
ಬೆಂಗಳೂರು: ಮಲೈ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಹಸುವಿನ ಮೃತದೇಹ ಪತ್ತೆಯಾಗಿದೆ. ಹೀಗಾಗಿ ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದು ಎಂಬ ಅನುಮಾನವನ್ನು ಬಲಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಐದು ಹುಲಿಗಳು ಗುರುವಾರ ಈ ಕಾಡಿನಲ್ಲಿ ಸತ್ತಿವೆ. ದುಷ್ಕರ್ಮಿಗಳು ಹಸುವಿನ ಮಾಂಸಕ್ಕೆ ವಿಷಪ್ರಾಶನ ಮಾಡಿ, ಅದನ್ನು ತಿಂದ ನಂತರ ಹುಲಿ ಮತ್ತು ಅದರ ಮರಿಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಕಾಡಿನಲ್ಲಿ ಬಿಡುವ ಮೊದಲು ಹಸುವಿಗೆ ವಿಷಪ್ರಾಶನ ಮಾಡಿಸಿರಬಹುದೇ ಅಥವಾ ಸತ್ತ ಹಸುವನ್ನು ನೋಡಿದ ನಂತರ ದನದ ಮಾಲೀಕರು ಅದರ ದೇಹದ ಮೇಲೆ ವಿಷಪ್ರಾಶನ ಮಾಡಿರಬಹುದು, ಹೀಗಾಗಿ ಅದನ್ನು ಹುಲಿ ಮತ್ತು ಅದರ ಮರಿಗಳು ತಿಂದು ಸತ್ತಿರಬಹುದು" ಎಂದು ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಇದೇ ಅನುಮಾನ ವ್ಯಕ್ತ ಪಡಿಸಿದ್ದಾರೆ. ಯಾರೋ ದನಗಳಿಗೆ ವಿಷಪ್ರಾಶನ ಮಾಡಿದ್ದಾರೆ, ಇದುರಿಂದಲೇ ಹುಲಿಗಳ ಸಾವು ಆಗಿದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ನಾವು ಅದನ್ನು ಎಲ್ಲಾ ಕೋನಗಳಿಂದಲೂ ತನಿಖೆ ಮಾಡುತ್ತೇವೆ. ಇದರ ಹಿಂದಿರುವವರಿಗೆ ತಕ್ಕ ಶಿಕ್ಷೆ ವಿಧಿಸುತ್ತೇವೆ ಎಂದು ಖಂಡ್ರೆ ತಿಳಿಸಿದ್ದಾರೆ.
ತಾಯಿ ಹುಲಿಯ ಶವಪರೀಕ್ಷೆ ಗುರುವಾರವೇ ನಡೆದಿದೆ, ನಾಲ್ಕು ಮರಿಗಳ ಮರಣೋತ್ತರ ಪರೀಕ್ಷೆ ಶುಕ್ರವಾರ ನಡೆಯುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿ ದಿನನಿತ್ಯದ ಬೆಳಗಿನ ಗಸ್ತು ತಿರುಗುತ್ತಿದ್ದಾಗ ಹುಲಿ ಮತ್ತು ಮರಿಗಳು ಸತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಐದು ಸದಸ್ಯರ ತಜ್ಞರ ತಂಡವು NTCA (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಪ್ರೋಟೋಕಾಲ್‌ಗಳನ್ನು ಅನುಸರಿಸಿ ಸಮಗ್ರ ಶವಪರೀಕ್ಷೆಯನ್ನು ಕೈಗೊಂಡಿತು.
ಅಂಗಾಂಶ, ರಕ್ತ ಮತ್ತು ಹೊಟ್ಟೆಯ ಮಾದರಿಗಳನ್ನು ವಿಷಶಾಸ್ತ್ರ, ಹಿಸ್ಟೋಪಾಥಾಲಜಿ ಮತ್ತು ಡಿಎನ್‌ಎ ಪ್ರೊಫೈಲಿಂಗ್‌ಗಾಗಿ ಸಂಸ್ಕರಿಸಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ, ಅರಣ್ಯ ಇಲಾಖೆಯು ಹುಗ್ಯಾಮ್ ಅರಣ್ಯ ಪ್ರದೇಶದಲ್ಲಿ ವಿಚಾರಣೆ ನಡೆಸುತ್ತಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಷಣ ಕಾರಣ ಎಂದು ಸಿಸಿಎಫ್ ಹೀರಾಲಾಲ್ ಖಚಿತಪಡಿಸಿದ್ದಾರೆ. ತಾಯಿ ಹುಲಿ ಮತ್ತು ನಾಲ್ಕು ಮರಿಗಳು ವಿಷಪೂರಿತ ಹಸುವಿನ ಮಾಂಸ ಸೇವಿಸಿ ಮೃತಪಟ್ಟಿವೆ. ವಿಷ ಪ್ರಾಷನದಿಂದಲೇ ಹುಲಿಗಳು ಮೃತ ಪಟ್ಟಿದೆ. ತಾಯಿ ಹುಲಿಗೆ 8 ವರ್ಷ. ಮರಿ ಹುಲಿಗಳು 10 ತಿಂಗಳು. ಹಸುವಿನಲ್ಲಿರುವ ವಿಷದ ಮಾಂಸ ತಿಂದು ಹುಲಿಗಳು ಮೃತ ಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾವ ಪ್ರಮಾಣದ ವಿಷ ಎಂಬುದು ಲ್ಯಾಬ್ ವರದಿ ಮೂಲಕ ಗೊತ್ತಾಗಲಿದೆ. ಹಸುವನ್ನ ಹುಲಿ ಬೇಟೆಯಾಡಿದ ಮೇಲೆ ಹಸುವಿಗೆ ವಿಷ ಹಾಕಲಾಗಿದ್ಯಾ? ಅಥವಾ ಮೊದಲೇ ಹಸುವಿಗೆ ವಿಶ ಪ್ರಾಷನ ಮಾಡಲಾಗಿತ್ತೇ ಎನ್ನುವುದು ಲ್ಯಾಬ್ ವರದಿ ಮೂಲಕ ಗೊತ್ತಾಗಬೇಕಿದೆ. ಹುಲಿ ಹಸುವಿನ ಹಿಂಬದಿಗೆ ದಾಳಿ ಮಾಡಿದೆ. ಹುಲಿ ಮತ್ತು ಹಸುವಿನ ಎಲ್ಲಾ ಅಂಗಾಂಗಳನ್ನ ಲ್ಯಾಬ್ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement