'ಹನಿಟ್ರ್ಯಾಪ್' ವಿಚಾರ ಎತ್ತಲು ಯತ್ನಾಳ್ ಗೆ ಚೀಟಿ ಕೊಟ್ಟವರಾರು? ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಪ್ರಶ್ನೆ

ಸಿದ್ದರಾಮಯ್ಯ ಅವರ ಆಪ್ತರು ಯತ್ನಾಳ್ ಅವರಿಗೆ ಚಿಟ್ ಕಳುಹಿಸಿದ್ದು ಏಕೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಏನಾಗುತ್ತಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
B.Suresh Gowda
ಬಿ.ಸುರೇಶ್ ಗೌಡ
Updated on

ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿರುವ ವಿಷಯವನ್ನು ಪ್ರಸ್ತಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸದಸ್ಯರೊಬ್ಬರು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸೂಚಿಸಿದ್ದಾರೆ ಎಂದು ತುಮಕೂರು ಗ್ರಾಮೀಣ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಶುಕ್ರವಾರ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರ ಆಪ್ತರು ಯತ್ನಾಳ್ ಅವರಿಗೆ ಚಿಟ್ ಕಳುಹಿಸಿದ್ದು ಏಕೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಏನಾಗುತ್ತಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು

ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ, ಆಡಳಿತ ಪಕ್ಷದ ಕಡೆಯಿಂದ ಚೀಟಿ, ನಮ್ಮ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಂತು. ಅದಾದ ನಂತರವೇ ಯತ್ನಾಳ್ ಅವರು ಈ ವಿಚಾರಕ್ಕೆ ಸಂಬಂಧ ಮಾತನಾಡಲು ಆರಂಭಿಸಿದ್ದು ಎಂದು ಆರೋಪಿಸಿದ್ದಾರೆ.ಆಡಳಿತ ಪಕ್ಷದ ಯಾರು ಯತ್ನಾಳ್ ಅವರಿಗೆ ಚೀಟಿ ಕಳುಹಿಸಿಕೊಟ್ಟಿದ್ದು, ಅದರ ತನಿಖೆಯಾಗಬೇಕು. ಇದು ಎಲ್ಲರಿಗೂ ಅಗೌರವ ಕೊಡುವ ಮತ್ತು ಗಂಭೀರ ವಿಚಾರ ಇದಾಗಿದೆ. ಸ್ಪೀಕರ್ ಅವರು ಇದರ ಬಗ್ಗೆ ಗಮನ ಕೊಡಬೇಕು, ಇದನ್ನು ತನಿಖೆಗೆ ಒಳಪಡಿಸಬೇಕು. ಇದರಿಂದಾಗಿ, ಚೀಟಿ ಕಳುಹಿಸಿದ ಸಚಿವರು ಯಾರು ಎನ್ನುವುದು ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದು ಸುರೇಶ್ ಗೌಡ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಾರ್ಟಿಯಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತಾಗಬೇಕಿದೆ, ಇದನ್ನು ಕಡೆಗಣಿಸುವಂತಿಲ್ಲ. ಚೀಟಿ ಕಳುಹಿಸಿದವರು ಯಾರು, ಮುಖ್ಯಮಂತ್ರಿಗಳಿಗೆ ಆಪ್ತರಾಗಿರುವವರಾ ಎನ್ನುವ ಪ್ರಶ್ನೆಯನ್ನು ಸುರೇಶ್ ಗೌಡ ಎತ್ತಿದರು. ಆಗ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಸುನೀಲ್ ಕುಮಾರ್ ಏನೋ ಈ ವಿಚಾರವನ್ನು ಪ್ರಸ್ತಾವಿಸಿದರು. ಎಲ್ಲರೂ ಈ ವಿಚಾರದ ಬಗ್ಗೆ ಮಾತನಾಡಬೇಕಾ ಎಂದು ಸುರೇಶ್ ಗೌಡ ಅವರನ್ನು ಕೂರಿಸಿದರು.

B.Suresh Gowda
ಕೇವಲ 40 ಅಲ್ಲ 400 ಜನರಿಗೆ ಹನಿಟ್ರ್ಯಾಪ್: ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com