ನ್ಯಾಯ ಕೇಳಲು ಬಂದ ಯುವಕನ ಮೇಲೆ ಹಲ್ಲೆ: ಗದಗ ತಹಶಿಲ್ದಾರ್ ಕಚೇರಿಯಲ್ಲಿ ಅಮಾನವೀಯ ಘಟನೆ

ಅಕ್ಷಯ್ ಬೊಳ್ಳೊಳ್ಳಿ ಎಂಬ ಯುವಕನ ಗೆಳೆಯನ ಬೈಕ್ ಗೆ ಉಪ ತಹಶಿಲ್ದಾರ್ ಎಸ್ ಡಿ ವಾಲ್ಮೀಕಿ ಅವರ ಪರಿಚಯಸ್ಥನ ಕಾರು ಡಿಕ್ಕಿ ಹೊಡೆದ ಘಟನೆ ಕಚೇರಿ ಹತ್ತಿರವೇ ಸಂಭವಿಸಿದೆ.
Officials in Gadag Tahsildar office hit a youth for asking justice. The video is viral on social media platforms.Public demand a strict action on the same.
ಉಪ ತಹಶಿಲ್ದಾರ್ ಕಚೇರಿಯಲ್ಲಿ ಯುವಕನ ಮೇಲೆ ಹಲ್ಲೆ
Updated on

ಗದಗ: ನ್ಯಾಯ ಕೇಳಲು ಬಂದ ಯುವಕನಿಗೆ ಉಪ ತಹಶಿಲ್ದಾರ್ ಹಾಗೂ ಅವರ ಜೊತೆಗಿದ್ದವರು ಹಲ್ಲೆ ನಡೆಸಿದ ಘಟನೆ ಗದಗದ ತಹಶಿಲ್ದಾರ್ ಕಚೇರಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಕ್ಷಯ್ ಬೊಳ್ಳೊಳ್ಳಿ ಎಂಬ ಯುವಕನ ಗೆಳೆಯನ ಬೈಕ್ ಗೆ ಉಪ ತಹಶಿಲ್ದಾರ್ ಎಸ್ ಡಿ ವಾಲ್ಮೀಕಿ ಅವರ ಪರಿಚಯಸ್ಥನ ಕಾರು ಡಿಕ್ಕಿ ಹೊಡೆದ ಘಟನೆ ಕಚೇರಿ ಹತ್ತಿರವೇ ಸಂಭವಿಸಿದೆ. ಘಟನೆ ಕುರಿತು ತಪ್ಪಿತಸ್ಥರನ್ನು ಗುರುತಿಸಲು ಅಕ್ಷಯ್ ತಹಶಿಲ್ದಾರ್ ಕಚೇರಿಗೆ ಹೋಗಿದ್ದನು. ಅಕ್ಷಯ್ ಪ್ರಶ್ನೆಗೆ ಕೆರಳಿದ ಉಪ ತಹಶಿಲ್ದಾರ್ ಎಸ್ ಡಿ ವಾಲ್ಮೀಕಿ ಹಾಗೂ ಅವರ ತಂಡ ಅಕ್ಷಯ್ ನನ್ನು ಕಚೇರಿಗೆ ಕರೆಸಿಕೊಂಡು ಹಲ್ಲೆ ನಡೆಸಿದರು ಎಂದು ಹೇಳಲಾಗುತ್ತಿದೆ.

ಘಟನೆ ಸುದ್ದಿಯಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಪೊಲೀಸ್ ಅಧಿಕಾರಿಗಳೋರ್ವರು ರಾಜಿ ಸಂಧಾನ ಮಾಡಿದ್ದಾರೆ ಎನ್ನುವುದು ಕೂಡ ಸುದ್ದಿಯಾಗಿದೆ. ಘಟನೆ ಬಗ್ಗೆ ಸಂಪೂರ್ಣ ವಿವರ ತಿಳಿಯಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com