
ಬ್ರಹ್ಮಾವರ: ತನ್ನ ಹೆಂಡತಿ ಹೆಚ್ಚಿನ ಸಮಯ ಮೊಬೈಲ್ ಬಳಕೆ ಮಾಡುತ್ತಾಳೆ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಆಕೆಯನ್ನು ಕತ್ತರಿಸಿ ಕೊಂದಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ಹಿಲಿಯಾಣ ಗ್ರಾಮದ ಹೊಸಮಠದಲ್ಲಿ ವಾಸವಿದ್ದ ರೇಖಾ ಮೃತ ದುರ್ದೈವಿಯಾಗಿದ್ದು, ಆಕೆಯನ್ನು ಗಣೇಶ್ ಪೂಜಾರಿ ಹತ್ಯೆ ಮಾಡಿದ್ದಾನೆ.
ಹೆಚ್ಚಿನ ಸಮಯ ಮೊಬೈಲ್ ಬಳಕೆ ಮಾಡುವ ವಿಚಾರಕ್ಕೆ, ಇಬ್ಬರ ನಡುವೆ ಗಲಾಟೆಯಾಗಿದ್ದು ವ್ಯಕ್ತಿ ಕತ್ತಿಯಿಂದ ಹಲ್ಲೆ ನಡೆಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಆರೋಪಿ ಮಧ್ಯ ವ್ಯಸನಿಯಾಗಿದ್ದ ಎಂದು ತಿಳಿದುಬಂದಿದೆ. ಆರೋಪಿ ಗಣೇಶ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement