ಗದಗ: ಜನಿವಾರದ ಮಹತ್ವ ತಿಳಿಸಲು 'ಸರ್ವ ಜನಿವಾರಧಾರಿ ಒಕ್ಕೂಟ' ರಚನೆ

ಅಭ್ಯರ್ಥಿಗಳನ್ನು 'ಅವಮಾನಿಸುವ' ಬದಲು ಪರೀಕ್ಷಾ ಸಭಾಂಗಣಗಳಲ್ಲಿ ಸ್ಕ್ಯಾನರ್‌ಗಳು ಮತ್ತು ಡಿಟೆಕ್ಟರ್‌ಗಳನ್ನು ಬಳಸಬೇಕೆಂದು ಒತ್ತಾಯಿಸಿದ್ದಾರೆ,
Representational image
ಸಾಂದರ್ಭಿಕ ಚಿತ್ರ
Updated on

ಗದಗ: ದೇಶದಲ್ಲಿ ಇದೇ ಮೊದಲ ಬಾರಿಗೆ, ಪವಿತ್ರ ದಾರ ಜನಿವಾರ ಧರಿಸುವ 28 ಸಮುದಾಯಗಳ ಸದಸ್ಯರು 'ಸರ್ವ ಜನಿವಾರಧಾರಿ ಒಕ್ಕೂಟ' ಎಂಬ ಕೂಟವನ್ನು ರಚಿಸಿಕೊಂಡಿದ್ದಾರೆ.

ರಾಷ್ಟ್ರೀಯ ಪರೀಕ್ಷಾ (NTA) ಸಂಸ್ಥೆಗಳು ನಡೆಸುವ NEET ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಯದಲ್ಲಿ ಜನಿವಾರ, ಬಳೆ, ಮಂಗಲ ಸೂತ್ರ ಇತ್ಯಾದಿಗಳನ್ನು ತೆಗೆದುಹಾಕುವ ಅಭ್ಯಾಸವನ್ನು ಕೊನೆಗೊಳಿಸಲು ಸರ್ವ ಜನಿವಾರಧಾರಿ ಒಕ್ಕೂಟ ರಚನೆ ಮಾಡಲಾಗಿದೆ. ಈ ವರ್ಷ ಮೇ 4 ರಂದು ನಡೆದ NEET ಸಮಯದಲ್ಲಿ,ಅಭ್ಯರ್ಥಿಗಳು ತಮ್ಮ ಪವಿತ್ರ ದಾರಗಳನ್ನು ತೆಗೆದುಹಾಕಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕೇಳಿದ ಘಟನೆಗಳು ನಡೆದಿದ್ದವು.

ಒಕ್ಕೂಟದ ಸದಸ್ಯರು ಗದಗ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ನೀಡಿದರ. ಅಭ್ಯರ್ಥಿಗಳನ್ನು 'ಅವಮಾನಿಸುವ' ಬದಲು ಪರೀಕ್ಷಾ ಸಭಾಂಗಣಗಳಲ್ಲಿ ಸ್ಕ್ಯಾನರ್‌ಗಳು ಮತ್ತು ಡಿಟೆಕ್ಟರ್‌ಗಳನ್ನು ಬಳಸಬೇಕೆಂದು ಒತ್ತಾಯಿಸಿದ್ದಾರೆ, ಜನಿವಾರ, ಮಂಗಲ ಸೂತ್ರ ಇತ್ಯಾದಿಗಳ ಮೌಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 'ಸರ್ವ ಜನಿವಾರಧಾರಿ ಒಕ್ಕೂಟ' ಪಟ್ಟಣದಲ್ಲಿ ರ್ಯಾಲಿಯನ್ನು ನಡೆಸಿತು.

ಸಾವಿನ ನಂತರವೇ ಪವಿತ್ರ ದಾರವನ್ನು ತೆಗೆಯಬಹುದು ಮತ್ತು ಅದನ್ನು ತೆಗೆದುಹಾಕಲು ಒಂದು ವಿಧಾನವಿದೆ ಎಂದು ವಿವಿಧ ಸಮುದಾಯಗಳ ನಾಯಕರು ಹೇಳಿದರು. ಪರೀಕ್ಷೆಯ ಸಮಯದಲ್ಲಿ ನಮ್ಮ ಭಾವನೆಗಳಿಗೆ ನೋವುಂಟುಮಾಡುವ ಹಾಗೆ ಇದನ್ನು ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ರಜಪೂತ ಸಮಾಜದ ಸದಸ್ಯ ಗಣೇಶಸಿಂಗ್ ಬ್ಯಾಲಿ ಮಾತನಾಡಿ, ಜಾಗೃತಿ ಮೂಡಿಸಲು ಮತ್ತು NTA ಅನ್ನು ಸರಿಯಾದ ಮಾರ್ಗವನ್ನು ಅನುಸರಿಸುವಂತೆ ಒತ್ತಾಯಿಸಲು ಹೊಸ ಡಿಜಿಟಲ್ ವೇದಿಕೆಗಳನ್ನು ಬಳಸುವುದಾಗಿ ಹೇಳಿದರು. ಜೈನ ಸಮುದಾಯದ ಸದಸ್ಯ ಲೋಹಿತ್ ಜೈನ್, "ಇದು ನಮ್ಮ ಆಚರಣೆ. ನಮ್ಮ ಧಾರ್ಮಿಕ ಆಚರಣೆಯನ್ನು ನಿಲ್ಲಿಸುವ ಹಕ್ಕು ಯಾರಿಗೂ ಇರಬಾರದು" ಎಂದು ಹೇಳಿದರು.

Representational image
ಕಲಬುರಗಿ: ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಯುವಂತೆ ಒತ್ತಾಯಿಸಿದ ಇಬ್ಬರು ಸಿಬ್ಬಂದಿ ಬಂಧನ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com