ದಾವಣಗೆರೆ ಬ್ಯಾಂಕ್ ದರೋಡೆ ಪ್ರಕರಣ: ತಮಿಳುನಾಡು ಮೂಲದ ಇಬ್ಬರು ಸೇರಿ ಐವರ ಬಂಧನ

ಬಂಧಿತರನ್ನು ತಮಿಳುನಾಡಿನ ವಿಜಯಕುಮಾರ್, ಅಜಯ್ ಕುಮಾರ್, ಹೊನ್ನಾಳಿಯ ಅಭಿಷೇಕ್ ಮತ್ತು ಚಂದ್ರಶೇಖರ್ ಹಾಗೂ ನ್ಯಾಮತಿಯ ಮಂಜುನಾಥ್ ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ದಾವಣಗೆರೆ: ನ್ಯಾಮತಿ ಪಟ್ಟಣದ ನೆಹರೂ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಶಾಖೆಯಲ್ಲಿ 6 ತಿಂಗಳ ಹಿಂದೆ ನಡೆದ 17.705 ಕೆಜಿ ಚಿನ್ನದ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪೊಲೀಸರು ತಮಿಳುನಾಡಿನ ಇಬ್ಬರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ತಮಿಳುನಾಡಿನ ವಿಜಯಕುಮಾರ್, ಅಜಯ್ ಕುಮಾರ್, ಹೊನ್ನಾಳಿಯ ಅಭಿಷೇಕ್ ಮತ್ತು ಚಂದ್ರಶೇಖರ್ ಹಾಗೂ ನ್ಯಾಮತಿಯ ಮಂಜುನಾಥ್ ಎಂದು ಗುರುತಿಸಲಾಗಿದೆ.

ಪರಾರಿಯಾಗಿರುವ ತಮಿಳುನಾಡಿನ ಮತ್ತೊಬ್ಬ ಆರೋಪಿ ಪರಮಾನಂದನನ್ನು ಬಂಧಿಸಲು ಶೋಧ ನಡೆಯುತ್ತಿದೆ. ಬಂಧಿತರಿಂದ 220 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಇಬ್ಬರು ಮಾಸ್ಟರ್ ಮೈಂಡ್​​ಗಳ ಬಂಧನ

'ತಮಿಳುನಾಡಿನ ಮೂವರು ಹಲವು ವರ್ಷಗಳಿಂದ ನ್ಯಾಮತಿಯಲ್ಲಿ ವಾಸಿಸುತ್ತಿದ್ದರು ಮತ್ತು ಅವರು ಬೇಕರಿ ನಡೆಸುತ್ತಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಈ ಕಳ್ಳತನ ಬೆಳಕಿಗೆ ಬಂದಿದೆ. ಬುಧವಾರ ರಾತ್ರಿ ಬಂಧನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. "ಉಳಿದ ಚಿನ್ನಾಭರಣಗಳು ಎಲ್ಲಿವೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದರು.

ಅಕ್ಟೋಬರ್ 26 ರಂದು ನ್ಯಾಮತಿ ಪಟ್ಟಣದ ಎಸ್‌ಬಿಐ ಶಾಖೆಯನ್ನು ದರೋಡೆ ಮಾಡಲಾಗಿತ್ತು. ಕಳ್ಳರು ಕಿಟಕಿ ಒಡೆದು ಲಾಕರ್‌ನಲ್ಲಿ ಇರಿಸಲಾಗಿದ್ದ ಚಿನ್ನಾಭರಣಗಳನ್ನು ಕದ್ದೊಯ್ದರು. ತಮ್ಮ ಚಿನ್ನಾಭರಣಗಳನ್ನು ಒತ್ತೆ ಇರಿಸಿ ಸಾಲ ಪಡೆದಿದ್ದ 509 ಗ್ರಾಹಕರು ತಮ್ಮ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ನ್ಯಾಮತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com