
ಬೆಂಗಳೂರು: ಎರಡು ವಸತಿ ಸಂಕೀರ್ಣಗಳಲ್ಲಿರುವ ಕ್ಲಬ್‌ಹೌಸ್‌ಗಳು ಸುಗಮವಾಗಿ ಕಾರ್ಯನಿರ್ವಹಿಸಲು ಮತ್ತು ಸಾರ್ವಜನಿಕ ವಲಯದಲ್ಲಿ ಅವುಗಳ ಪ್ರತಿಷ್ಠೆ ಹೆಚ್ಚಿಸಲು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಬೌರಿಂಗ್ ಕ್ಲಬ್ ಗೆ ನಿರ್ವಹಣೆಗೆ ಒಪ್ಪಿಸಲು ಮುಂದಾಗಿದೆ.
ಬೌರಿಂಗ್ ಕ್ಲಬ್ ಆಡಳಿತ ಮಂಡಳಿಯೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಕ್ಲಬ್‌ನ ಉನ್ನತ ಆಡಳಿತ ಮಂಡಳಿಯು ಭೇಟಿ ನೀಡಿ ಅದರ ವಸತಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡಿದೆ ಎಂದು ಬಿಡಿಎಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಹುಣ್ಣಿಗೆರೆ ಮತ್ತು ಕಣ್ಮಿಣಿಕೆ ವಸತಿ ಯೋಜನೆಗಳು ಜಿಮ್, ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಇತರ ಹೊರಾಂಗಣ ಆಟಗಳನ್ನು ಹೊಂದಿರುವ ಕ್ಲಬ್ ಹೌಸ್ ನ್ನು ಹೊಂದಿವೆ. ಒಳಾಂಗಣ ಆಟಗಳಿಗೆ ಪ್ರತ್ಯೇಕ ಸ್ಥಳಗಳನ್ನು ಹೊಂದಿವೆ.
ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವಿನ ದಾಸನಪುರ ಹೋಬಳಿಯಲ್ಲಿರುವ ಹುಣ್ಣಿಗೆರೆ ವಸತಿ ಸಂಕೀರ್ಣವು ಬಿಡಿಎಯ ಅತ್ಯಂತ ದುಬಾರಿ ಉದ್ಯಮವಾಗಿದ್ದು, 322 ವಿಲ್ಲಾಗಳನ್ನು ಹೊಂದಿದೆ, ಅವುಗಳಲ್ಲಿ 172 4 ಬಿಎಚ್‌ಕೆಗಳು ಮತ್ತು 150 3 ಬಿಎಚ್‌ಕೆ ವಸತಿ ಗೃಹಗಳಾಗಿವೆ.
ಬೌರಿಂಗ್ ಕ್ಲಬ್ ಹುಣ್ಣಿಗೆರೆಗೆ ಒಪ್ಪಿಗೆ ಸಿಕ್ಕ ನಂತರವೇ ನಾವು ಹುನ್ನಿಗೆರೆಯಲ್ಲಿ ಮನೆಗಳ ಮಾರಾಟವನ್ನು ಮುಂದುವರಿಸಲು ಯೋಜಿಸಿದ್ದೇವೆ. ಮನೆಮಾಲೀಕರಿಗೆ ಈ ಬೌರಿಂಗ್ ಕ್ಲಬ್ ಮತ್ತು ಅದರ ಶಾಖೆಗಳಲ್ಲಿ ಸದಸ್ಯತ್ವ ಪಡೆಯುವ ಅವಕಾಶವಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಒಂದು ಪ್ರಾಯೋಗಿಕ ಹಂತದಲ್ಲಿ, ಬಿಡಿಎ ತನ್ನ ಮೊದಲ ಒಂದು ಕೋಟಿಗೂ ಹೆಚ್ಚಿನ ಮನೆಗಳಿಗೆ ಸಾರ್ವಜನಿಕ ಪ್ರತಿಕ್ರಿಯೆ ತಿಳಿಯಲು ಮೂರು ತಿಂಗಳ ಹಿಂದೆ ಹುನ್ನಿಗೆರೆಯಲ್ಲಿ 25 ಮನೆಗಳನ್ನು ಹರಾಜು ಹಾಕಿತು.
ಕನ್ಮನಿಕೆಯಲ್ಲಿ, 700 ಕ್ಕೂ ಹೆಚ್ಚು ಫ್ಲಾಟ್‌ಗಳನ್ನು ಬಿಡಿಎ ಮಾರಾಟ ಮಾಡುತ್ತಿದೆ. ಇಲ್ಲಿನ ಕ್ಲಬ್ ಹೌಸ್ ನ್ನು ಬೌರಿಂಗ್ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ನಾವು ಭಾವಿಸುತ್ತೇವೆ. ಅವರಿಗೆ ಕ್ಲಬ್ ನಡೆಸುವ ಅನುಭವ ಇರುವುದರಿಂದ ಎಲ್ಲಾ ನಿವಾಸಿಗಳಿಗೆ ಸಹಾಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.
Advertisement