
ಬೆಂಗಳೂರು: ನೇರಳೆ ಮಾರ್ಗದ ವೈಟ್ ಫೀಲ್ಡ್(ಕಾಡುಗೋಡಿ)ಮೆಟ್ರೊ ಸ್ಟೇಷನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಈ ನಿಲ್ದಾಣದಿಂದ ಇಂದು ಮೇ 23ರಂದು ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ನಮ್ಮ ಮೆಟ್ರೊ ಸಂಸ್ಥೆ, ಇಂದು ಬೆಳಗ್ಗೆ 5 ಗಂಟೆಯಿಂದ ನೇರಳೆ ಮಾರ್ಗದ ವೈಟ್‌ಫೀಲ್ಡ್ (ಕಡುಗೋಡಿ) ಮೆಟ್ರೋ ಸ್ಟೇಷನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಸ್ಟೇಷನ್‌ನಿಂದ ಟ್ರೇನುಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎಂದು ಹೇಳಿತ್ತು..
ಚಲಘಟ್ಟದಿಂದ ವೈಟ್‌ಫಿಲ್ಡ್ (ಕಾಡುಗೋಡಿ) ಸಂಪರ್ಕಿಸುವ ನೇರಳೆ ಮಾರ್ಗದಲ್ಲಿ ಶುಕ್ರವಾರ ಮೆಟ್ರೋ ರೈಲು ಸಂಚಾರದ ವೇಳೆ ತಾಂತ್ರಿಕ ದೋಷ ಕಂಡು ಬಂದಿದೆ. ಇದರಿಂದ ಮೆಟ್ರೋ ಓಡಾಟದಲ್ಲಿ ತೊಂದರೆ ಆಗಿದ್ದು, ಪ್ರಯಾಣಿಕರು ಸರಿಯಾದ ಸಮಯಕ್ಕೆ ಗಮ್ಯ ಸ್ಥಳಕ್ಕೆ ಹೋಗಲಾಗದೇ ಪರದಾಡಿದ ಘಟನೆ ನಡೆಯಿತು.
ಸಹಜ ಸ್ಥಿತಿ
ಇದೀಗ ಮತ್ತೆ ರೈಲು ಸಂಚಾರ ಪುನಾರಂಭಗೊಂಡಿದೆ. ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿರುವ ಮೆಟ್ರೊ, ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 9.55 ರಿಂದ ರೈಲು ಸಂಚಾರ ಪುನಾರಂಭಗೊಂಡಿದೆ ಎಂದು ಬರೆದಿದ್ದಾರೆ.
Advertisement