Mysore Sandal Soap ತಮನ್ನಾ ರಾಯಭಾರಿ ವಿವಾದ: ಕನ್ನಡತಿಯೇ ಆದ ರಶ್ಮಿಕಾ, ಪೂಜಾ ಹೆಗ್ಡೆ ಸಿಗಲಿಲ್ಲ; ಎಂಬಿ ಪಾಟೀಲ್ ಸ್ಪಷ್ಟನೆ!

ಇತರ ನಟಿಯರನ್ನು ಸಹ ಪರಿಗಣಿಸಲಾಗಿತ್ತು. ಆದರೆ ಅನೇಕರು ಈಗಾಗಲೇ ಸ್ಪರ್ಧಾತ್ಮಕ ಉತ್ಪನ್ನಗಳ ಜಾಹೀರಾತಿನಲ್ಲಿ ತೊಡಗಿದ್ದಾರೆ ಎಂದು ಪಾಟೀಲ್ ಹೇಳಿದರು.
ರಶ್ಮಿಕಾ ಮಂದಣ್ಣ-ಪೂಜಾ ಹೆಗ್ಡೆ
ರಶ್ಮಿಕಾ ಮಂದಣ್ಣ-ಪೂಜಾ ಹೆಗ್ಡೆ
Updated on

ಬೆಂಗಳೂರು: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನ ಬ್ರಾಂಡ್ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕನ್ನಡ ಪರ ಕಾರ್ಯಕರ್ತರು ಯಶವಂತಪುರದ ಕೆಎಸ್‌ಡಿಎಲ್ ಕಾರ್ಖಾನೆಯ ಹೊರಗೆ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಭಾಟಿಯಾ ಅವರನ್ನು ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕೆಎಸ್‌ಡಿಎಲ್‌ನ ಬ್ರಾಂಡ್ ರಾಯಭಾರಿಯಾಗಿ ನೇಮಿಸಿತ್ತು. ಈ ಒಪ್ಪಂದದಿಂದಾಗಿ ರಾಜ್ಯ ಖಜಾನೆಗೆ 6.2 ಕೋಟಿ ರೂ. ಹೊರೆಯಾಗಲಿದೆ.

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಎಂಬಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ಇದು ಕೆಎಸ್‌ಡಿಎಲ್ ಉತ್ಪನ್ನಗಳನ್ನು ಜಾಗತಿಕ ಬ್ರಾಂಡ್ ಆಗಿ ಬಿಂಬಿಸುವ ಪ್ರಯತ್ನಗಳ ಭಾಗವಾಗಿದೆ. ನಾವು ಅಂತಾರಾಷ್ಟ್ರೀಯ ಬ್ರ್ಯಾಂಡ್ ಅನ್ನು ರಚಿಸಿದ್ದೇವೆ. ಪಾಶ್ಚಿಮಾತ್ಯ ಜಗತ್ತು ಮತ್ತು ಗಲ್ಫ್ ಪ್ರದೇಶವನ್ನು ತಲುಪುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಅನುಗುಣವಾಗಿ ಹೊಸ ಪ್ಯಾಕೇಜಿಂಗ್‌ನೊಂದಿಗೆ ನಾವು ಅದನ್ನು ಪ್ರಪಂಚದಾದ್ಯಂತ ಮಾರಾಟ ಮಾಡುತ್ತೇವೆ. ಈ ದೀರ್ಘಕಾಲೀನ ಕಾರ್ಯತಂತ್ರದ ಭಾಗವಾಗಿ, ನಾವು ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ತಜ್ಞರ ನೇತೃತ್ವದ ಸಮಿತಿಯ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತರ ನಟಿಯರನ್ನು ಸಹ ಪರಿಗಣಿಸಲಾಗಿತ್ತು. ಆದರೆ ಅನೇಕರು ಈಗಾಗಲೇ ಸ್ಪರ್ಧಾತ್ಮಕ ಉತ್ಪನ್ನಗಳ ಜಾಹೀರಾತಿನಲ್ಲಿ ತೊಡಗಿದ್ದಾರೆ ಎಂದು ಪಾಟೀಲ್ ಹೇಳಿದರು. ಕನ್ನಡತಿಯೇ ಆದ ರಶ್ಮಿಕಾ ಮಂದಣ್ಣ ಇತರ ಉತ್ಪನ್ನಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಪೂಜಾ ಹೆಗ್ಡೆ ಮತ್ತು ಕಿಯಾರಾ ಅಡ್ವಾಣಿ ಕೂಡ ವಿವಿಧ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. ದೀಪಿಕಾ ಪಡುಕೋಣೆ ಕೂಡ ತಮ್ಮ ಬ್ರ್ಯಾಂಡ್ ಸೇರಿದಂತೆ ಕೆಲವು ಉತ್ಪನ್ನಗಳ ರಾಯಭಾರಿಯಾಗಿದ್ದಾರೆ ಎಂದು ಪಾಟೀಲ್ ಹೇಳಿದರು.

ಬ್ರಾಂಡ್ ರಾಯಭಾರಿಯ ಆಯ್ಕೆಯು ಲಭ್ಯತೆ, ಸ್ಪರ್ಧಾತ್ಮಕವಲ್ಲದ ಷರತ್ತುಗಳು, ಸಾಮಾಜಿಕ ಮಾಧ್ಯಮ ಉಪಸ್ಥಿತಿ, ಬ್ರ್ಯಾಂಡ್‌ನ ಗುರುತಿನೊಂದಿಗೆ ಹೊಂದಾಣಿಕೆ ಮತ್ತು ಮಾರ್ಕೆಟಿಂಗ್ ವ್ಯಾಪ್ತಿ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು ಎಂದರು. ಇದು ವ್ಯವಹಾರದ ಭಾಗವಾಗಿದೆ. ಇದಕ್ಕೆ ಕನ್ನಡದೊಂದಿಗೆ ಯಾವುದೇ ಸಂಬಂಧವಿಲ್ಲ. ಇದು ವ್ಯಾಪಾರ. ನಾವು ವ್ಯವಹಾರದಲ್ಲಿದ್ದೇವೆ. ಇದು ಕರ್ನಾಟಕದ ಬಗ್ಗೆ ಮಾತ್ರವಲ್ಲ; ನಾವು ಬ್ರ್ಯಾಂಡ್ ಅನ್ನು ಜಾಗತಿಕವಾಗಿ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಕೆಎಸ್‌ಡಿಎಲ್ ಉತ್ಪನ್ನಗಳ ಉತ್ಪಾದನೆಯು ಅಸ್ತಿತ್ವದಲ್ಲಿರುವ ಯಂತ್ರೋಪಕರಣಗಳು ಮತ್ತು ಸಿಬ್ಬಂದಿಗಳೊಂದಿಗೆ ಶೇ. 110 ರಷ್ಟು ಹೆಚ್ಚಾಗಿದೆ. ನಾವು ಎಲ್ಲಾ ಲೋಪದೋಷಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಿದ್ದು ಕಾರ್ಯಾಚರಣೆಯನ್ನು ಸುಗಮಗೊಳಿಸಿದ್ದೇವೆ. ನಾವು ಬ್ರ್ಯಾಂಡ್ ಅನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ. ಕೆಎಸ್‌ಡಿಎಲ್‌ನ ವಹಿವಾಟು 2022–-23ರಲ್ಲಿ 1,375 ಕೋಟಿ ರೂ.ಗಳಿಂದ 2023–-24ರಲ್ಲಿ 1,571 ಕೋಟಿ ರೂ.ಗಳಿಗೆ ಮತ್ತು 2024-–25 ರಲ್ಲಿ 1,788 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದರು.

ರಶ್ಮಿಕಾ ಮಂದಣ್ಣ-ಪೂಜಾ ಹೆಗ್ಡೆ
ಮೈಸೂರು ಸ್ಯಾಂಡಲ್ ಸೋಪ್​ಗೆ Tamannaah Bhatia ರಾಯಭಾರಿ: ಸರ್ಕಾರದ ನಿರ್ಧಾರಕ್ಕೆ ಭಾರೀ ಟೀಕೆ, ಕರವೇ ಪ್ರತಿಭಟನೆ ಎಚ್ಚರಿಕೆ!

2022-–23 ರಲ್ಲಿ ಸುಮಾರು 182 ಕೋಟಿ ರೂ.ಗಳಿದ್ದ ನಿವ್ವಳ ಲಾಭವು 2023-–24 ರಲ್ಲಿ 362 ಕೋಟಿ ರೂ.ಗಳಿಗೆ ಏರಿತು. ಇದೀಗ 2024-–25 ರಲ್ಲಿ 415 ಕೋಟಿ ರೂ.ಗಳಿಗೆ ತಲುಪುವ ನಿರೀಕ್ಷೆಯಿದೆ. ಇನ್ನು ಮಾರಾಟವನ್ನು 5,000 ಕೋಟಿ ರೂ.ಗಳಿಗೆ ಹೆಚ್ಚಿಸುವ ದೀರ್ಘಾವಧಿಯ ಕಾರ್ಯತಂತ್ರವನ್ನು ನಾವು ಹೊಂದಿದ್ದೇವೆ. ವಿಜಯಪುರದಲ್ಲಿ ಹೊಸ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತಿದೆ. ಹಿಂದೂಸ್ತಾನ್ ಯೂನಿಲಿವರ್‌ನ ಅಧಿಕಾರಿ ರಜನಿಕಾಂತ್ ಅವರನ್ನು ಸಹ ನಾವು ಕರೆತಂದಿದ್ದೇವೆ. ಅವರಿಗೆ 18 ವರ್ಷಗಳ ಅನುಭವವಿದೆ. ಈಗ ನಮಗೆ ಸಲಹೆ ನೀಡುತ್ತಿದ್ದಾರೆ. ನಾವು 23 ಹೊಸ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ ಎಂದು ಪಾಟೀಲ್ ಹೇಳಿದರು.

"ತಮನ್ನಾ ಅವರ ಕಾರಣದಿಂದಾಗಿ ಜನರು ಸೋಪ್ ಖರೀದಿಸುತ್ತಾರೆಯೇ? ಅವರು ಅಗತ್ಯವಿದ್ದರೆ ಅದನ್ನು ಖರೀದಿಸುತ್ತಾರೆ. ಇದು ಕರ್ನಾಟಕದ ಉತ್ಪನ್ನ. ಪುನೀತ್ ರಾಜ್‌ಕುಮಾರ್ ನಂದಿನಿ ಹಾಲಿಗೆ ರಾಯಭಾರಿಯಾಗಿದ್ದರು ಎಂಬುದು ನಮಗೆ ತಿಳಿದಿದೆ. ಅದರ ನಂತರ ಬ್ರ್ಯಾಂಡ್ ಎಷ್ಟರ ಮಟ್ಟಿಗೆ ತಲುಪಿದೆ ಎಂದು ನಾವೆಲ್ಲರೂ ನೋಡಿದ್ದೇವೆ. ಯಾವುದೇ ಹಿಂದಿ ನಟಿ ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಲು ನಾವು ಬಿಡುವುದಿಲ್ಲ" ಎಂದು ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಕಾರ್ಯಕರ್ತ ರೂಪೇಶ್ ರಾಜಣ್ಣ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com