
ತುಮಕೂರು: ಹೆಚ್ಚಿನ ವೃತ್ತಿಪರ ಪ್ರತಿಭಾವಂತರನ್ನು ಹೊಂದಿರುವ ತುಮಕೂರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ ಮತ್ತು ಬಿಟಿ ಕಂಪನಿಗಳಿಗೆ ನೆಲೆಯಾಗಲು ಸಜ್ಜಾಗುತ್ತಿದೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯಸ್ಥ ಸಂಜೀವ್ ಕುಮಾರ್ ಗುಪ್ತಾ ಅವರು ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿದಿನ ಸುಮಾರು 5,000 ವೃತ್ತಿಪರರು ಕೆಲಸಕ್ಕಾಗಿ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವುದನ್ನು ಗುರುತಿಸಿದ್ದಾರೆ. ಈ ಮಾಹಿತಿಯಿಂದ ತುಮಕೂರಿನಲ್ಲಿ ನೆಲೆ ಒದಗಿಸಲು ಕಂಪನಿಗಳಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.
ಎರಡನೇ ಹಂತದ ನಗರಗಳಲ್ಲಿ ಕಂಪನಿಗಳನ್ನು ಸ್ಥಾಪಿಸಿದರೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುವುದು ಎಂದು ಐಟಿ ಮತ್ತು ಬಿಟಿ ಕಾರ್ಯದರ್ಶಿ ಡಾ. ಏಕ್ ರೂಪ್ ಕೌರ್ ಮತ್ತು ನಿರ್ದೇಶಕ ರಾಹುಲ್ ಎಸ್ ಸಂಕನೂರ್ ಅವರು ಕಂಪನಿಗಳಿಗೆ ಮನವರಿಕೆ ಮಾಡುತ್ತಿದ್ದಾರೆ.
ವಾಸ್ತವವಾಗಿ,ಇಲಾಖೆಯು ಮೈಸೂರು ಮತ್ತು ದಕ್ಷಿಣ ಕನ್ನಡದ ಕಂಪನಿಗಳ ಕ್ಲಸ್ಟರ್‌ಗಳಿಗೆ ಯೋಜನೆಯನ್ನು ರೂಪಿಸಿದೆ ಆದರೆ ಬೆಂಗಳೂರಿಗೆ ಹತ್ತಿರದಲ್ಲಿರುವ ತುಮಕೂರು ಅವಕಾಶ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಪ್ರತಿ ವರ್ಷ ಸಾವಿರಾರು ಪದವೀಧರರನ್ನು ಹೊರಗೆ ತರುವ ಏಳು ಎಂಜಿನಿಯರಿಂಗ್ ಕಾಲೇಜುಗಳೊಂದಿಗೆ ಸಾಕಷ್ಟು ಪ್ರತಿಭೆಗಳು ಇಲ್ಲಿದ್ದಾರೆ. ನಗರದಲ್ಲಿ 30,000 ಚದರ ಅಡಿ ವಿಸ್ತೀರ್ಣದ ಜಾಗದ ಆಫರ್ ನೊಂದಿಗೆ 150 ಕಂಪನಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.
ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಐಟಿ ಮತ್ತು ಬಿಟಿ ಕಂಪನಿಗಳಿಗೆ 100 ಎಕರೆ ಜಮೀನು ಮೀಸಲಿಟ್ಟಿದ್ದೇವೆ ಆದರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಆದ್ದರಿಂದ ನಾವು ನಗರದಲ್ಲಿ ಜಾಗವನ್ನು ನೀಡಲು ಯೋಜಿಸಿದ್ದೇವೆ. ಬೆಂಗಳೂರಿಗೆ ಹೋಲಿಸಿದರೆ ಜಾಗಗಳ ಬಾಡಿಗೆಯು ಅವರಿಗೆ ತುಂಬಾ ಹೆಚ್ಚಿಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿಗೆ ಪ್ರಯಾಣಿಸುವ ತುಮಕೂರು ಮೂಲದ IT/BT ವೃತ್ತಿಪರರು ತಮ್ಮ ಕಂಪನಿಗಳು ಮತ್ತು ಪ್ರಯಾಣದ ಮಾಹಿತಿಯನ್ನು ನೋಂದಾಯಿಸಲು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಜಿಲ್ಲಾಧಿಕಾರಿ ಕೇಳಿಕೊಂಡಿದ್ದಾರೆ. ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ತುಮಕೂರಿನಲ್ಲಿ ಪದವೀಧರರ ಕೌಶಲ್ಯವನ್ನು ಬಳಸಿಕೊಳ್ಳಲು ಇಲಾಖೆಯು ಇನ್ಕ್ಯುಬೇಶನ್ ಸೆಂಟರ್ ಅನ್ನು ಸ್ಥಾಪಿಸುತ್ತಿದೆ ಎಂದು ತಿಳಿಸಿದ್ದಾರೆ.
Advertisement