ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ 15 ಮಂದಿ Dysp ಗಳ ವರ್ಗಾವಣೆ

16 ಮಂದಿ ಇನ್‌ಸ್ಪೆಕ್ಟರ್ ಹಾಗೂ 15 ಮಂದಿ ಡಿವೈಎಸ್ ಪಿ (ಸಿವಿಲ್) ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
police department
ಪೊಲೀಸ್ (ಸಾಂಕೇತಿಕ ಚಿತ್ರ)online desk
Updated on

ಬೆಂಗಳೂರು: ರಾಜ್ಯ ಪೋಲಿಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. 16 ಮಂದಿ ಇನ್‌ಸ್ಪೆಕ್ಟರ್ ಹಾಗೂ 15 ಮಂದಿ ಡಿವೈಎಸ್ ಪಿ (ಸಿವಿಲ್) ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ವರ್ಗಾವಣೆಯಾದ ಇನ್‌ಸ್ಪೆಕ್ಟರ್ ಗಳು

ದಿನೇಶ್‌ಕುಮಾರ್ ಅವರನ್ನು ತುಮಕೂರಿನಿಂದ ಕೊಡಗಿನ ಕುಶಾಲನಗರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಮೋಹನ್‌ರೆಡ್ಡಿ-ಕರ್ನಾಟಕ ಲೋಕಾಯುಕ್ತದಿಂದ ಹಾಸನ ಆಲೂರು ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದ್ದರೆ, ಲಕ್ಷ್ಮೀಕಾಂತ್ ಅವರನ್ನು ಮೈಸೂರು ಹೆಬ್ಬಾಳ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಚಾಮರಾಜನಗರ ಗ್ರಾಮಾಂತರದ ಇನ್ ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ಅವರನ್ನು ರಾಮಾಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಶೇಷಾದ್ರಿ- ಚಾಮರಾಜನಗರ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಿಂದ ಗ್ರಾಮಾಂತರ ಠಾಣೆಗೆ, ಸತೀಶ-ಚಿಕ್ಕಮಗಳೂರು ಬಸವನಹಳ್ಳಿ ವೃತ್ತದಿಂದ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಶ್ರೀಕಾಂತ್-ಮಂಡ್ಯ ಡಿಸಿಆರ್‌ಬಿ, ಲಕ್ಷಯ್ಯ, ರಾಮಚಂದ್ರಪ್ಪ, ಸತೀಶ್, ಪ್ರಕಾಶ್, ಬಿ.ಜೆ ಸತೀಶ್, ಕುಮಾರ್, ಸಂತೋಷ್ ಎಂ ಪಾಟೀಲ್, ಸಂಜೀವ ರಾಯಪ್ಪ ಹಾಗೂ ಮಂಜುನಾಥ್ ಅವರುಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

police department
ಪೊಲೀಸ್ ಠಾಣೆಯಲ್ಲಿ ಕಿಕ್ ಬಾಕ್ಸಿಂಗ್, ರಂಪಾಟ: ಪತಿ ದೀಪಕ್ ಹೂಡಾಗೆ ಬಾಕ್ಸರ್ ಪತ್ನಿ ಸವೀತಿ ಪಂಚ್; ವಿಡಿಯೋ ವೈರಲ್!

ಡಿವೈಎಸ್‌ಪಿ: ಶಾಂತವೀರ-ರಾಯಚೂರು ಉಪವಿಭಾಗ, ರವಿನಾಥ ಡಿ. ಹರಿಜನ -ಸಿಐಡಿ, ಸುರೇಶ್ -ಬಳ್ಳಾರಿ ಗ್ರಾಮಾಂತರ ಸಿರಗುಪ್ಪ ಉಪ ವಿಭಾಗ, ನವೀನ್ ಕುಲಕರ್ಣಿ-ಬೆಂಗಳೂರು ನಗರ ಟಿಟಿಐ, ಶ್ರೀನಿವಾಸ ರೆಡ್ಡಿ-ಪ್ರಧಾನ ಕಚೇರಿ, ಮಾದಪ್ಪ-ಸಿಐಡಿಯಿಂದ ರಾಜ್ಯ ಗುಪ್ತವಾರ್ತೆ, ಲಕ್ಷ್ಮಿನಾರಾಯಣ-ಪ್ರಧಾನ ಕಚೇರಿ, ಗಿರಿಮಲ್ಲ ತಳಕಟ್ಟಿ-ಪ್ರಧಾನ ಕಚೇರಿ ಹಾಗೂ ಬಸವರಾಜ್ ಅವರನ್ನು ಆಂತರಿಕ ಭದ್ರತಾ ವಿಭಾಗದಲ್ಲಿಯೇ ಮುಂದುವರೆಸಲಾಗಿದೆ.

ಸುಧಾಕರ್, ರವಿಕುಮಾರ್-ಬೆಂಗಳೂರುನಗರ ಸಿಟಿಎಸ್‌ಬಿ, ಪರಶುರಾಮಪ್ಪ, ಗಜೇಂದ್ರ ಪ್ರಸಾದ್-ವಿವಿಐಪಿ ಭದ್ರತೆ, ಶರಣಪ್ಪ-ಟಿಟಿಐ ನಿಂದ ರಾಜ್ಯ ಗುಪ್ತವಾರ್ತೆ ಮತ್ತು ವೆಂಕಟೇಶ್ ಅವರನ್ನು ಬಳ್ಳಾರಿ ಜಿಲ್ಲೆ ಸಿರಗುಪ್ಪ ಉಪ ವಿಭಾಗದಿಂದ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com