ವಿಜಯಪುರ: ಮಹಾನಗರ ಪಾಲಿಕೆಯ ಎಲ್ಲಾ ಸದಸ್ಯರನ್ನು ಅನರ್ಹಗೊಳಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತ

ಅನರ್ಹಗೊಂಡ ಸದಸ್ಯರಲ್ಲಿ ಬಿಜೆಪಿಯ 17, ಕಾಂಗ್ರೆಸ್‌ನ 10, ಜೆಡಿಎಸ್‌ನ ಒಬ್ಬರು, ಎಂಐಎಂನ ಇಬ್ಬರು ಮತ್ತು ಐದು ಸ್ವತಂತ್ರರು ಸೇರಿದ್ದಾರೆ. ಇವರೆಲ್ಲರೂ 2022 ರ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.
Vijayapura city carporation
ವಿಜಯಪುರ ಮಹಾನಗರ ಪಾಲಿಕೆ
Updated on

ವಿಜಯಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ, ವಿಜಯಪುರ ನಗರ ಪಾಲಿಕೆಯ ಎಲ್ಲಾ 35 ಸದಸ್ಯರನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ್ ಸೋಮವಾರ ಆದೇಶ ಹೊರಡಿಸಿದ್ದಾರೆ.

ಅನರ್ಹಗೊಂಡ ಸದಸ್ಯರಲ್ಲಿ ಬಿಜೆಪಿಯ 17, ಕಾಂಗ್ರೆಸ್‌ನ 10, ಜೆಡಿಎಸ್‌ನ ಒಬ್ಬರು, ಎಂಐಎಂನ ಇಬ್ಬರು ಮತ್ತು ಐದು ಸ್ವತಂತ್ರರು ಸೇರಿದ್ದಾರೆ. ಇವರೆಲ್ಲರೂ 2022 ರ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

ಚುನಾವಣೆಯಲ್ಲಿ ಆಸ್ತಿ ಘೋಷಣೆ ಸಂಬಂಧಿತ ಪ್ರಕರಣದಲ್ಲಿ ಮಾಜಿ ಸದಸ್ಯರ ಅರ್ಜಿಯನ್ನು ಪರಿಗಣಿಸಿದ ಬೀಳಗಿ ಕಲಬುರಗಿ ಪೀಠ, ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಈ ಹಿನ್ನೆಲೆ ಅನರ್ಹಗೊಳಿಸಲಾಗಿದೆ.

2022ರ ಪಾಲಿಕೆ ಚುನಾವಣೆಯಲ್ಲಿ ಸದಸ್ಯರು ಆಯ್ಕೆಯಾಗಿದ್ದರು. ಬಳಿಕ 2024ರ ಜ.9ರಂದು ಮೇಯರ್ ಚುನಾವಣೆ ನಡೆದಿತ್ತು. ಕಾಂಗ್ರೆಸ್​ನ ಮೆಹೆಜಬೀನ್ ಹೊರ್ತಿ ಮೇಯರ್ ಮತ್ತು ದಿನೇಶ್​ ಹಳ್ಳಿ ಉಪಮೇಯರ್ ಆಗಿ ಆಯ್ಕೆಗೊಂಡಿದ್ದರು. ಆದರೆ ಯಾವ ಸದಸ್ಯರು ಕಾನೂನು ಪ್ರಕಾರ ಆಸ್ತಿ ಘೋಷಿಸಿರಲಿಲ್ಲ.

Vijayapura city carporation
ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಸಚಿವ ಸಂಪುಟ ಅನುಮೋದನೆ

ಜನವರಿ 9, 2024 ರಂದು ನಡೆದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗಳ ನಂತರ ಕಾನೂನಿನಿಂದ ಕಡ್ಡಾಯಗೊಳಿಸಲಾದ ನಾಗರಿಕ ಸಂಸ್ಥೆಯ ಆಸ್ತಿ ಘೋಷಣೆ ನಮೂನೆಗಳನ್ನು ಯಾವುದೇ ಸದಸ್ಯರು ಸಲ್ಲಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಆಸ್ತಿ ಘೋಷಣೆ ಮಾಡದಿರುವ ಕಾರಣ ಮಾಜಿ ಸದಸ್ಯ ಪ್ರಕಾಶ್ ಮಿರ್ಜಿ ಮೈನುದ್ದೀನ್ ಬೀಳಗಿ ಅವರು ಕಲಬುರಗಿ ಹೈಕೋರ್ಟ್ ಸಂಪರ್ಕಿಸಿದ್ದರು. ನ್ಯಾಯಾಲಯವು ನಂತರ ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿತು. ಕೂಲಂಕಷ ವಿಚಾರಣೆಯ ನಂತರ, ಎಲ್ಲಾ 35 ಸದಸ್ಯರನ್ನು ಅನರ್ಹಗೊಳಿಸಲು ನಿರ್ಧರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com