Representational image
ಸಾಂದರ್ಭಿಕ ಚಿತ್ರ

ರಾಮನಗರ: ಸರ್ಕಾರದ ಇ-ಸ್ವತ್ತು ಸಾಫ್ಟ್‌ವೇರ್ ಹ್ಯಾಕ್ ಮಾಡಿ ದಾಖಲೆಗಳ ತಿದ್ದುಪಡಿ; ಮೂವರ ಬಂಧನ

ಈ ಹಿಂದೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡಿದ್ದ ಶರತ್‌ಗೆ ಇ-ಸ್ವತು ಸಾಫ್ಟ್‌ವೇರ್‌ನಲ್ಲಿರುವ ಲೋಪದೋಷಗಳ ಬಗ್ಗೆ ತಿಳಿದಿತ್ತು.
Published on

ರಾಮನಗರ: ಸರ್ಕಾರದ ಇ-ಸ್ವತು ಸಾಫ್ಟ್‌ವೇರ್ ಹ್ಯಾಕ್ ಮಾಡಿ ದಾಖಲೆಗಳನ್ನು ತಿರುಚಿದ ಸಂಬಂಧ ರಾಮನಗರ ಸಿಇಎನ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಆರೋಪಿ ಶರತ್ (30), ಮಾಗಡಿ ತಾಲ್ಲೂಕಿನ ನರಸಂದ್ರ ಗ್ರಾಮ ಪಂಚಾಯತ್‌ನ ಮಾಜಿ ಗುತ್ತಿಗೆ ಉದ್ಯೋಗಿಯಾಗಿದ್ದು, ಹ್ಯಾಕಿಂಗ್‌ನ ಹಿಂದಿನ ಮಾಸ್ಟರ್‌ಮೈಂಡ್ ಆಗಿದ್ದಾನೆ. ಆತನ ಸಹಚರರಾದ ನದೀಮ್ (38) ಮತ್ತು ದೀಪಕ್ (27) ಎಂಬಾತನನ್ನು ಬಂಧಿಸಿದ್ದಾರೆ.

ಈ ಹಿಂದೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡಿದ್ದ ಶರತ್‌ಗೆ ಇ-ಸ್ವತು ಸಾಫ್ಟ್‌ವೇರ್‌ನಲ್ಲಿರುವ ಲೋಪದೋಷಗಳ ಬಗ್ಗೆ ತಿಳಿದಿತ್ತು. ಪಂಚಾಯತ್ ಕಚೇರಿಯಲ್ಲಿ ಕಂಪ್ಯೂಟರ್ ರಿಪೇರಿ ಮಾಡುತ್ತಿದ್ದ ನದೀಮ್ ಮತ್ತು ದೀಪಕ್ ಸಾಫ್ಟ್‌ವೇರ್ ಅನ್ನು ಹ್ಯಾಕ್ ಮಾಡಿದ್ದಾರೆ.

ಈ ಮೂವರು ರಾಮನಗರ, ಬೆಂಗಳೂರು, ಹಾಸನ ಮತ್ತು ತುಮಕೂರು ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳ ಅಡಿಯಲ್ಲಿರುವ ಆಸ್ತಿಗಳ ದಾಖಲೆಗಳನ್ನು ಮಾರ್ಪಡಿಸಿದರು, ಸಾಫ್ಟ್‌ವೇರ್‌ನಲ್ಲಿನ ಅಕ್ರಮ ಸೇವೆಗಳಿಗೆ ಪ್ರತಿಯಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿದರು.

Representational image
Kaveri 2.0: ಕಂದಾಯ ಇಲಾಖೆ ಸಾಫ್ಟ್​ವೇರ್ ಹ್ಯಾಕ್; FIR ದಾಖಲು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ- ಸರ್ಕಾರ

ಖಾತೆಗೆ ಯೋಗ್ಯವಲ್ಲದ ದಾಖಲೆಗಳು, ಖಾತೆ ಬದಲಾವಣೆ, ನಕಾಶೆ, ಚೆಕ್ ಬಂಧಿಗಳ ಅಕ್ರಮ ತಿದ್ದುಪಡಿ ಮಾಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ಖದೀಮರ ಬಳಿ ವ್ಯಕ್ತಿಯೋರ್ವ ಅಕ್ರಮ ತಿದ್ದುಪಡಿ ಮಾಡಿಸಿ ಬಳಿಕ ಸಕ್ರಮಕ್ಕಾಗಿ ಗ್ರಾ.ಪಂಗೆ ಅರ್ಜಿ ಸಲ್ಲಿಸಿದ್ದ. ಈ ವೇಳೆ ಇ ಸ್ವತ್ತು ಖಾತೆ ಗಮನಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಾಫ್ಟ್‌ವೇರ್ ಹ್ಯಾಕ್ ಮಾಡಿ ದಾಖಲಾತಿಗಳ ತಿದ್ದುಪಡಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಗ್ಯಾಂಗ್ ಖಾತೆ ವರ್ಗಾವಣೆಗಳು, ನಕ್ಷೆ ಬದಲಾವಣೆಗಳು, ಚಕ್ಬಂದಿ (ಭೂ ಕ್ರೋಢೀಕರಣ) ನೋಂದಣಿಗಳು ಮತ್ತು ಆಸ್ತಿ ವರ್ಗಾವಣೆಯಂತಹ ಸುಮಾರು 500 ದಾಖಲೆಗಳನ್ನು ಅಕ್ರಮವಾಗಿ ಮಾರ್ಪಡಿಸಿದೆ. ಅವರು ವಿಶೇಷವಾಗಿ ಬ್ಯಾಂಕ್ ಸಾಲಗಳನ್ನು ಪಡೆಯಲು ಅಗತ್ಯವಾದ ದಾಖಲೆಗಳನ್ನು ಬದಲಾಯಿಸಿದರು. ಸಾರ್ವಜನಿಕರಿಂದ ಹಣವನ್ನು ಪಡೆಯಲು ಇದನ್ನು ಬಳಸಿಕೊಂಡರು.

ದಾಖಲೆಗಳನ್ನು ತಿದ್ದಲು ಶರತ್‌ಗೆ ಹಣ ನೀಡಿದ್ದ ವ್ಯಕ್ತಿಯೊಬ್ಬರು ನಂತರ ಅಧಿಕೃತ ತಿದ್ದುಪಡಿಗಾಗಿ ಗ್ರಾಮ ಪಂಚಾಯತ್ ಸಂಪರ್ಕಿಸಿದ ನಂತರ ಹ್ಯಾಕಿಂಗ್ ಮಾಡಿರುವುದು ಬೆಳಕಿಗೆ ಬಂದಿತು. ಪರಿಶೀಲಿಸಿದ ನಂತರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅಕ್ರಮಗಳನ್ನು ಕಂಡುಕೊಂಡರು ಮತ್ತು ಸಿಇಎನ್ ಪೊಲೀಸರಿಗೆ ದೂರು ನೀಡಿದರು

X
Open in App

Advertisement

X
Kannada Prabha
www.kannadaprabha.com