2019ರ ಆಡಿಯೋ ಲೀಕ್ ಪ್ರಕರಣ: IPS ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ನೋಟಿಸ್ ಗೆ CAT ತಡೆ!

ಮಾಹಿತಿ ಹಕ್ಕು ಕಾಯಿದೆಯಡಿ ರಾಜ್ಯ ಸರ್ಕಾರವು 2024 ರ ಮೇ 6 ರಂದು ನೀಡಿದ ಉತ್ತರದ ಪ್ರಕಾರ ಇಲಾಖಾ ತನಿಖೆಯನ್ನು ಈಗಾಗಲೇ ಕೈಬಿಡಲಾಗಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಕೂಡ ಈ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸಿದೆ.
Alok Kumar
ಅಲೋಕ್ ಕುಮಾರ್
Updated on

ಬೆಂಗಳೂರು: 2019ರ ಆಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಿ ಮುಖ್ಯ ಕಾರ್ಯದರ್ಶಿ ನೀಡಿದ್ದ ನೋಟಿಸ್‌ಗೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (CAT) ತಡೆ ನೀಡಿದೆ.

ಮಾಹಿತಿ ಹಕ್ಕು ಕಾಯಿದೆಯಡಿ ರಾಜ್ಯ ಸರ್ಕಾರವು 2024 ರ ಮೇ 6 ರಂದು ನೀಡಿದ ಉತ್ತರದ ಪ್ರಕಾರ ಇಲಾಖಾ ತನಿಖೆಯನ್ನು ಈಗಾಗಲೇ ಕೈಬಿಡಲಾಗಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಕೂಡ ಈ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸಿದೆ. ಆಡಿಯೋ ಲೀಕ್ ಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸಿಬಿಐ ನಿರ್ಣಾಯಕವಾಗಿ ದೃಢಪಡಿಸಿದೆ ಎಂದು ಅಲೋಕ್ ಕುಮಾರ್ ವಾದಿಸಿದ್ದಾರೆ.

ಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಲು ಇಲಾಖಾ ಬಡ್ತಿ ಸಮಿತಿ ತನ್ನ ಹೆಸರನ್ನು ಅಂತಿಮಗೊಳಿಸಬೇಕಾಗಿದ್ದ ಕೆಲ ದಿನಗಳ ಮುನ್ನಾ 1969ರ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮ 8(4)ರ ಅಡಿಯಲ್ಲಿ 2025ರ ಮೇ 9ರಂದು ಅಧಿಸೂಚನೆ ಹೊರಡಿಸಲಾಗಿದೆ.

ಡಿಜಿ ಮತ್ತು ಐಜಿಪಿ ಹುದ್ದೆಗೆ ಪರಿಗಣಿಸಲು ಕೇಂದ್ರ ಲೋಕಸೇವಾ ಆಯೋಗಕ್ಕೆ ರವಾನಿಸಲು ಏಪ್ರಿಲ್ 23, 2025 ರಂದು ನನ್ನ ವಿವರಗಳನ್ನು ತೆಗೆದುಕೊಂಡ ನಂತರ ಈ ನೋಟಿಸ್ ನೀಡಲಾಗಿದೆ ಎಂದು ಅಲೋಕ್ ಕುಮಾರ್ ಆರೋಪಿಸಿದ್ದಾರೆ.

ಇದೇ ಆರೋಪದ ಮೇಲೆ ಹಿಂದೆ ಇಲಾಖಾ ವಿಚಾರಣೆಯನ್ನು ಆರಂಭಿಸಲಾಗಿತ್ತು. ಆದರೆ ಯಾವುದೇ ಅಂತಿಮ ಕೈಗೊಂಡಿರಲಿಲ್ಲ. ಮೇ 21ರಿಂದ ಅನ್ವಯವಾಗುವಂತೆ ಅವರಿಗೆ ಮುಂಬಡ್ತಿ ನೀಡಬೇಕಾಗಿತ್ತು. ಇದಕ್ಕೆ ತಡೆ ಉಂಟು ಮಾಡುವ ದುರುದ್ದೇಶದಿಂದ ನೋಟಿಸ್ ನೀಡಲಾಗಿದೆ ಎಂದು ಕುಮಾರ್ ಪರ ವಕೀಲರು ಸಿಎಟಿ ಮುಂದೆ ವಾದಿಸಿದರು.

Alok Kumar
ಸಹೋದ್ಯೋಗಿಗಳಿಗೆ ನೂತನ ಡಿಜಿ-ಐಜಿಪಿ ಸಲೀಂ ಪತ್ರ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಕರೆ

ವಿಭಾಗೀಯ ಪೀಠ ಈ ವಿಚಾರವನ್ನು ಆಲಿಸಬೇಕು ಎಂದು ಪರಿಗಣಿಸಿದ ಸಿಎಟಿ ನ್ಯಾಯಾಂಗ ಸದಸ್ಯ ಬಿ.ಕೆ.ಶ್ರೀವಾಸ್ತವ ಅವರು, ಮುಂದಿನ ವಿಚಾರಣೆಯ ದಿನಾಂಕವಾದ ಜೂನ್ 10 ರವರೆಗೆ ಅಧಿಸೂಚನೆಯನ್ನು ತಡೆಹಿಡಿಯಲಾಗಿದೆ ಎಂದು ಆದೇಶಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com