
ಬೀದರ್: ಔರಾದ್ ಶಾಸಕ ಪ್ರಭು ಚವ್ಹಾಣ್ ವಿರುದ್ಧದ ಭೂಕಬಳಿಕೆ ಪ್ರಕರಣದಲ್ಲಿ ವರದಿ ಸಲ್ಲಿಸದ ಕಾರಣ ಬೆಂಗಳೂರಿನ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲ ಬೀದರ್ ಜಿಲ್ಲಾಧಿಕಾರಿ ವಿರುದ್ಧ ವಾರಂಟ್ ಹೊರಡಿಸಿವೆ. ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ 1 ಲಕ್ಷ ರೂಪಾಯಿಗಳ ಶ್ಯೂರಿಟಿ ಬಾಂಡ್ ಜೊತೆಗೆ ವಾರಂಟ್ ಕಾರ್ಯಗತಗೊಳಿಸಲು ಆದೇಶ ಹೊರಡಿಸಲಾಗಿದೆ.
ಶಾಸಕ ಪ್ರಭು ಚವಾಣ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೀದರ್ ತಾಲ್ಲೂಕಿನ ಕೋಲಾರ (ಬಿ) ಗ್ರಾಮದ ಸರ್ವೆ ಸಂಖ್ಯೆ 102 ರಲ್ಲಿರುವ 3 ಎಕರೆ 19 ಗುಂಟೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳಲ್ಲಿ ಔರಾದ್ ತಾಲ್ಲೂಕಿನ ಚಂದೋರಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ್ ಚಂದೋರಿ ಪ್ರಕರಣ ದಾಖಲಿಸಿದ್ದರು.
ಚವ್ಹಾಣ್ ಜೊತೆಗೆ, ಬೀದರ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಸಿ), ಬೀದರ್ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸಿ), ತಹಶೀಲ್ದಾರ್, ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರು ಮತ್ತು ಬೀದರ್ ಸಬ್-ರಿಜಿಸ್ಟ್ರಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಬೀದರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ತಹಶೀಲ್ದಾರ್ ಅತಿಕ್ರಮಣದಾರರೊಂದಿಗೆ ಸಹಕರಿಸಿದ್ದಾರೆ ಮತ್ತು ಭೂಮಿಯನ್ನು ಅತಿಕ್ರಮಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಲಯವು ಅಕ್ಟೋಬರ್ 5, 2024 ರಂದು ಚಂದೋರಿ ಅವರ ಹೇಳಿಕೆಯನ್ನು ಪಡೆದುಕೊಂಡಿತ್ತು. ಡಿಸೆಂಬರ್ 12, 2024 ರೊಳಗೆ ಪ್ರಕರಣದ ಕುರಿತು ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಿತ್ತು. ನಂತರ, ವರದಿಯನ್ನು ಸಲ್ಲಿಸಲು ಫೆಬ್ರವರಿ 21, 2025 ರವರೆಗೆ ಸಮಯ ನೀಡಿತು , ಅದಾದ ನಂತರ ಮತ್ತೆ ಮಾರ್ಚ್ 13 ರವರೆಗೆ ಗಡುವನ್ನು ವಿಸ್ತರಿಸಿತು. ಆದರೆ ಜಿಲ್ಲಾಡಳಿತ ಇನ್ನೂ ವರದಿಯನ್ನು ಸಲ್ಲಿಸಲಿಲ್ಲ. ಆದ್ದರಿಂದ, ನ್ಯಾಯಾಲಯವು ವಾರಂಟ್ ನೀಡಿದೆ.
ಯಾವುದೇ ವಯಕ್ತಿಕ ಲಾಭವಿಲ್ಲ, ಸರ್ಕಾರಿ ಆಸ್ತಿಯನ್ನು ಉಳಿಸಲು ಪ್ರಕರಣ ದಾಖಲಿಸಿದೆ. ಮಾಜಿ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಅವರು ಭೂಮಿ ಸರ್ಕಾರಕ್ಕೆ ಸೇರಿದೆ ಎಂದು ಆದೇಶ ಹೊರಡಿಸಿದ್ದರು. ಆದರೆ, ಜಿಲ್ಲಾಡಳಿತವು ಅದರ ನಂತರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಚಂದೂರಿ ಹೇಳಿದರು.
Advertisement