ಸೂಳೆಯಾ ಮಗನುಟ್ಟಿ, ಆಳುವನು ಮುನಿಪುರವ, ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು: ಕೋಡಿಶ್ರೀಗಳ ಮತ್ತೊಂದು ಭಯಾನಕ ಭವಿಷ್ಯ

ಸಿದ್ದರಾಮಯ್ಯ ಅವರಿಗೆ ಏನೂ ತೊಂದರೆ ಇಲ್ಲ ಎಂದ ಶ್ರೀಗಳು, ಮೋಡ ಬರುತ್ತೆ ಮೋಡ ಹೋಗುತ್ತೆ ಅಷ್ಟೇ. ಸಂಕ್ರಾಂತಿ ಒಳಗೆ ಮೇಘ ಸ್ಪೋಟ ಆಗುವ ಸಾಧ್ಯತೆ ಇದೆ. ಜನವರಿ ಒಳಗೆ ಒಂದು ದೊಡ್ಡ ಗಂಡಾಂತರ ಇದೆ.
Kodi Mutt swamiji
ಕೋಡಿ ಮಠದ ಸ್ವಾಮೀಜಿ
Updated on

ಹಾಸನ : ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವದ ಲಕ್ಷಣ ಇದೆ, ನಿರೀಕ್ಷೆಗೂ ಮೀರಿದ ದುಃಖ ಭಾರತಕ್ಕೆ ಬರಲಿದೆ. ಮೇಘ ಸ್ಪೋಟ, ಯುದ್ಧ, ದೊಡ್ಡದೊಡ್ಡ ನಗರಗಳ ಮೇಲೆ ದಾಳಿ, ಅರಸನಾಲಯಕ್ಕೆ ಕಾರ್ಮೋಡ ಕವಿಯಲಿದೆ ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳಿದ್ದಾರೆ.

ಇದಕ್ಕೂ ಮೊದಲು ಕೇಂದ್ರ ಸಚಿವ ವಿ.ಸೋಮಣ್ಣ, ಕೋಡಿಶ್ರೀ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಕೋಡಿಮಠ ಮತ್ತು ನಮಗೂ ಹಿಂದಿನಿಂದಲೂ ಅವಿನಾವಭಾವ ಸಂಬಂಧ ಎಂದು ಸೋಮಣ್ಣ ಹೇಳಿದ್ದಾರೆ. ಇದಾದ ನಂತರ ಕೋಡಿಶ್ರೀಗಳು ಭವಿಷ್ಯ ನುಡಿದು, ದೇಶಕ್ಕೆ ಗಂಡಾಂತರ ಕಾದಿದೆ ಎಂದು ಹೇಳಿದ್ದಾರೆ.

ಕೋಡಿಶ್ರೀಗಳಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪವನ್ನು ನೀಡಿದ ಸೋಮಣ್ಣ ಅವರ ಬೆನ್ನುತಟ್ಟಿ ಪಕ್ಕದಲ್ಲಿ ಕೂರು ಎಂದು ಸೂಚಿಸಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕಡೆ ಸೋತ ಸಂದರ್ಭದಲ್ಲಿ, ಶ್ರೀಗಳು ನುಡಿದಿದ್ದ ಮಾತನ್ನು ನಾನೂ ಈಗಲೂ ನೆನಪಿಸಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವರು ಹೇಳಿದರು.

ಕೋಡಿಮಠದ ಶ್ರೀಗಳು ಮುನಿಪುರದ ಬಗ್ಗೆ ಮತ್ತು ರಾಜಕೀಯ ಬದಲಾವಣೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ ನಂತರ ರಾಜಕೀಯ ವಿಪ್ಲವದ ಸೂಚನೆಗಳಿವೆ ಎಂದು ತಿಳಿಸಿದ್ದಾರೆ.

Kodi Mutt swamiji
ಪ್ರಮುಖ ನಾಯಕರುಗಳ ಅಪಮೃತ್ಯು, ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ: ಕೋಡಿ ಶ್ರೀಗಳ ಭಯಾನಕ ಭವಿಷ್ಯ!

ನಿರೀಕ್ಷೆಗೂ ಮೀರಿದ ದುಖಃ ಭಾರತಕ್ಕೆ ಬರಲಿದೆ. ಮೇಘಸ್ಪೋಟ, ಯುದ್ಧ, ಅರಸನಾಲಯಕ್ಕೆ ಕಾರ್ಮೋಡ ಕವಿಯಲಿದೆ. ಇದು ರಾಜ್ಯಕ್ಕೂ ಇದೆ, ದೇಶಕ್ಕೂ ಇದೆ. ಹಿಂದೆ ಹೇಳಿದ್ದೆ ಎರಡು ಮೂರು ಜನ ಪ್ರಧಾನಮಂತ್ರಿಗಳು ಕೊಲೆ ಆಗ್ತಾರೆ ಅಂಥ ಹೇಳಿದ್ದೆ ಅದು ಆಗುತ್ತೆ. ಯುದ್ಧ ನಿಲ್ಲೋದು ಸಂವತ್ಸರ ಪರದಲ್ಲಿ ಕಷ್ಟ. ದ್ವೇಷ, ಅಸೂಯೆ ಈ‌ ಮಧ್ಯೆ ಒಂದಿಬ್ಬರು ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ.

ಊಹಿಸಲಾರದ ದುಃಖ ಈ ಭಾರತಕ್ಕೆ ಬರುತ್ತದೆ. ಪ್ರಕೃತಿದತ್ತವಾಗಿ ಮೇಘ ಸ್ಪೋಟ ಆಗುತ್ತೆ. ಜನಜೀವನ ಅಸ್ಥಿರವಾಗುತ್ತೆ, ಇನ್ನೂ ಜಾಸ್ತಿ ಆಗುತ್ತೆ. ಯಾವಾಗ ಮನೆಗೆ ಬರ್ತಾರೆ ಹೋಗ್ತಾರೆ ಎಂದು ಹೇಳುವುದು ಕಷ್ಟ. ದ್ವೇಷ, ಅಸೂಯೆ ಮಧ್ಯೆ ಒಂದಿಬ್ಬರು ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಏನೂ ತೊಂದರೆ ಇಲ್ಲ ಎಂದ ಶ್ರೀಗಳು, ಮೋಡ ಬರುತ್ತೆ ಮೋಡ ಹೋಗುತ್ತೆ ಅಷ್ಟೇ. ಸಂಕ್ರಾಂತಿ ಒಳಗೆ ಮೇಘ ಸ್ಪೋಟ ಆಗುವ ಸಾಧ್ಯತೆ ಇದೆ. ಜನವರಿ ಒಳಗೆ ಒಂದು ದೊಡ್ಡ ಗಂಡಾಂತರ ಇದೆ. ಅಕಾಲದಲ್ಲಿ ಮಳೆ ಬಂದರೆ ಸಕಾಲದಲ್ಲಿ ತೊಂದರೆ ಆಗಲಿದೆ. ಈ ಬಾರಿ ಮಳೆ ಚನ್ನಾಗಿ ಆಗಲಿದೆ ಮತ್ತೆ ಜಲಸ್ಫೋಟ ಆಗಲಿದೆ. ಸಾಗರದಲ್ಲಿ ಒಂದು ಜಲಸ್ಪೋಟ ಎಂದು ಹೇಳಿದ್ದೆ ಅದು ಆಗಲಿದೆ ಎಂದು ಹೇಳಿದ್ದಾರೆ.

ಸೂಳೆಯಾ ಮಗನುಟ್ಟಿ, ಆಳುವನು ಮುನಿಪುರವ.. ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು. ಇದರ ಅರ್ಥ ಮುಂದೆ ಹೇಳುತ್ತೇನೆ ಎಂದು ಶ್ರೀಗಳು ಹೇಳಿದ್ದಾರೆ. ಕೊರೋನಾ ಇನ್ನೊಂದು ರೂಪ ತಾಳಲಿದೆ. ಸಾವು ನೋವು ಕಡಿಮೆ ಇದ್ದರೂ ಸಮಸ್ಯೆ ಇದ್ದೇ ಇದೆ. ಕೆಲವು ದೇಶಗಳು ಮುಳುಗುತ್ತವೆ, ಕೆಲವು ದೇಶಗಳು ಏಳಲಿದೆ. ವಾಯು ಪ್ರಳಯ, ಭೂ ಪ್ರಳಯವಾಗುತ್ತೆ ಎಂದು ಹೇಳುವ ಮೂಲಕ ದೇಶ ರಾಜ್ಯದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com