
ಮಂಡ್ಯ: ಮಂಡ್ಯದಲ್ಲಿ ಗೃಹಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಘಾತಕಾರಿ ಮಾಹಿತಿಗಳು ಹೊರಬಂದಿವೆ. ಮದುವೆಯಾಗಿ ಗಂಡ ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ 38 ವರ್ಷದ ಪ್ರೀತಿ ಕೇವಲ 4 ದಿನಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಯುವಕನ ಕೈಯಲ್ಲೆ ಹತ್ಯೆಯಾಗಿದ್ದಾಳೆ. ಹಾಸನ ಜಿಲ್ಲೆ ಹೊಸಕೊಪ್ಪಲು ಗ್ರಾಮದ ಪ್ರೀತಿ, ಮಂಡ್ಯದ ಕೆಆರ್ ಪೇಟೆ ತಾಲೂಕಿನ ಕರೋಟಿ ಗ್ರಾಮದ ಯುವಕ ಪುನೀತ್ನೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು.
ಲಾಡ್ಜ್ ಒಂದರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿ ನಂತರ ಪ್ರೀತಿ ಆತನಿಂದಲೇ ಕೊಲೆಯಾಗಿದ್ದಾಳೆ. ಇನ್ನು ಪ್ರೀತಿ ಕಾಣೆಯಾಗಿರುವ ಬಗ್ಗೆ ಆಕೆಯ ಗಂಡ ಸುಂದರೇಶ್ ಎನ್ನುವವರು ದೂರು ದಾಖಲಿಸಿದ್ದರು. ಪ್ರಕರಣದ ಕುರಿತಂತೆ ತನಿಖೆಗೆ ಇಳಿದ ಪೊಲೀಸರಿಗೆ ಪ್ರೀತಿ ಶವ ಕರೋಟಿ ಗ್ರಾಮದಲ್ಲಿರುವ ಪುನೀತ್ ಜಮೀನಲ್ಲಿ ಸಿಕ್ಕಿತ್ತು. ಈ ಸಂಬಂಧ ಪುನೀತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಘಾತಕಾರಿ ಸಂಗತಿಗಳು ಬಯಲಿಗೆ ಬಂದಿವೆ. ಪ್ರೀತಿ Sex ಗಾಗಿ ಪೀಡಿಸುತ್ತಿದ್ದರಿಂದ ಆಕೆಯನ್ನು ಹತ್ಯೆ ಮಾಡಿದ್ದಾಗಿ ಪುನೀತ್ ಹೇಳಿದ್ದಾನೆ.
ಪುನೀತ್ ಪ್ರೀತಿ ಇಬ್ಬರೂ ಕಳೆದ ಭಾನುವಾರ ಮಂಡ್ಯ ಹಾಗೂ ಮೈಸೂರಿನಲ್ಲಿ ಸುತ್ತಾಡಿದ್ದಾರೆ. ಬಳಿಕ ಕೆ ಆರ್ ಪೇಟೆಯ ಕತ್ತರಘಟ್ಟ ಫಾರೆಸ್ಟ್ ಏರಿಯಾದಲ್ಲಿ ಇಬ್ಬರ ನಡುವೆ ಜಗಳ ಆಗಿದ್ದು, ಪ್ರೀತಿಯ ಹತ್ಯೆ ಮಾಡಿದ ಪುನೀತ್ ಆಕೆಯ ಮೈಮೇಲಿದ್ದ ಚಿನ್ನಾಭರಣವನ್ನು ಎತ್ತಿಕೊಂಡು ಆಕೆಯ ಶವವನ್ನು ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಹೂತು ಹಾಕಿದ್ದನು.
Advertisement