
ಹೊಸಪೇಟೆ: ರಾಜ್ಯ ಮಾತ್ರವಲ್ಲದೆ ದೇಶವೇ ತಲೆತಗ್ಗಿಸುವಂತೆ ಮಾಡಿದ ಹಂಪಿ ಬಳಿಯ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿಯನ್ನು ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣದ ಎಲ್ಲಾ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಂತಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮೂರನೇ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಆರೋಪಿ-ಶರಣ ಬಸವ (30), ಟೈಲ್ ಫಿಟ್ಟರ್ ಕೆಲಸ ಮಾಡುತ್ತಿದ್ದು ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ.
ಘಟನೆ ನಡೆದ ರಾತ್ರಿ ಆರೋಪಿಗಳು ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಾಹನವನ್ನು ಕಾಲುವೆ ಬಳಿ ಬಚ್ಚಿಟ್ಟಿದ್ದರು, ಬಂಧಿಸಿದ ಬಳಿಕ ಆರೋಪಿಗಳು ಪೊಲೀಸರನ್ನು ಬೈಕ್ ಇರುವ ಸ್ಥಳದ ಬಳಿ ಕರೆದೊಯ್ದಿದ್ದರು.
ಗುರುವಾರ ರಾತ್ರಿ ಆರೋಪಿಗಳು ಮೂವರು ಪ್ರವಾಸಿಗರನ್ನು ತುಂಗಭದ್ರಾ ಕಾಲುವೆಗೆ ತಳ್ಳಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರು. ಕಾಲುವೆಗೆ ತಳ್ಳಲ್ಲಪಟ್ಟ ಮೂವರು ಪ್ರವಾಸಿಗರಲ್ಲಿ ಒಡಿಶಾದ 29 ವರ್ಷದ ಬಿಭಾಸ್ ನಾಯಕ್ ಸಾವನ್ನಪ್ಪಿದ್ದರು.
ಘಟನೆ ನಡೆದ ನಂತರ ಬಸವ ಹೊಸಪೇಟೆಯಿಂದ ರೈಲಿನಲ್ಲಿ ಬೆಂಗಳೂರಿಗೆ ಓಡಿಹೋಗಿದ್ದ, ನಂತರ ಮಾಧ್ಯಮಗಳ ಮೂಲಕ ಪ್ರಕರಣದ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದ. ಮೂವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಶನಿವಾರ ಬಂಧಿಸಿದ್ದರು. ಮಲ್ಲೇಶ್ ಮತ್ತು ಚೇತನ್ ಸಾಯಿ ಮೂಲಕ ಪೊಲೀಸರು ಬಸವ ಇದ್ದ ಸ್ಥಳವನ್ನು ಪತ್ತೆಹಚ್ಚಿದರು.
ಆರೋಪಿಗಳಿಗೆ ಅಪರಾಧ ಚಟುವಟಿಕೆಗಳ ಇತಿಹಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಗಲು ಕೂಲಿ ಮಾಡಿ ರಾತ್ರಿ ಕಳ್ಳತನ ಮಾಡುತ್ತಿದ್ದರು. ಈ ಮೂವರು ಸಣ್ಣ ಪುಟ್ಟ ಕಳ್ಳತನ, ಹಲ್ಲೆ ಮತ್ತು ಜನರಿಗೆ ಕಿರುಕುಳ ನೀಡಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಕೋಳಿ, ಬೈಕ್ ಕಳ್ಳತನ ಹಾಗೂ ದಿನಸಿ ಅಂಗಡಿಗಳಲ್ಲಿ ದರೋಡೆ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಕೊಪ್ಪಳ ಪೊಲೀಸರು ಕೆಲವು ಕಠಿಣ ನಿಯಮಗಳನ್ನು ರೂಪಿಸಿದ್ದಾರೆ. ಮೊದಲಿಗೆ, ವಸತಿ ಸೌಕರ್ಯಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಕೊಪ್ಪಳದ ಯಾವುದೇ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿದೇಶಿ ಪ್ರವಾಸಿಗರು ಭೇಟಿ ನೀಡಿದಾಗ ‘ಫಾರಂ ಸಿ’ ಕಡ್ಡಾಯಗೊಳಿಸಲಾಗಿದೆ ಎಂದು ಕೊಪ್ಪಳ ಎಸ್ಪಿ ರಾಮ ಅರಸಿದ್ದಿ ತಿಳಿಸಿದ್ದಾರೆ.
"ಸಿ ಫಾರ್ಮ್ ಸ್ಥಳೀಯ ಪೋಲೀಸ್ ಮಧ್ಯಸ್ಥಗಾರರಿಗೆ ವಿದೇಶಿ ಪ್ರವಾಸಿಗರ ಬಗ್ಗೆ ಮಾಹಿತಿ ತಿಳಿದಿದೆ ಎಂದು ಖಚಿತಪಡಿಸುತ್ತದೆ. ವಿವರಗಳು ವಿದೇಶಿ ಪ್ರವಾಸಿಗರ ಸುರಕ್ಷತೆಯ ಪ್ರಮುಖ ಉದ್ದೇಶ ಒಳಗೊಂಡಿದೆ. ಪ್ರವಾಸೋದ್ಯಮ ವಲಯಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗಿದೆ, ಎಂದು ಹೇಳಿದರು.
Advertisement