ಹಿರಿಯ ಪತ್ರಕರ್ತ ಎನ್.ಸಿ ಗುಂಡೂರಾವ್ ನಿಧನ; ಸಿಎಂ ಸಂತಾಪ

ರಾವ್ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು.
N C Gundurao
ಎನ್.ಸಿ.ಗುಂಡೂರಾವ್
Updated on

ಬೆಂಗಳೂರು: ಹಿರಿಯ ಪತ್ರಕರ್ತ ಮತ್ತು ಡೆಕ್ಕನ್ ಹೆರಾಲ್ಡ್‌ನ ಮಾಜಿ ಸಹ ಸಂಪಾದಕ ಎನ್‌ಸಿ ಗುಂಡೂ ರಾವ್ (78b) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ತಮ್ಮ ಪುತ್ರಿ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ರಾವ್ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು.

1992 ರಿಂದ 2005 ರಲ್ಲಿ ನಿವೃತ್ತರಾಗುವವರೆಗೆ ಡೆಕ್ಕನ್ ಹೆರಾಲ್ಡ್ ನಲ್ಲಿ ಬರೆಯುತ್ತಿದ್ದ ಅಂಕಣದ ಮೂಲಕ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ತೀಕ್ಷ್ಣ ಮತ್ತು ವಿಮರ್ಶಾತ್ಮಕ ವ್ಯಾಖ್ಯಾನಕ್ಕೆ ಹೆಸರುವಾಸಿಯಾಗಿದ್ದರು . ಅವರು ಕನ್ನಡ ಚಿತ್ರರಂಗದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು.

ಶಿವಮೊಗ್ಗ ಜಿಲ್ಲೆಯವರಾದ ಗುಂಡೂ ರಾವ್ ಅವರು 2005 ರಲ್ಲಿ ಸಹಾಯಕ ಸಂಪಾದಕರಾಗಿ ಸೇವೆಯಿಂದ ನಿವೃತ್ತರಾದರು.

ಗುಂಡೂರಾವ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಫ್ರೂವ್ ರೀಡರ್ ಆಗಿ ವೃತ್ತಿಜೀವನ‌ ಆರಂಭಿಸಿದ್ದ ಗುಂಡೂರಾವ್ ಅವರು ನಂತರ ಪತ್ರಿಕೆಯ ಸಹಸಂಪಾದಕರಾಗಿ ನಿವೃತ್ತರಾಗಿದ್ದರು ಎನ್ನುವುದು ಅವರಲ್ಲಿನ ವೃತ್ತಿಪರತೆ - ಬದ್ಧತೆಗೆ ನಿದರ್ಶನ.

ಈ ಪತ್ರಿಕೆಯಲ್ಲಿ ಹೆಚ್ಚು ಕಡಿಮೆ ನಾಲ್ಕು ದಶಕಗಳ ಕಾಲ ವೃತ್ತಿನಿರತರಾಗಿದ್ದ ಗುಂಡೂರಾವ್ ಅವರ ರಾಜಕೀಯ ವರದಿಗಾರಿಕೆ ಮತ್ತು ಅಂಕಣ ಬರಹಗಳು ಆ ಕಾಲದಲ್ಲಿ ನನ್ನಂತಹವರಿಗೆ ಮಾರ್ಗದರ್ಶನ ನೀಡುತ್ತಿತ್ತು.

ಸರಳ ಮತ್ತು ಸಜ್ಜನರಾಗಿದ್ದ ಗುಂಡೂರಾವ್ ಅವರು ವೃತ್ತಿಧರ್ಮವನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು. ಮಾಧ್ಯಮರಂಗದ ಇಂದಿನ ಪೀಳಿಗೆಗೆ ಇವರ ಬದುಕು ಮತ್ತು ಸಾಧನೆ ಪ್ರೇರಣೆ ನೀಡಲಿ ಎಂದು ಆಶಿಸುತ್ತೇನೆ ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com