
ಬೆಂಗಳೂರು: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಖಾಸಗಿ ವಾಹನಗಳಿಗೆ 3,000 ರೂಪಾಯಿಗಳಿಗೆ ಫಾಸ್ಟ್‌ಟ್ಯಾಗ್ ವಾರ್ಷಿಕ ಟೋಲ್ ಪಾಸ್‌ಗಳನ್ನು ಘೋಷಿಸಿದೆ. ಇದರ ಬೆನ್ನಲ್ಲೇ ವಾಣಿಜ್ಯ ಸಾರಿಗೆದಾರರು ಕ್ಯಾಬ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳು, ಟ್ರಕ್‌ಗಳು ಮತ್ತು ಖಾಸಗಿ ಬಸ್‌ಗಳು ಸೇರಿದಂತೆ ವಾಣಿಜ್ಯ ವಾಹನಗಳಿಗೂ (CV) ಇದೇ ಸೌಲಭ್ಯ ವಿಸ್ತರಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ.
ಪ್ರಿಪೇಯ್ಡ್ ವಾರ್ಷಿಕ ಪಾಸ್‌ಗಳೊಂದಿಗೆ, ಖಾಸಗಿ ಕಾರುಗಳು ಮತ್ತು ವ್ಯಾನ್‌ಗಳು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ವರ್ಷಕ್ಕೆ 200 ಸಿಂಗಲ್ ಟ್ರಿಪ್‌ಗಳನ್ನು ಪಡೆಯಬಹುದು, 3,000 ರೂಪಾಯಿಗಳ ನಿಗದಿತ ಶುಲ್ಕಕ್ಕೆ. ಆಗಸ್ಟ್ 15 ರಂದು ಜಾರಿಗೆ ಬರುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ವಾಣಿಜ್ಯ ಸಾರಿಗೆ ಒಕ್ಕೂಟಗಳು ಒತ್ತಾಯಿಸಿ ವಾಣಿಜ್ಯ ಬಳಕೆ ವಾಹನಗಳಿಗೆ ವಿಸ್ತರಿಸಬೇಕೆಂದು ಮನವಿಗಳು ಬರುತ್ತಿವೆ.
ಕರ್ನಾಟಕ ರಾಜ್ಯ ಪ್ರಯಾಣ ನಿರ್ವಾಹಕರ ಸಂಘ (KSTOA) ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರು ಖಾಸಗಿ ವಾಹನಗಳಿಗಿಂತ ಹೆಚ್ಚಾಗಿ, ವಾಣಿಜ್ಯ ವಾಹನಗಳಿಗೆ ರಿಯಾಯಿತಿ ವಾರ್ಷಿಕ ಟೋಲ್ ಪಾಸ್‌ಗಳ ಅಗತ್ಯ ಹೆಚ್ಚಾಗಿದೆ ಎಂದು ಹೇಳುತ್ತಾರೆ.
ಎಲ್ಲಾ ಖಾಸಗಿ ಮಾಲೀಕರು ತಮ್ಮ ವಾಹನಗಳನ್ನು ನಿಯಮಿತವಾಗಿ ಬಳಸುವುದಿಲ್ಲ. ಅವರು ಸಾಂದರ್ಭಿಕವಾಗಿ ಬಳಸುತ್ತಾರೆ. ಈ ಯೋಜನೆಯು ನಿಯಮಿತ ದೂರದ ಹೆದ್ದಾರಿ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಆದಾಗ್ಯೂ, ಪ್ರತಿದಿನ, ಬಸ್‌ಗಳು ಮತ್ತು ಟ್ರಕ್‌ಗಳು ಸರಿಸುಮಾರು 600 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ಬಳಸುತ್ತವೆ, ಬಹು ಸುಂಕಗಳನ್ನು ದಾಟುತ್ತವೆ, ಹೀಗಾಗಿ ವಾಣಿಜ್ಯ ಬಳಕೆ ವಾಹನಗಳಿಗೆ ವಿಸ್ತರಿಸಿದರೆ ಉತ್ತಮ ಎನ್ನುತ್ತಾರೆ.
ವಾರ್ಷಿಕ ಪಾಸ್ ನ್ನು ಪರಿಚಯಿಸುವ ಪ್ರಮುಖ ಉದ್ದೇಶವೆಂದರೆ ಖಾಸಗಿ ಬಳಕೆದಾರರಿಗೆ ಗಣನೀಯ ವೆಚ್ಚ ಉಳಿತಾಯವನ್ನು ನೀಡುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವುದು. ವಾಣಿಜ್ಯ ಬಳಕೆ ವಾಹನಗಳಿಗೆ ಟೋಲ್ ರಿಯಾಯಿತಿ ಪ್ರಯೋಜನವನ್ನು ವಿಸ್ತರಿಸುವ ಬೇಡಿಕೆಯೊಂದಿಗೆ KSTOA ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿದೆ ಎಂದು ರಾಧಾಕೃಷ್ಣ ಹೊಳ್ಳ ಹೇಳಿದ್ಗಾರೆ.
ಟ್ಯಾಕ್ಸಿ ಚಾಲಕರು, ಮ್ಯಾಕ್ಸಿ ಕ್ಯಾಬ್ ನಿರ್ವಾಹಕರು ಮತ್ತು ಸಾರ್ವಜನಿಕ ಸಾರಿಗೆ ಸೇವಾ ಪೂರೈಕೆದಾರರು ಪ್ರತಿದಿನ ಮತ್ತು ಪದೇ ಪದೇ ಹೆದ್ದಾರಿಗಳನ್ನು ಬಳಸುತ್ತಾರೆ. ಸಣ್ಣ ಟ್ಯಾಕ್ಸಿ ಚಾಲಕ ಕೂಡ ವಾರ್ಷಿಕವಾಗಿ 30,000-40,000 ರೂಪಾಯಿ ಟೋಲ್ ಪಾವತಿಸುತ್ತಾರೆ. ಬಸ್‌ಗಳು ಮತ್ತು ಟ್ರಕ್‌ಗಳು ಪಾವತಿಸುವ ಟೋಲ್‌ಗಳ ಮೊತ್ತವನ್ನು ಊಹಿಸಿ ವಾಣಿಜ್ಯ ವಾಹನ ನಿರ್ವಾಹಕರಿಗೆ ಇಂತಹ ರಿಯಾಯಿತಿ ಟೋಲ್ ಪ್ಯಾಕೇಜ್‌ಗಳು ಅಗತ್ಯವಿದೆ ಎಂದರು.
ಸಾರ್ವಜನಿಕ ಸಾರಿಗೆಯ ಕಾರ್ಯಾಚರಣೆಯ ವೆಚ್ಚ ಹೆಚ್ಚಳಕ್ಕೆ ದೈನಂದಿನ ಟೋಲ್ ಶುಲ್ಕಗಳು ಪ್ರಮುಖ ಕಾರಣವಾಗಿದ್ದು, ಅದರ ವೆಚ್ಚವನ್ನು ಅಂತಿಮವಾಗಿ ಜನರಿಗೆ ವರ್ಗಾಯಿಸಲಾಗುತ್ತದೆ ಎಂದರು. ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ಟೋಲ್ ರಿಯಾಯಿತಿಯ ಪ್ರಯೋಜನವನ್ನು ಬಿಳಿ ಬೋರ್ಡ್ ವಾಹನಗಳಿಗೆ ಮಾತ್ರ ವಿಸ್ತರಿಸುವುದು ಖಾಸಗಿ ಸಾರಿಗೆ ನಿರ್ವಾಹಕರಿಗೆ ಅನ್ಯಾಯವಾಗಿದೆ ಎನ್ನುತ್ತಾರೆ.
ಅಖಿಲ ಭಾರತ ಮೋಟಾರ್ ಸಾರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹರೀಶ್ ಸಭರ್ವಾಲ್ ಅವರು ಟೋಲ್ ನ್ನು ಕಡಿಮೆ ಮಾಡುವಂತೆ ಕೇಂದ್ರವನ್ನು ಪದೇ ಪದೇ ವಿನಂತಿಸಲಾಗುತ್ತಿದೆ ಎಂದರು.
Advertisement