಲೇ ಶೂನ್ಯ-ರಸ ಗೊಬ್ಬರ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಜೊಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಯೋಜನೆ ಹತ್ತು ವರ್ಷಗಳಿಂದ ಹಂತ–ಹಂತವಾಗಿ ನಡೆಯುತ್ತಿದೆ.
ಜೊಯಿಡಾವನ್ನು ಸಾವಯವ ತಾಲ್ಲೂಕನ್ನಾಗಿ ಸರ್ಕಾರ ಅಥವಾ ಇಲಾಖೆ ಘೋಷಣೆ ಮಾಡಿಲ್ಲ. ಇದು ಮೂರು ವರ್ಷದ ಕಾರ್ಯಕ್ರಮ, ಸದ್ಯ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಇಲ್ಲಿನ ಕಾಡಿನಲ್ಲಿ ಸಿಗುವ ಜೇನು, ವಿವಿಧ ಹಣ್ಣು ಹಂಪಲು, ಅಪ್ಪಿಮಿಡಿ ಮುಂತಾದವುಗಳಿಗೆ ಸಹ ಮಾನ್ಯತೆ ಸೀಗಬೇಕಾಗಿದೆ.
ಇಲ್ಲಿನ ರೈತರ ಅಭಿವೃದ್ಧಿ ದೃಷ್ಟಿಯಿಂದ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜೊಯಿಡಾವನ್ನು ಗುರುತಿಸುವಂತೆ ಮಾಡಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
2021 ರ ಏಪ್ರಿಲ್ ನಲ್ಲಿ ಸಾವಯವಕ್ಕೆ ಹೋಗಲು ಪ್ರಸ್ತಾವನೆ ಸಲ್ಲಿಸಿತ್ತು. ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ತನ್ನ 2025 ರ ಬಜೆಟ್‌ನಲ್ಲಿ ಸೇರಿಸಿತು. ಮೂರು ವರ್ಷಗಳಲ್ಲಿ, ಜೋಯಿಡಾ ಸಾವಯವ ತಾಲ್ಲೂಕು ಆಗಲಿದೆ. ಜೋಯಿಡಾದಲ್ಲಿ ಉತ್ಪಾದಿಸುವ ಯಾವುದೇ ಬೆಳೆ ರಾಸಾಯನಿಕ ಮುಕ್ತವಾಗಿರುತ್ತದೆ ಎಂದು ಚೆವುರಾಯಸ್ವಾಮಿ ಹೇಳಿದರು.
ಇದನ್ನು ಬಜೆಟ್ ಘೋಷಣೆಯನ್ನಾಗಿ ಮಾಡುವಂತೆ ನಾವು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದೇವೆ. ಇದನ್ನು ಮುಂದುವರಿಸುವುದು ಜೋಯಿಡಾದ ರೈತರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ರೈತರಿಗೆ ನಾಟಿ ಮಾಡಲು ಬೇಕಾದ ಸಾಮಗ್ರಿಗಳನ್ನು ಮತ್ತು ಬೆಳೆಗಳ ಬಿತ್ತನೆಗೆ ಆರ್ಥಿಕ ಬೆಂಬಲವನ್ನು ಒದಗಿಸುವುದಾಗಿ ಸಚಿವರು ಭರವಸೆ ನೀಡಿದರು.
ಸರ್ಕಾರವು ರೈತರಿಗೆ ಉತ್ಪನ್ನಗಳಿಗೆ ಪ್ರಮಾಣೀಕರಣವನ್ನು ಪಡೆಯುವಲ್ಲಿ ಮತ್ತು ಮಾರುಕಟ್ಟೆಯಲ್ಲೂ ಬೆಂಬಲ ನೀಡುತ್ತದೆ ಎಂದು ಸಚಿವರು ಹೇಳಿದರು.
Advertisement