
ಬೆಂಗಳೂರು: ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಅವರ ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿತು. ಅಂಬರೀಷ್ ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು, ರಾಜಕೀಯ ಮತ್ತು ಚಿತ್ರರಂಗದ ಹಲವರು ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಗುವಿಗೆ ಹೆಸರಿಟ್ಟ ಕುಟುಂಬ
ತಮ್ಮ ವಂಶದ ಕುಡಿಗೆ ಸುಮಲತಾ ಮತ್ತು ಅಭಿಷೇಕ್ ಸೇರಿ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಟ್ಟಿದ್ದಾರೆ. ಹಿರಿಯ ನಟ ದಿವಂಗತ ಅಂಬರೀಷ್ ಅವರ ಮೊದಲಿನ ಹೆಸರು ಅಮರ್ ನಾಥ್ ಎಂದಾಗಿತ್ತು, ಅವರ ಮೂಲ ಹೆಸರಿಟ್ಟಿದ್ದು ರಾಣಾ ಎಂದರೆ ರಾಜ, ಮಹಾಯೋಧ ಎಂದರ್ಥವಿದೆ.
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದಪ್ಪ ಅವರು 2023ರ ಜೂನ್ 5 ರಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ಬಳಿಕ ಮಂಡ್ಯದಲ್ಲಿ ಬೀಗರೂಟ ಸಹ ಆಯೋಜಿಸಲಾಗಿತ್ತು. ಕಳೆದ ವರ್ಷ ನವೆಂಬರ್ 12 ರಂದು ಈ ಜೋಡಿಗೆ ಗಂಡು ಮಗು ಜನನವಾಗಿತ್ತು.
ಇತ್ತೀಚೆಗೆ ನಟ ದರ್ಶನ್ ಮತ್ತು ಸುಮಲತಾ ಮಧ್ಯೆ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿಯಾಗಿತ್ತು. ಇಂದಿನ ಕಾರ್ಯಕ್ರಮಕ್ಕೆ 2019ರ ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜೋಡೆತ್ತುಗಳಂತೆ ಕೆಲಸ ಮಾಡಿದ್ದ ದರ್ಶನ್ ಮತ್ತು ಯಶ್ ಹೋಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ.
Advertisement