ಬಾನು ಮುಷ್ತಾಕ್ ಗೆ ಬೂಕರ್ ಪ್ರಶಸ್ತಿ: ಕನ್ನಡ ಮಹಿಳೆಯರಿಗೆ ಡಬಲ್ ಧಮಾಕ ಎಂದ ಸುಧಾ ಮೂರ್ತಿ

ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲೆ ಬಾನು ಮುಷ್ತಾಕ್ ಅವರ ಸಣ್ಣ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್' ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದಿದೆ.
ಬಾನು ಮುಷ್ತಾಕ್, ದೀಪಾ ಭಸ್ತಿ, ಸುಧಾ ಮೂರ್ತಿ
ಬಾನು ಮುಷ್ತಾಕ್, ದೀಪಾ ಭಸ್ತಿ, ಸುಧಾ ಮೂರ್ತಿ
Updated on

ಬೆಂಗಳೂರು: ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಬಂದಿದ್ದು, ಇದು ಪ್ರತಿಯೊಬ್ಬ ಕನ್ನಡಿಗ ಮಹಿಳೆಯರಿಗೆ ಡಬಲ್ ಗೆಲುವು ಎಂದು ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ, ಅಧ್ಯಕ್ಷೆ ಸುಧಾ ಮೂರ್ತಿ ಅವರು ಬುಧವಾರ ಹೇಳಿದ್ದಾರೆ.

ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲೆ ಬಾನು ಮುಷ್ತಾಕ್ ಅವರ ಸಣ್ಣ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್' ಮಂಗಳವಾರ ರಾತ್ರಿ ಲಂಡನ್‌ನಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದಿದ್ದು, ಇದು ಕನ್ನಡಕ್ಕೆ ಸಿಕ್ಕ ಮೊದಲ ಪ್ರಶಸ್ತಿಯಾಗಿದೆ.

"ನನಗೆ ತುಂಬಾ ಸಂತೋಷವಾಗುತ್ತಿದೆ. ಒಬ್ಬ ಭಾರತೀಯಳಾಗಿ ಸಂತೋಷ ಪಡುತ್ತಿದ್ದೇನೆ. ಕನ್ನಡಗಳಾಗಿ ತುಂಬಾ ಸಂತೋಷವಾಗುತ್ತಿದೆ. ಲೇಖಕಿಯಾಗಿ ಮತ್ತು ಮಹಿಳೆಯಾಗಿ ಇನ್ನೂ ಹೆಚ್ಚು ಸಂತೋಷವಾಗುತ್ತಿದೆ. ಅವರು ಒಬ್ಬ ಮಹಾನ್ ಬರಹಗಾರ್ತಿ ಮತ್ತು ಇದು ಒಂದು ಉತ್ತಮ ಆರಂಭ. ಅವರಂತಹ ಅನೇಕ ಜನರು ವಿವಿಧ ಭಾಷೆಗಳಲ್ಲಿ ಬೂಕರ್ ಪ್ರಶಸ್ತಿಯನ್ನು ಪಡೆಯಲಿ" ಎಂದು ಸುಧಾ ಮೂರ್ತಿ ಅವರು ಪಿಟಿಐ ತಿಳಿಸಿದ್ದಾರೆ.

ಬಾನು ಮುಷ್ತಾಕ್, ದೀಪಾ ಭಸ್ತಿ, ಸುಧಾ ಮೂರ್ತಿ
ಕನ್ನಡದ ಸಾಹಿತಿ ಬಾನು ಮುಷ್ತಾಕ್‌ ಅವರ 'ಹಾರ್ಟ್ ಲ್ಯಾಂಪ್' ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ಬೂಕರ್ ಪ್ರಶಸ್ತಿ! Video

ದೀಪಾ ಭಸ್ತಿ ಅನುವಾದಿಸಿದ 'ಹಾರ್ಟ್ ಲ್ಯಾಂಪ್' ಕೃತಿಯನ್ನು ಬೂಕರ್ ಪ್ರಶಸ್ತಿಯ ತೀರ್ಪುಗಾರರು" ಒಂದು ಆಮೂಲಾಗ್ರ ಅನುವಾದ" ಎಂದು ಬಣ್ಣಿಸಿದ್ದಾರೆ.

ಹಾಸನ ಜಿಲ್ಲೆಯವರಾದ ಬಾನು ಮುಷ್ತಾಕ್ ಅವರು 1948ರಲ್ಲಿ ಅರಸೀಕೆರೆಯ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆಗಿದ್ದವರು.

ಏತನ್ಮಧ್ಯೆ, ನಟ ಶಿವ ರಾಜ್‌ಕುಮಾರ್ ಅವರು ಎಕ್ಸ್ ನಲ್ಲಿ ಬಾನು ಮುಷ್ತಾಕ್ ಅವರಿಗೆ ತಮ್ಮ "ಹೃತ್ಪೂರ್ವಕ ಅಭಿನಂದನೆಗಳನ್ನು" ತಿಳಿಸಿದ್ದಾರೆ.

"ಜಾಗತಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಪರಿಚಯಿಸುವ ಮತ್ತು ಪ್ರಪಂಚದ ಗಮನವನ್ನು ಸೆಳೆಯುವ ನಿಮ್ಮ ಸಾಧನೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ಉತ್ತಮ ಕೊಡುಗೆಯಾಗಿದೆ. ಈ ಗೌರವವು ಕನ್ನಡ ಸಾಹಿತ್ಯ ಜಗತ್ತನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು" ಎಂದು ಶಿವಣ್ಣ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com