
ಹಾಸನ: ಹಾಸನ ಜಿಲ್ಲೆಯಲ್ಲಿ ಮನುಷ್ಯ-ಆನೆ ಸಂಘರ್ಷ ಮುಂದುವರಿದಿದೆ. ಶುಕ್ರವಾರ ಬೇಲೂರು ತಾಲ್ಲೂಕಿನ ಅಂಕಿಹಳ್ಳಿ ಗ್ರಾಮದ ಬಳಿ ಕಾಡು ಆನೆ ತುಳಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ಚಂದ್ರಮ್ಮ (45) ಎಂದು ಗುರುತಿಸಲಾಗಿದೆ. ಹತ್ತಿರದ ಕಾಫಿ ತೋಟಕ್ಕೆ ಹೋಗುತ್ತಿದ್ದಾಗ ಆನೆಯ ದಾಳಿಗೆ ಒಳಗಾಗಿದ್ದಾರೆ. ಘಟನೆಯ ನಂತರ, ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮೃತರ ಶವವನ್ನು ಸ್ಥಳಾಂತರಿಸಲು ನಿರಾಕರಿಸಿದರು. ಜಿಲ್ಲಾ ಸಚಿವ ಕೆ ಎನ್ ರಾಜಣ್ಣ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಪರಿಹಾರವನ್ನು ಹಸ್ತಾಂತರಿಸಬೇಕೆಂದು ಅವರು ಒತ್ತಾಯಿಸಿದರು.
ಜಿಲ್ಲೆಯ ಬೇಲೂರು, ಆಲೂರು ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಐದು ಜನರು ಆನೆ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮತ್ತಷ್ಟು ದಾಳಿಯ ಭಯದಿಂದ ಆನೆಗಳ ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ ಮತ್ತು ಅನೇಕರು ಕೃಷಿ ಕೆಲಸಗಳಿಗಾಗಿ ತಮ್ಮ ಹೊಲಗಳಿಗೆ ಹೋಗಲು ನ ಭಯ ಪಡುತ್ತಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮೂಲಗಳು ತಿಳಿಸಿವೆ.
ಆನೆ ಕಾರ್ಯಪಡೆ ಸಮಿತಿ, ಎಲೆಕ್ಟ್ರಾನಿಕ್ ಸೈನ್‌ಬೋರ್ಡ್‌ಗಳು ಮತ್ತು ಅರಣ್ಯ ಅಧಿಕಾರಿಗಳ ಆನೆಗಳ ಚಲನವಲನದ ಬಗ್ಗೆ ಮಾಹಿತಿಯು ಈ ಪ್ರದೇಶದಲ್ಲಿ ಆನೆಗಳ ಹಾವಳಿಯನ್ನು ನಿಗ್ರಹಿಸುವಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ.
ಏತನ್ಮಧ್ಯೆ, ಸಕಲೇಶಪುರ ತಾಲ್ಲೂಕಿನ ಕೆರೋಡಿ ಗ್ರಾಮಸ್ಥರು ಇತ್ತೀಚೆಗೆ ಹಾಡಹಗಲೇ ಗ್ರಾಮಕ್ಕೆ ಆನೆಯೊಂದು ಪ್ರವೇಶಿಸಿದ ನಂತರ ಭಯಭೀತರಾಗಿದ್ದಾರೆ. ಆನೆಗಳ ಹಾವಳಿ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
Advertisement