ಬೆಂಗಳೂರು: ವಿಚಾರಣಾಧೀನ ಕೈದಿಯಿಂದ 8.71 ಲಕ್ಷ ರೂ ವಶಪಡಿಸಿಕೊಂಡ ಸಿಸಿಬಿ

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ 32 ವರ್ಷದ ಅಮೀರ್ ಖಾನ್ ಜೈಲಿನಿಂದಲೇ ತನ್ನ ಮಾದಕ ದ್ರವ್ಯ ಜಾಲ ನಡೆಸುತ್ತಲೇ ಇದ್ದ.
ಬೆಂಗಳೂರು: ವಿಚಾರಣಾಧೀನ ಕೈದಿಯಿಂದ 8.71 ಲಕ್ಷ ರೂ ವಶಪಡಿಸಿಕೊಂಡ ಸಿಸಿಬಿ
Updated on

ಬೆಂಗಳೂರು: ಮಾದಕ ವಸ್ತು ಕಳ್ಳ ಸಾಗಣಿಕೆಯಿಂದ ಅಕ್ರಮವಾಗಿ ಆರೋಪಿ ಗಳಿಸಿದ್ದ 8.71 ಲಕ್ಷ ರು ಹಣವನ್ನು ಸಿಸಿಬಿ ಪೊಲೀಸರು ಮುಟ್ಟಗೋಲು ಹಾಕಿಕೊಂಡಿದ್ದಾರೆ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ 32 ವರ್ಷದ ಅಮೀರ್ ಖಾನ್ ಜೈಲಿನಿಂದಲೇ ತನ್ನ ಮಾದಕ ದ್ರವ್ಯ ಜಾಲವನ್ನು ನಡೆಸುತ್ತಲೇ ಇದ್ದ.

ಆತ ಒಂದು ವರ್ಷಕ್ಕೂ ಹೆಚ್ಚು ಕಾಲ ಕೇಂದ್ರ ಕಾರಾಗೃಹದಲ್ಲಿದ್ದ, ಆತನ ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದು, ಸದ್ಯ ವಿಚಾರಣೆಯ ಹಂತದಲ್ಲಿವೆ. ನಗರದಲ್ಲಿ ಮೊದಲು ಮಾದಕ ದ್ರವ್ಯ ಗ್ರಾಹಕನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಮಾದಕ ದ್ರವ್ಯಗಳನ್ನು ಎಲ್ಲಿಗೆ ತಲುಪಿಸಬೇಕು ಮತ್ತು ಯಾವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬೇಕು ಎಂಬುದರ ಕುರಿತು ಖಾನ್ ಫೋನ್ ಮೂಲಕ ಸೂಚನೆ ನೀಡುತ್ತಿದ್ದ ಎಂದು ಮಾರಾಟಗಾರ ಬಹಿರಂಗಪಡಿಸಿದ್ದಾನೆ.

ಬೆಂಗಳೂರು: ವಿಚಾರಣಾಧೀನ ಕೈದಿಯಿಂದ 8.71 ಲಕ್ಷ ರೂ ವಶಪಡಿಸಿಕೊಂಡ ಸಿಸಿಬಿ
ರಾಜ್ಯದಲ್ಲಿ ಮಾದಕ ದ್ರವ್ಯ ದಂಧೆಕೋರರ ವಿರುದ್ಧ ಕಠಿಣ ಕ್ರಮ-ಗೃಹ ಸಚಿವ ಪರಮೇಶ್ವರ್

ಖಾನ್ ಮಾದಕ ದ್ರವ್ಯ ಗ್ರಾಹಕರ ಡೇಟಾವನ್ನು ಹೊಂದಿದ್ದು, ಫೋನ್ ಮೂಲಕ ಸಂವಹನ ನಡೆಸಿದ್ದ. ಬ್ಯಾಂಕ್ ವಿವರಗಳು ಮತ್ತು ಫೋನ್ ದಾಖಲೆಗಳನ್ನು ಪತ್ತೆಹಚ್ಚಿದ ನಂತರ, ಸಿಸಿಬಿ ಅಧಿಕಾರಿಗಳು ಖಾನ್ಕೈವಾಡವನ್ನು ಶಂಕಿಸಿ ಜೈಲಿನ ಮೇಲೆ ದಾಳಿ ನಡೆಸಿದರು. ಆದಾಗ್ಯೂ, ಆ ಹೊತ್ತಿಗೆ ಖಾನ್ ತನ್ನ ಮೊಬೈಲ್ ಫೋನ್ ನಾಶಪಡಿಸಿದ್ದ ಎಂದು ಹೇಳಲಾಗಿದೆ.

ಈ ಘಟನೆಯಿಂದಾಗಿ ಜೈಲಿನೊಳಗೆ ಮೊಬೈಲ್ ಫೋನ್‌ಗಳ ಲಭ್ಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಿಂದೆಯೂ ಜೈಲಿನಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ. ಫೆಬ್ರವರಿ 14 ರಂದು ಪೊಲೀಸರು ಖಾನ್ ನನ್ನು ವಶಕ್ಕೆ ಪಡೆದು ಅವರ ಬ್ಯಾಂಕ್ ವಹಿವಾಟಿನ ವಿವರಗಳನ್ನು ಸಂಗ್ರಹಿಸಿದರು.

ಅಮೀರ್ ಖಾನ್ ಬ್ಯಾಂಕ್ ಖಾತೆಯಿಂದ 3.90 ಲಕ್ಷ ರೂ., ಸಂಬಂಧಿಕರ ಖಾತೆಯಿಂದ 81,000 ರೂ. ಮತ್ತು 4 ಲಕ್ಷ ರೂ. ನಗದನ್ನು ವಶಪಡಿಸಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com