ಅತ್ಯಾಚಾರಿಗಳು, ಕೊಲೆಗಡುಕರು ಸಿಕ್ಕರೆ ಮುಲಾಜಿಲ್ಲದೆ Encounter ಮಾಡಿ; ಹಿಂದೂಗಳ ರಕ್ಷಿಸುವಂತ ಸರ್ಕಾರ ಇರಬೇಕು: ಯತ್ನಾಳ್

ಗದಗದಲ್ಲಿ ಸಮೀರ್, ಉಮರ್ ಹಾಗೂ ಜಾಕಿರ್ ಎಂಬುವವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ, ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
Basanagouda patil yatnal
ಬಸನಗೌಡ ಪಾಟೀಲ್ ಯತ್ನಾಳ್
Updated on

ಬೆಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಖಂಡಿಸಿದ್ದಾರೆ. ಕೊಲೆಗಡುಕರು, ಅತ್ಯಾಚಾರಿಗಳನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಯತ್ನಾಳ್‌, ಬ್ಯಾಂಕ್‌ ದರೋಡೆಕೋರರು, ಅತ್ಯಾಚಾರಿಗಳು, ಕೊಲೆಗಡುಕರು ಸಿಕ್ಕರೆ ಯಾವುದೇ ಮುಲಾಜಿಲ್ಲದೇ ಎನೌಕೌಂಟರ್‌ ಮಾಡಿ ಪ್ರಕರಣ ಮುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಗದಗದಲ್ಲಿ ಸಮೀರ್, ಉಮರ್ ಹಾಗೂ ಜಾಕಿರ್ ಎಂಬುವವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ, ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಗೃಹ ಇಲಾಖೆ ಬದುಕಿದೆಯೋ, ಸತ್ತಿದೆಯೋ ಎಂದು ಜನರೇ ಹೇಳಬೇಕು. ಬ್ಯಾಂಕ್ ದರೋಡೆಕೋರರಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರು ಸಿಕ್ಕರೆ ಅವರಿಗೆ ಯಾವುದೇ ಮುಲಾಜು ತೋರದೆ ಅಲ್ಲೇ ಎನ್ಕೌಂಟರ್ ಮಾಡಿ ಪ್ರಕರಣವನ್ನು ಮುಗಿಸಬೇಕೇ ಹೊರತು ಅವರಿಗೆ ಯಾವುದೇ ಕನಿಕರ, ಕಾನೂನು ನೆರವು ನೀಡಬಾರದು. ಸರ್ಕಾರ ಕೊಲೆಗಡುಕರು, ಅತ್ಯಾಚಾರಿಗಳಿಗೆ ನಡುಕ ಸೃಷ್ಟಿಸಬೇಕು.

ಈಗಿರುವ ಗೃಹ ಮಂತ್ರಿಗಳು ಸಮಜಾಯಿಷಿ ನೀಡುವಲ್ಲಿ, ಮಾಹಿತಿ ತರಿಸಿಕೊಳ್ಳುವಲ್ಲಿ, ಅಸಂಬದ್ಧ ಓತ ಪ್ರೋತ ಹೇಳಿಕೆ ನೀಡುವಲ್ಲಿ ಇರುವುದರಿಂದಲೇ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದು ಯತ್ನಾಳ್‌ ಕಿಡಿಕಾರಿದ್ದಾರೆ.

ಫೆಬ್ರವರಿ 2015: ಹಿಂದೂ ಕಾರ್ಯಕರ್ತರಾದ ವಿಶ್ವನಾಥ್ ಅವರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಉಗ್ರರಿಂದ ಹತ್ಯೆ

ಅಕ್ಟೊಬರ್ 2015: ರಾಷ್ಟ್ರೀಯ ಸ್ವಯಂ ಸೇವಕ ಹಾಗೂ ಬಜರಂಗ ದಳದ ಕಾರ್ಯಕರ್ತ, ಗೋ ರಕ್ಷಣೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಪೂಜಾರಿ ಅವರನ್ನು ಮೂಡಬಿದ್ರೆಯಲ್ಲಿ ಕೊಲೆ ಮಾಡಲಾಯಿತು. ಗೋವುಗಳ ಅಕ್ರಮ ಕಸಾಯಿ ಖಾನೆಯನ್ನು ಮುಚ್ಚಿಸುವಲ್ಲಿ ಪ್ರಶಾಂತ್ ಯಶಸ್ವಿಯಾಗಿದ್ದರು

ನವೆಂಬರ್ 2015: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರು ಹಾಗೂ ವಿಶ್ವ ಹಿಂದೂ ಪರಿಷದ್ ನ ಸಂಘಟನಾ ಕಾರ್ಯದರ್ಶಿಗಳಾಗಿದ್ದ ಶ್ರೀ ಕುಟ್ಟಪ್ಪ ಅವರನ್ನು ಹಾಡ ಹಗಲಿನಲ್ಲೇ ದುಷ್ಕರ್ಮಿಗಳು ಕೊಡಗಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿದರು.

Basanagouda patil yatnal
ಮಹಮ್ಮದ್ ಪೈಗಂಬರ್ ವಿರುದ್ಧ ಹೇಳಿಕೆ: ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹ, ಕಾಂಗ್ರೆಸ್ ಪ್ರತಿಭಟನೆ

ನವೆಂಬರ್ 2015: ಟಿಪ್ಪು ಜಯಂತಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಹರೀಶ್ ಅವರನ್ನು ಜಿಹಾದಿಗಳು ಕೊಲೆ ಮಾಡಿದರು. ಇದೆ ವೇಳೆ, ರಾಜು ಎಂಬುವವರನ್ನು ಸಹ ಹತ್ಯೆ ಮಾಡಲಾಯಿತು. ಟಿಪ್ಪು ಜಯಂತಿ ವಿರುದ್ಧ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ರಾಜು ಅವರು ಭಾಗವಹಿಸಿದ್ದರು

ಆಗಸ್ಟ್ 2016: ಬಜರಂಗ ದಳದ ಸಕ್ರಿಯ ಕಾರ್ಯಕರ್ತ ಚರಣ್ ಪೂಜಾರಿ ಅವರನ್ನು ಮಂಗಳೂರಿನ ವಾಮಂಜೂರಿನಲ್ಲಿ ಹತ್ಯೆ ಮಾಡಿದರು. ಹತ್ಯೆಯನ್ನು ಮೊಹಮ್ಮದ್ ಶಾಹ್ ರುಖ್, ಮುಸ್ತಫಾ, ರಹೀಫ್ ಮತ್ತು ನವಾಜ್ ಮಾಡಿದ್ದಾರೆಂದು ಪೊಲೀಸರು ಅರೆಸ್ಟ್ ಮಾಡಿದ್ದರು

ನವಂಬರ್ 2016: ತಿಪಟೂರಿನ ರುದ್ರೇಶ್ ಅವರನ್ನು ಜಿಹಾದಿಗಳು ಹತ್ಯೆ ಮಾಡಿದರು.

ಮಾರ್ಚ್ 2016: ಮೈಸೂರಿನ ಉದಯಗಿರಿಯ ಚಹಾ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದ ಬಿಜೆಪಿ ಕಾರ್ಯಕರ್ತ ರಾಜು ಕ್ಯಾತಮಾರನಹಳ್ಳಿಯನ್ನು ಹತ್ಯೆ ಮಾಡಲಾಯಿತು. ಕ್ಯಾತಮಾರನಹಳ್ಳಿಯಲ್ಲಿ ಅಕ್ರಮವಾಗಿ ಮಸೀದಿಯನ್ನು ನಿರ್ಮಿಸುತ್ತಿದ್ದನ್ನು ರಾಜು ನಿಲ್ಲಿಸಿದ್ದರು.

Basanagouda patil yatnal
ಸುಹಾಸ್ ಶೆಟ್ಟಿ ಹತ್ಯೆ: ದಕ್ಷಿಣ ಕನ್ನಡಿಗರನ್ನು ಮತ್ತೆ ನೆನಪಿಸಿದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

ಆಗಸ್ಟ್ 2016: ಅಖಂಡ ಭಾರತ ಸಂಕಲ್ಪ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ಪ್ರವೀಣ್ ಪೂಜಾರಿ ಅವರನ್ನು ಕೊಡಗಿನ ಕುಶಾಲನಗರದಲ್ಲಿ ಹತ್ಯೆ ಮಾಡಲಾಯಿತು.

ಅಕ್ಟೊಬರ್ 2016: ಬೆಂಗಳೂರಿನ ಶಿವಾಜಿನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರುದ್ರೇಶ್ ಅವರನ್ನು ಹತ್ಯೆ ಮಾಡಲಾಯಿತು

ಡಿಸೆಂಬರ್ 2017: ಹೊನ್ನಾವರದಲ್ಲಿ ವಿಶ್ವ ಹಿಂದೂ ಪರಿಷದ್ ನ ಯುವ ಕಾರ್ಯಕರ್ತ ಪರೇಶ್ ಮೇಷ್ಟ ನನ್ನ ಹತ್ಯೆ ಮಾಡಲಾಯಿತು. ಹತ್ಯೆ ಮಾಡುವ ಮುನ್ನ ಅವರಿಗೆ ಚಿತ್ರ ಹಿಂಸೆ ಕೊಟ್ಟಿದ್ದರು. ಆತನ ದೇಹವನ್ನು ನೀರಿನ ಟ್ಯಾಂಕ್ ಗೆ ಬಿಸಾಡಿ ಹೋಗಿದ್ದರು.

ಡಿಸೆಂಬರ್ 2024: ದಕ್ಷಿಣ ಕನ್ನಡದ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ದಕ್ಷಿಣ ಕನ್ನಡ ಬೆಳ್ಳಾರೆ ಗ್ರಾಮದಲ್ಲಿ ಹತ್ಯೆ ಮಾಡಲಾಯಿತು

ಆಗಸ್ಟ್ 2014: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಫಣೀಂದ್ರ ಅವರನ್ನು ಬೆಂಗಳೂರಿನ ಜಾಲಹಳ್ಳಿಯಲ್ಲಿ ಹತ್ಯೆ ಮಾಡಲಾಯಿತು. ಫಣಿ ಅವರು ಜಾಲಹಳ್ಳಿ ಘೋಷ್ ಪ್ರಮುಖ್ ಆಗಿದ್ದರು

ಪಟ್ಟಿ ಇನ್ನೂ ದೊಡ್ಡದಿದೆ. ಹಿಂದೂಗಳ ರಕ್ಷಿಸುವಂತ ಸರ್ಕಾರ ಇರಬೇಕೆ ಹೊರತು, ರಾಜಕೀಯ ಕಾರಣಕ್ಕಾಗಿ ನಿಷೇಧಿತ ಪಿ.ಎಫ್.ಐ ರಂತ ಸಂಘಟನೆಗಳಿಗೆ ಸರ್ಕಾರ ಬೆಂಬಲ ನೀಡಬಾರದು. ಬಹುಸಂಖ್ಯಾತ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಈ ಸಂಚು ಕೂಡಲೇ ನಿಲ್ಲಿಸಬೇಕು. ಹಿಂದೂ ಕಾರ್ಯಕರ್ತರಿಗೆ, ಬಜರಂಗ ದಳದವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಸಮಾಜಕ್ಕೆ ಕೆಲಸ ಮಾಡುತ್ತಿದ್ದಾರೆ ಹೊರತು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಗೋ ರಕ್ಷಣೆ, ಅಕ್ರಮ ಕಸಾಯಿ ಖಾನೆ ವಿರುದ್ಧ ಹೋರಾಟ ಮಾಡುತ್ತಿರುವುದು ಕೆಲವರಿಗೆ ಅಪಥ್ಯವಾಗಿದೆ. ಕೊಲೆಗಡುಕರು ಸ್ಲೀಪರ್ ಸೆಲ್ ಗಳು ಅವರಿಗೆ ಉತ್ತೇಜನ, ಆರ್ಥಿಕ ನೆರವು, ಉಳಿದುಕೊಳ್ಳುವುದಕ್ಕೆ ಸ್ಥಳ ನೀಡಿದವರ ಪತ್ತೆ ಹಚ್ಚಿ ಅವರನ್ನು ಗಲ್ಲಿಗೇರಿಸಲಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com