US ಮೂಲದ ಕಂಪನಿ ಏಕಾಏಕಿ ಬಂದ್: 3000 ಉದ್ಯೋಗಿಗಳಿಗೆ ಶಾಕ್, ಜನವರಿಯಿಂದ ವೇತನ ಸಿಗದೇ ಪರದಾಟ!

ಯಾವುದೇ ಪೂರ್ವ ಮಾಹಿತಿ ಹಾಗೂ ಬಾಕಿ ವೇತನದ ವಿಷಯಗಳನ್ನು ಇತ್ಯರ್ಥಗೊಳಿಸದೇ ಸಂಸ್ಥೆ ಏಕಾ ಏಕಿ ಬಂದ್ ಆಗಿರುವುದು ಸುಮಾರು 3000 ಉದ್ಯೋಗಿಗಳನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ.
File pic
ಸಂಗ್ರಹ ಚಿತ್ರonline desk
Updated on

ಅಮೆರಿಕಾ ಮೂಲದ ಫೋಕಸ್ ಎಡುಮ್ಯಾಟಿಕ್ಸ್ (Focus Edumatics) ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಭಾರತದ ವಿಭಾಗ ಏಕಾಏಕಿ ಬಂದ್ ಆಗಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ತೀವ್ರ ಅಘಾತ ಉಂಟಾಗಿದೆ.

ಯಾವುದೇ ಪೂರ್ವ ಮಾಹಿತಿ ಹಾಗೂ ಬಾಕಿ ವೇತನದ ವಿಷಯಗಳನ್ನು ಇತ್ಯರ್ಥಗೊಳಿಸದೇ ಸಂಸ್ಥೆ ಏಕಾ ಏಕಿ ಬಂದ್ ಆಗಿರುವುದು ಸುಮಾರು 3000 ಉದ್ಯೋಗಿಗಳನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ.

2025 ರ ಜನವರಿ 25 ರಂದು ಸಂಸ್ಥೆ ಬಂದ್ ಆಗಿದ್ದು, ಅಂದಿನಿಂದ ಉದ್ಯೋಗಿಗಳು, ಸ್ವತಂತ್ರ ಬೋಧಕರು ಮತ್ತು ಮಾರಾಟಗಾರರು ಬಾಕಿ ಇರುವ ವೇತನವನ್ನು ಪಡೆಯಲು ಪರದಾಡುತ್ತಿದ್ದಾರೆ.

ಜನವರಿ 25 ರಂದು, ಫೋಕಸ್ ಎಜುಮ್ಯಾಟಿಕ್ಸ್ ಸಿಇಒ ರೀಡ್ ಓವರ್‌ಫೆಲ್ಟ್ ಅವರು ರಾತ್ರಿ 8:30 ಕ್ಕೆ "ಪ್ರಮುಖ" ಸಭೆಯನ್ನು ಕರೆದರು, ಅಲ್ಲಿ ನೌಕರರಿಗೆ ಇಂದು ಅವರ ಕೊನೆಯ ಕೆಲಸದ ದಿನ ಎಂದು ತಿಳಿಸಲಾಯಿತು. ಕಂಪನಿಯು ಕಳಪೆ ಆರ್ಥಿಕ ಕಾರ್ಯಕ್ಷಮತೆ ಮತ್ತು ಆದಾಯ ಕುಸಿಯುತ್ತಿರುವುದನ್ನು ಸ್ಥಗಿತಗೊಳಿಸುವಿಕೆಗೆ ಕಾರಣವೆಂದು ಉಲ್ಲೇಖಿಸಿದರು.

ಸಭೆಯಲ್ಲಿ ಉದ್ಯೋಗಿಗಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶವಿರಲಿಲ್ಲ, ಮತ್ತು ಕಂಪನಿಯು ಅಂದಿನಿಂದ ಹಣಕಾಸಿನ ಇತ್ಯರ್ಥಗಳ ಕುರಿತು ಸಂವಹನ ನಡೆಸಿಲ್ಲ ಎಂದು ಉದ್ಯೋಗಿಗಳು ಹೇಳಿದ್ದಾರೆ.

ತಮಗೆ ಉಂಟಾಗಿರುವ ಅನಾನುಕೂಲದ ಬಗ್ಗೆ ಅಮೆರಿಕ ಮೂಲದ ಶಿಕ್ಷಣ ಸಂಸ್ಥೆ ಫೋಕಸ್ ಎಜುಮ್ಯಾಟಿಕ್ಸ್‌ನ ಭಾರತೀಯ ಅಂಗಸಂಸ್ಥೆಯಾದ ಫೋಕಸ್ ಎಜುಮ್ಯಾಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಇತ್ತೀಚೆಗೆ ವಜಾಗೊಳಿಸಲಾದ ಉದ್ಯೋಗಿಗಳ ಗುಂಪು ಕರ್ನಾಟಕ ಕಾರ್ಮಿಕ ಆಯುಕ್ತರಿಗೆ ದೂರು ದಾಖಲಿಸಿದೆ.

ಫೋಕಸ್ ಎಜುಮ್ಯಾಟಿಕ್ಸ್ ತಂತ್ರಜ್ಞಾನ-ಸಕ್ರಿಯಗೊಳಿಸಿದ ಶಿಕ್ಷಣ ಸೇವೆಗಳನ್ನು ಒದಗಿಸಿತು ಮತ್ತು 2022 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಖಾಸಗಿ ಷೇರು ಸಂಸ್ಥೆ ಆಲ್ಪೈನ್ ಇನ್ವೆಸ್ಟರ್ಸ್ ಸ್ವಾಧೀನಪಡಿಸಿಕೊಂಡಿತು.

File pic
ಉದ್ಯೋಗಿಗಳನ್ನು ಮನುಷ್ಯರನ್ನಾಗಿ ನೋಡಿ, ಅವರಿಗೂ ಕಂಪನಿಯ ಲಾಭ ಹಂಚಿ: Infosys Narayana Murthy

ಕಂಪನಿಗೆ ಕಳುಹಿಸಲಾದ ಇಮೇಲ್‌ಗಳು ಮತ್ತು ಪಠ್ಯ ಸಂದೇಶಗಳು ಪ್ರಕಟಣೆಯ ಸಮಯದವರೆಗೂ ಉತ್ತರಿಸಲಿಲ್ಲ. ಫೆಬ್ರವರಿ 12 ರಂದು, ಮಾಜಿ ಉದ್ಯೋಗಿಗಳು ದೂರು ದಾಖಲಿಸಿದ ಒಂದು ದಿನದ ನಂತರ, ಈ ವಿಷಯದ ಕುರಿತು ಕರ್ನಾಟಕ ಕಾರ್ಮಿಕ ಇಲಾಖೆಯಿಂದ ಕಂಪನಿಗೆ ನೋಟಿಸ್ ಕಳಿಸಲಾಗಿದೆ.

ಕೆಲವು ಉದ್ಯೋಗಿಗಳು ಹಣ ದುರುಪಯೋಗವನ್ನು ಶಂಕಿಸಿದ್ದಾರೆ. ಲಭ್ಯವಿರುವ ಹಣವನ್ನು ತಮ್ಮ ವೇತನ ಇತ್ಯರ್ಥಕ್ಕೆ ಬಳಸಬಹುದಿತ್ತು ಎಂದು ಆರೋಪಿಸಿದ್ದಾರೆ.

ಜನವರಿಯಲ್ಲಿ, ನೂರಾರು ಬಾಧಿತ ಉದ್ಯೋಗಿಗಳು ಕೊಯಮತ್ತೂರಿನಲ್ಲಿ ಪ್ರತಿಭಟನೆ ನಡೆಸಿದರು, ಅಲ್ಲಿ ಹೆಚ್ಚಿನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು.

ಕಂಪನಿ ಸ್ಥಗಿತಗೊಳ್ಳುವ ಮೊದಲು ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಲಾಗಿದ್ದು, ತೊಂದರೆಗೊಳಗಾದ ಉದ್ಯೋಗಿಗಳು ಈಗ ನಿಯಂತ್ರಕ ತನಿಖೆಯನ್ನು ಕೋರಿದ್ದಾರೆ. ತಮಗೆ ಸಿಗಬೇಕಾದ ನ್ಯಾಯಯುತ ಬಾಕಿ ಹಣವನ್ನು ಪಡೆಯಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com