ಅಭಿವೃದ್ಧಿಗೆ ಒತ್ತು: ತೆರಿಗೆ ಸುಧಾರಣೆಗಾಗಿ ಗ್ರಾಮ ಪಂಚಾಯತಿಗಳ ದತ್ತು; ಸರ್ಕಾರದ ಹೊಸ ಯೋಜನೆ

ಕರ್ನಾಟಕದಲ್ಲಿ ಸುಮಾರು 6,000 ಗ್ರಾಮ ಪಂಚಾಯತ್‌ಗಳಿದ್ದು, ನಿರಂತರ ಒತ್ತಡದ ನಂತರ, ಈ ವರ್ಷ ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳು 1,200 ಕೋಟಿ ರೂ.ಗಳ ತೆರಿಗೆಯನ್ನು ಉತ್ಪಾದಿಸಿವೆ,
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಪಂಚಾಯತ್‌ಗಳ ತೆರಿಗೆ ಹಾಗೂ ಗುಣಮಟ್ಟ ಸುಧಾರಿಸಲು ಮತ್ತು ಅವುಗಳನ್ನು ಒಟ್ಟಾರೆ ಅಭಿವೃದ್ಧಿಯತ್ತ ಕೊಂಡೊಯ್ಯಲು ಮೊದಲ ಬಾರಿಗೆ ರಾಜ್ಯ ಸರ್ಕಾರವು RDPR ಅಧಿಕಾರಿಗಳು ಪಂಚಾಯತ್ ಅನ್ನು ದತ್ತು ತೆಗೆದುಕೊಳ್ಳುವ ಪರಿಕಲ್ಪನೆಯನ್ನು ಪರಿಚಯಿಸಿದೆ.

ಕರ್ನಾಟಕದಲ್ಲಿ ಸುಮಾರು 6,000 ಗ್ರಾಮ ಪಂಚಾಯತ್‌ಗಳಿದ್ದು, ನಿರಂತರ ಒತ್ತಡದ ನಂತರ, ಈ ವರ್ಷ ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳು 1,200 ಕೋಟಿ ರೂ.ಗಳ ತೆರಿಗೆಯನ್ನು ಉತ್ಪಾದಿಸಿವೆ, ಇಲ್ಲದಿದ್ದರೆ ಅದು ಪ್ರತಿ ವರ್ಷ ಇದರ ಅರ್ಧದಷ್ಟು ಇರುತ್ತಿತ್ತು ಎಂದು RDPR ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅಧಿಕಾರಿಗಳು ಮತ್ತು ಸದಸ್ಯರ ನಿರಂತರ ಒತ್ತಡದಿಂದಾಗಿ ಇದು ಸಾಧ್ಯವಾಯಿತು. ಈಗ ಒಂದು ಪಂಚಾಯತ್ ಅನ್ನು ದತ್ತು ತೆಗೆದುಕೊಂಡು ಅವುಗಳನ್ನು ಸುಧಾರಿಸಲು ಅಧಿಕಾರಿಗಳ ಸಹಾಯ ಪಡೆಯುವುದು ಯೋಜನೆಯ ಉದ್ದೇಶವಾಗಿದೆ ಎಂದಿದ್ದಾರೆ.

ಪ್ರತಿ ಪಂಚಾಯತಿಗೂ ಪ್ರತ್ಯೇಕ ಮಾನದಂಡಗಳಿವೆ. ತೆರಿಗೆ ಸಂಗ್ರಹ ಸುಧಾರಿಸುವುದು, MNREGA, ರಸ್ತೆಗಳು, ಆರೋಗ್ಯ, ಶಾಲೆಗಳು, 15 ನೇ ಹಣಕಾಸು ಆಯೋಗದ ಅನುಷ್ಠಾನ, ಶಿಕ್ಷಣ, ಸಾಮಾಜಿಕ ಲೆಕ್ಕಪರಿಶೋಧನೆ ಸೇರಿದಂತೆ ಸುಮಾರು 100 ಅಂಶಗಳಿರುತ್ತವೆ.

Priyank Kharge
ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಗೌರವದಿಂದ ನಡೆಸಿಕೊಳ್ಳಿ: ಅಧಿಕಾರಿಗಳಿಗೆ ಪಂಚಾಯತ್ ರಾಜ್ ಇಲಾಖೆ ಎಚ್ಚರಿಕೆ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಡರ್‌ಗಿಂತ ಮೇಲಿನ ಅಧಿಕಾರಿಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಬಳಿಗೆ ಕರೆದು ಪಂಚಾಯತ್ ಅನ್ನು ದತ್ತು ತೆಗೆದುಕೊಂಡು ಅಂಶಗಳನ್ನು ಸುಧಾರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಖರ್ಗೆ ಹೇಳಿದರು.

ಹಿಂದುಳಿದ ಪಂಚಾಯತ್‌ಗಳನ್ನು ಸರಾಸರಿ, ಸರಾಸರಿಯಿಂದ ಉತ್ತಮ ಮತ್ತು ಉತ್ತಮದಿಂದ ಉತ್ತಮಕ್ಕೆ ಮೇಲ್ದರ್ಜೆಗೇರಿಸುವ ಪ್ರಯತ್ನ ಇದಾಗಿದೆ ಎಂದು ಖರ್ಗೆ ಹೇಳಿದರು. ದತ್ತು ಎಂದರೆ ಶಾಲೆ ಅಥವಾ ಹಳ್ಳಿಯನ್ನು ದತ್ತು ಪಡೆದಂತೆ ಅಲ್ಲ, ಆದರೆ ನಿಯತಾಂಕಗಳನ್ನು ಸುಧಾರಿಸುವುದು ಅಧಿಕಾರಿಯ ಜವಾಬ್ದಾರಿಯಾಗಿದೆ.

ಅಧಿಕಾರಿಗಳು ತೆರಿಗೆ ಸಂಗ್ರಹದ ಮೇಲ್ವಿಚಾರಣೆ ಮಾಡಬಹುದು. ಮೂಲಸೌಕರ್ಯ, ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸಬಹುದು, ರಸ್ತೆಗಳನ್ನು ಸುಧಾರಿಸಬಹುದು ಅದಕ್ಕೂ ಮೀರಿ ಹೆಚ್ಚಿನ ಜಾವಾಬ್ದಾರಿ ತೆಗೆದು ಕೊಂಡು ಗ್ರಾಮ ಪಂಚಾಯಿತಿಯನ್ನು ಸುಧಾರಿಸಬಹುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com