ವಿಜಯಪುರದಲ್ಲಿ TNIE 'ಜಾಗೋ ಹಿಂದೂಸ್ತಾನಿ' ಕಾರ್ಯಕ್ರಮ: ಹುತಾತ್ಮರ ಕೊಡುಗೆ ಸ್ಮರಣೆ

ಒಬ್ಬ ಸಾಮಾನ್ಯ ಭಾರತೀಯ ಪ್ರಜೆಯಾಗಿಯೂ ಸಹ, ರಾಷ್ಟ್ರದ ಬಗ್ಗೆ ನಿಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಯನ್ನು ನೆನಪಿಸಿಕೊಂಡರೆ ನೀವು ಉತ್ತಮ ರಾಷ್ಟ್ರೀಯವಾದಿಯಾಗಬಹುದು.
ವಿಜಯಪುರದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ‘ಜಾಗೋ ಹಿಂದೂಸ್ತಾನಿ’ ಕಾರ್ಯಕ್ರಮದಲ್ಲಿ ಗಾಯಕರು ಪ್ರದರ್ಶನ ನೀಡಿದರು.
ವಿಜಯಪುರದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ‘ಜಾಗೋ ಹಿಂದೂಸ್ತಾನಿ’ ಕಾರ್ಯಕ್ರಮದಲ್ಲಿ ಗಾಯಕರು ಪ್ರದರ್ಶನ ನೀಡಿದರು.
Updated on

ವಿಜಯಪುರ: 'ಜಾಗೋ ಹಿಂದೂಸ್ತಾನಿ' ಎಂಬ ಕಾರ್ಯಕ್ರಮವನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್(The New Indian Express) ಆಯೋಜಿಸಿ ದೇಶಭಕ್ತಿಯ ಸ್ಮರಣೀಯ ದಿನವನ್ನು ಹಲವು ಜಿಲ್ಲೆಗಳಲ್ಲಿ ಆಯೋಜಿಸಿದೆ. ದೇಶಭಕ್ತಿ ಗೀತೆಗಳನ್ನು ಹಾಡಿ ನೆರೆದಿದ್ದವರ ಮನಸೂರೆಗೊಂಡರು. ಹುತಾತ್ಮರ ದಿನವನ್ನು ಸ್ಮರಿಸುವ ಸಲುವಾಗಿ ಕೊಲ್ಹಾಪುರ ಮೂಲದ 'ಸ್ವರ್ಣಿನಾದ್' ತಂಡವು ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

ಈ ತಂಡವು ಹಿಂದೆ ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಸಂದರ್ಭಗಳಲ್ಲಿ ನಡೆಸಿದ TNIE ಯ ಎಲ್ಲಾ 'ಜಾಗೋ ಹಿಂದೂಸ್ತಾನಿ' ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿತ್ತು. ದೇಶಭಕ್ತಿ ಕಾರ್ಯಕ್ರಮವನ್ನು ವಿಜಯಪುರದ ಎನ್ ಸಿಸಿ 36 ಕರ್ನಾಟಕ ಬೆಟಾಲಿಯನ್ ನ ಕರ್ನಲ್ ಗಿರೀಶ್ ಬಿ ಶಿಂಧೆ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ, ಕರ್ನಲ್ ಶಿಂಧೆ ಅವರು ಇಂತಹ ದೇಶಭಕ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದರು.

ರಾಷ್ಟ್ರೀಯತಾವಾದಿ ಭಾವನೆಯನ್ನು ಮೂಡಿಸುವ ಈ ಕಾರ್ಯಕ್ರಮದ ಭಾಗವಾಗಲು ನನಗೆ ತುಂಬಾ ಗೌರವವಿದೆ. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ನಮ್ಮ ಹುತಾತ್ಮರ ಕೊಡುಗೆಗಳನ್ನು ಈ ಕಾರ್ಯಕ್ರಮವು ಖಂಡಿತವಾಗಿಯೂ ನೆನಪಿಸಿಕೊಳ್ಳುತ್ತದೆ ಎಂದು ಹೇಳಿದರು.

ರಾಷ್ಟ್ರೀಯವಾದಿ ನಾಗರಿಕನ ಸ್ಪಷ್ಟ ವ್ಯಾಖ್ಯಾನವನ್ನು ನೀಡಿದ ಅವರು, ದೇಶಭಕ್ತಿಯನ್ನು ಪ್ರದರ್ಶಿಸಲು ಯಾವಾಗಲೂ ಸಮವಸ್ತ್ರ ಧರಿಸಬೇಕೆಂದೇನೂ ಇಲ್ಲ. ಒಬ್ಬ ಸಾಮಾನ್ಯ ಭಾರತೀಯ ಪ್ರಜೆಯಾಗಿಯೂ ಸಹ, ರಾಷ್ಟ್ರದ ಬಗ್ಗೆ ನಿಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಯನ್ನು ನೆನಪಿಸಿಕೊಂಡರೆ ನೀವು ಉತ್ತಮ ರಾಷ್ಟ್ರೀಯವಾದಿಯಾಗಬಹುದು. ಹಕ್ಕುಗಳ ಬಗ್ಗೆ ಮಾತನಾಡುವ ಮೊದಲು ಕರ್ತವ್ಯಗಳ ಬಗ್ಗೆ ಮಾತನಾಡಬೇಕು. ಭಾರತೀಯ ಸೇನೆಯು ಗಡಿಗಳಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ, ದೇಶದೊಳಗೆ ವಾಸಿಸುವ ನಾಗರಿಕರು ಸಹ ತಮ್ಮ ಕರ್ತವ್ಯಗಳನ್ನು ಮಾಡಬೇಕು ಎಂದರು.

ಉಪ ಆಯುಕ್ತ ಟಿ ಭೂಬಾಲನ್, ಟಿಎನ್‌ಐಇಯ ಜಾಹೀರಾತು, ಪ್ರಸರಣ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಸತೀಶ್ ಜೋಶಿ, ಧನಂಜಯ್ ಹೊಂಗಲ್, ಸಂಜಯ್ ನಾಗರಳ್ಳಿ, ಆಂಡ್ರೋಸ್ ಸೊಲೊಮನ್ ಹಾಗೂ ಇತರರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com